Munirathna Escape Plan: ಪೊಲೀಸರಿಂದ ಎಸ್ಕೇಪ್‌ಗೆ ಮುನಿ"ರತ್ನ" ಮಾಡಿದ್ದ ಖತರ್ನಾಕ್ ಪ್ಲಾನ್
ಜಾತಿ ನಿಂದನೆ, ಲಂಚಕ್ಕೆ ಬೇಡಿಕೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಿಜೆಪಿ ಶಾಸಕ ಮುನಿರತ್ನ ಬಂಧನವಾಗಿದೆ. ಬಂಧನಕ್ಕೂ ಮುಂಚೆ ಶಾಸಕ ಮುನಿರತ್ನ ಪೊಲೀಸರಿಂದ ಎಸ್ಕೇಪ್ ಆಗಲು ಮಾಡಿದ್ದ ಪ್ಲಾನ್‌ಗಳು ಈ ಬಹಿರಂಗವಾಗಿದೆ. ಮುನಿರತ್ನ ಎಸ್ಕೇಪ್ ಪ್ಲಾನ್ ಅನ್ನು ಪೊಲೀಸರೇ ಬಹಿರಂಗಪಡಿಸಿದ್ದು, ಆ ಪ್ಲಾನ್‌ಗಳು ಅಚ್ಚರಿ ಮೂಡಿಸುವಂತೆ ಮಾಡಿದೆ. ಶನಿವಾರ ಸಂಜೆಯ ವೇಳೆಗೆ ಮುನಿರತ್ನ ಬಂಧನವಾಗಿದೆ. ಶನಿವಾರ ಬೆಳಿಗ್ಗೆಯಿಂದ ಅವರು ಎಸ್ಕೇಪ್‌ಗೆ ಪ್ಲಾನ್ ಮಾಡಿದ್ದರು. ಅದು ಹೇಗೆಲ್ಲ ಇತ್ತು ಎಂದು ಪೊಲೀಸರೇ ಬಹಿರಂಗಪಡಿಸಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ, ನಿರ್ಮಾಪಕ ಹಾಗೂ ಪ್ರಭಾವಿ ರಾಜಕಾರಣಿಯಾಗಿರುವ ಮುನಿರತ್ನ ಅವರದ್ದು ಎನ್ನುವ ವಿಡಿಯೋ ಶನಿವಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮುನಿರತ್ನ ಅವರು ಎಸ್ಕೇಪ್ ಪ್ಲಾನ್ ಮಾಡಿದ್ದಾರೆ. ಆ ಖತರ್ನಾಕ್ ಮಾಸ್ಟರ್ ಪ್ಲಾನ್‌ಗಳು ಈಗ ಬೆಳಕಿಗೆ ಬಂದಿದೆ.

ಪೊಲೀಸರಿಂದ ಎಸ್ಕೇಪ್‌ಗೆ ಬೇಸಿಕ್ ಸೆಟ್ ಬಳಕೆ
ಶಾಸಕ ಮುನಿರತ್ನ ಪೊಲೀಸರಿಂದ ಎಸ್ಕೇಪ್ ಆಗುವುದಕ್ಕೆ ಬೇಸಿಕ್ ಮೊಬೈಲ್ ಸೆಟ್ ಬಳಸಿದ್ದಾರೆ ಎಂದು ಪೊಲೀಸರೇ ಹೇಳಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಶನಿವಾರ ಪೊಲೀಸರು ಫೀಲ್ಡ್‌ಗೆ ಇಳಿದಿದ್ದರು. ಮುನಿರತ್ನ ಪತ್ತೆ ಮಾಡುವುದಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ, ಮುನಿರತ್ನ ಪೋನ್ ಸ್ವೀಚ್ ಆಫ್ ಆಗಿತ್ತು. ಆದರೂ ಪೊಲೀಸರು ಲೊಕೇಶನ್ ಟ್ರೆಸ್ ಮಾಡುವುದನ್ನು ಮುಂದುವರಿಸಿದ್ದರು. ಪೊಲೀಸರಿಗೆ ಮಾಹಿತಿ ಸಿಗಬಾರದು ಎನ್ನುವ ಉದ್ದೇಶಕ್ಕೆ ಮುನಿರತ್ನ ಬೇಸಿಕ್ ಮೊಬೈಲ್ ಪೋನ್ ಬಳಸಿದ್ದಾರೆ. ಅವರನ್ನು ಬಂಧಿಸುವಾಗ ಅವರ ಕೈಯಲ್ಲಿ ಬೈಸಿಕ್ ಮೊಬೈಲ್ ಪೋನ್ ಇರುವ ವಿಡಿಯೋ ಮತ್ತು ಚಿತ್ರ ಇದೀಗ ವೈರಲ್ ಆಗಿದೆ. ನೋಡಿ ನೋಡಿ ಕೋಟಿ ಕೋಟಿ ಇದ್ದರೂ, ಮುನಿಯಣ್ಣನ ಕೈಯಲ್ಲಿ ಇರೋದು ಬೇಸಿಕ್ ಸೆಟ್ ಗೊತ್ತಾಯ್ತಾ ಅಂತ ಜನ ಟ್ರೋಲ್ ಮಾಡುತ್ತಿದ್ದಾರೆ.
