ಕಮಲ-ದಳ ಮೈತ್ರಿಗೆ ಶಾಕ್‌ ನೀಡಿದ ಎಸ್‌ ಟಿ ಸೋಮಶೇಖರ್‌; ಕಾಂಗ್ರೆಸ್‌ ಅಭ್ಯರ್ಥಿ ಪರ ಬಹಿರಂಗ ಪ್ರಚಾರ

ಬೆಂಗಳೂರು, ಫೆಬ್ರವರಿ 13: ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿ ನಾಯಕರಿಂದ ಹಾಗೂ ಪಕ್ಷದಿಂದ ಅಂತರವನ್ನ ಕಾಯ್ದುಕೊಂಡಿರುವ ಎಸ್‌ ಟಿ ಸೋಮಶೇಖರ್‌ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಜೊತೆಗೆ ಸಂಪರ್ಕದಲ್ಲಿದ್ದಾರೆ ಎನ್ನುವ ಸುದ್ದಿ ವರದಿಯಾಗಿತ್ತು. ಆದರೆ, ಇದೀಗ ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಬಹಿರಂಗವಾಗಿಯೇ ಪ್ರಚಾರ ನಡೆಸಿದ್ದಾರೆ.

ಹೌದು, . ಸೋಮಶೇಖರ್ ಅವರು ಬೆಂಗಳೂರು ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಪ್ರಚಾರ ಮಾಡಿದ್ದಾರೆ. ಸೋಮವಾರದಂದು ಶಾಸಕರ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಪುಟ್ಟಣ್ಣ ಪರವಾಗಿ ಮತ ಯಾಚಿಸಿದರು. ಆಡಳಿತ ರೂಢ ಕಾಂಗ್ರೆಸ್‌ ಬೆಂಗಳೂರು ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಪುಟ್ಟಣ್ಣ ಅವರನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಇದೀಗ ಕಾಂಗ್ರೆಸ್‌ ಭರ್ಜರಿ ಪ್ರಚಾರ ಕಾರ್ಯವನ್ನ ನಡೆಸಿದ್ರೆ ಇತ್ತ ಬಿಜೆಪಿ ಶಾಸಕರಾದ ಎಸ್‌ ಟಿ ಸೋಮಶೇಖರ್‌ ಸಹ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ.

BJP MLA ST Somashekar Campaign For Congress Candidate In Bangalore Teachers Constituency By Poll

ಇನ್ನೂ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಬಹಿರಂಗವಾಗಿಯೇ ಮಾಡುವ ಮೂಲಕ ಮಾಜಿ ಸಚಿವ ಎಸ್‌ಟಿ ಸೋಮಶೇಖರ್‌ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನೂ ಸೋಮವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಗೆ ಗೈರಾಗಿ ಪ್ರಚಾರವನ್ನ ನಡೆಸಿದ್ದಾರೆ. ಇನ್ನೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಿಕ್ಷಕರ ಜೊತೆ ಸೋಮವಾರ ಎಸ್‌ಟಿ ಸೋಮಶೇಖರ್ ಸಭೆ ನಡೆಸಿದ್ದರು. ಈ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣಗೆ ಮತ ನೀಡುವಂತೆ ಪ್ರಚಾರ ಮಾಡಿದ್ದಾರೆ.

ಇತ್ತ ಲೋಕಸಭಾ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿದೆ. ಇತ್ತ ವಿಧಾನ ಪರಿಷತ್‌ ಚುನಾವಣೆಗೆ ಜೆಡಿಎಸ್‌ ನಾಯಕರಾದ ಎಪಿ ರಂಗನಾಥ್‌ ಅವರು ಸ್ಪರ್ಧಿಸಿದ್ದು, ಅವರ ವಿರುದ್ಧ ಸ್ವತಃ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್‌ ಪ್ರಚಾರ ನಡೆಸಿದ್ದಾರೆ. ಇದು ಮೈತ್ರಿಯಲ್ಲಿ ಗೊಂದಲ ಮೂಡಿಸುವ ಸಾಧ್ಯತೆ ಇದೆ.

ಈಗಾಗಲೇ ಸೋಮವಾರದಿಂದ ವಿಧಾನಸಭಾ ಅಧಿವೇಶನ ಪ್ರಾರಂಭ ಆಗಿದೆ. ಇತ್ತ ವಿಧಾನಸಭೆಗೆ ಆಗಮಿಸಿದ ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು. ಆದರೆ, ಎಸ್‌ಟಿ ಸೋಮಶೇಖರ್‌ ಮಾತ್ರ ಕೇಸರಿ ಶಾಲು ಹಾಕಿಕೊಂಡು ಬರದೇ ಬಿಜೆಪಿ ಶಾಸಕರಿಗಿಂತ ಭಿನ್ನವಾಗಿ ಕಂಡಿದ್ದರು. ಇನ್ನೂ ಕಳೆದ ಸದನದಲ್ಲೂ ಸಹ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರೆಲ್ಲಾರೂ ಸಭಾ ತ್ಯಾಗ ಮಾಡಿದ್ರು, ಆದರೆ, ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕರಾದ ಎಸ್‌ ಟಿ ಸೋಮಶೇಖರ್‌ ಸಭಾತ್ಯಾಗ ಮಾಡಿದೆ, ಸದನದಲ್ಲಿ ಕುಳಿತುಕೊಳ್ಳುವ ಮೂಲಕ ಬಿಜೆಪಿ ನಾಯಕರಿಗೆ ಮುಜುಗರವನ್ನುಂಟು ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+