ಕೋಲಾರ ಪ್ರಭಾವ ಬಳಕೆ
ಮುನಿರತ್ನ ಅವರಿಗೆ ಕೋಲಾರದಲ್ಲಿ ಪ್ರಮುಖರ ಪರಿಚಯ ಹಾಗೂ ಪ್ರಭಾವ ಇದೆ. ಈ ಜಿಲ್ಲೆಯಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಮುನಿರತ್ನ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದರು. ಆ ಪ್ರಭಾವವನ್ನು ಶನಿವಾರ ಬಳಸಿಕೊಂಡಿದ್ದಾರೆ. ಕೋಲಾರದ ತೋಟವೊಂದರಲ್ಲಿ ಅವರು ಶನಿವಾರ ಬೆಳಿಗ್ಗೆಯಿಂದ ಆಶ್ರಯ ಪಡೆದಿದ್ದರು ಎಂದು ವರದಿಯಾಗಿದೆ. ಇಲ್ಲಿಂದ ಮುನಿರತ್ನ ಆಂಧ್ರಗೆ ಜಂಪ್ ಆಗುವುದಕ್ಕೆ ಪ್ಲಾನ್ ಮಾಡಿದ್ದರು ಎನ್ನಲಾಗುತ್ತಿದೆ. ಪೊಲೀಸರು ಸಹ ಚೇಸಿಂಗ್ ಜಂಪಿಂಗ್ ಮಾಡಿ ಮುನಿರತ್ನ ಅವರನ್ನು ಪೊಲೀಸ್ ಬಲೆಗೆ ಬೀಳಿಸಿದ್ದಾರೆ. ಮುನಿರತ್ನ ಅವರು ಆಂಧ್ರದಲ್ಲೂ ತಮ್ಮ ಪ್ರಭಾವ ಬಳಸಿ ಆಶ್ರಯ ಪಡೆಯುವುದಕ್ಕೆ ಸಿದ್ಧತೆ ನಡೆಸಿರುವ ಬಗ್ಗೆ ಅನುಮಾನ ಶುರುವಾಗಿದೆ. ಮುನಿರತ್ನ ಒಂದೊಮ್ಮೆ ತಪ್ಪು ಮಾಡಿಲ್ಲ ಎಂದಾದರೆ, ಈ ಎಸ್ಕೇಪಿಂಗ್ ಪ್ಲಾನ್ ಎಲ್ಲ ಯಾಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಡಿಯೋ ವೈರಲ್
ಇನ್ನು ಮುನಿರತ್ನ ಅವರದ್ದು ಎನ್ನಲಾಗಿರುವ ಅಶ್ಲೀಲ ಆಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರು ಕೇಳುವಂತಿಲ್ಲ. ಅಷ್ಟೊಂದು ಕೆಟ್ಟದಾಗಿದೆ ಆಡಿಯೋ. ಇನ್ನು ಈ ವಿಡಿಯೋವನ್ನು ಕೆಲವರು ಶೇರ್ ಮಾಡಿದ್ದು, ಸಾರ್ವಜನಿಕ ಜೀವನದಲ್ಲಿ ಇರುವವರು ಇಷ್ಟೊಂದು ಕೆಟ್ಟದಾಗಿ ವರ್ತಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವರು ಈ ವಿಡಿಯೋ ಮುನಿರತ್ನ ಅವರ ವ್ಯಕ್ತಿತ್ವವನ್ನು ತೋರಿಸುತ್ತೆ ಎಂದು ಹೇಳಿದ್ದಾರೆ.












Click it and Unblock the Notifications