ಚುನಾವಣೆಯಲ್ಲಿ ಗೆಲ್ಲಲು ಗ್ಯಾರಂಟಿ ಯೋಜನೆ ನೀಡಿದ್ರಾ?: ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಬಿಜೆಪಿ ಶಾಸಕ

ಹುಬ್ಬಳ್ಳಿ, ಜೂನ್‌ 21: ಗ್ಯಾರೆಂಟಿ ಯೋಜನೆ ಬಂದ್ ಮಾಡಿ ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ನಾವೇನು ಗ್ಯಾರೆಂಟಿ ಯೋಜನೆಗಳ ವಿರೋಧಿಗಳಲ್ಲ, ಆದರೆ ಕೊಡಬೇಕಾದ್ರೆ ವಿವೇಚನೆ ಇರ್ಬೇಕಿತ್ತು ಆದರಿಂದ ಲೋಕಸಭಾ ಚುನಾವಣೆ ಲಾಭ ಆಗಿಲ್ಲ ಅಂತಾರೆ. ಹಾಗಾದ್ರೆ ಚುನಾವಣೆಗೋಸ್ಕರ ಗ್ಯಾರೆಂಟಿ ಮಾಡಿದ್ರಾ? ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಕಿಡಿಕಾರಿದ್ದಾರೆ.

ಶುಕ್ರವಾರ ಮಾಧ್ಯಮಗಳ ಜೊತೆಗೆ ಬಿಜೆಪಿ ಶಾಸಕ ಮಹೇಶ್‌ ಟೆಂಗಿನಕಾಯಿ ಅವರು ಮಾತನಾಡಿ, ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ, ಇದಕ್ಕೆ ಪರಿಹಾರ ಕಂಡು ಹಿಡಿಬೇಕು. ಇಲ್ಲವಾದ್ರೆ ನಮ್ಮ ಪಕ್ಷ ಹೋರಾಟ ಮಾಡೇ ಮಾಡುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

BJP MLA Mahesh Tenginakai Fierce Attack Against Siddaramaiah

ಬಿಜೆಪಿ ಗೆದ್ದಷ್ಟು ಸೀಟ್ ಗಳನ್ನು ಇಡೀ ಇಂಡಿಯಾ ಒಕ್ಕೂಟ ಗೆದ್ದಿಲ್ಲ. ಕಿಚಡಿ ಅಂದ್ರೆ ಎಲ್ಲಾ ಮಿಕ್ಸ್ ಮಾಡೋದಕ್ಕೆ ಅಂತಾರೆ, ಕಿಚಡಿ ಇರೋರು ಇವರೇ, ಅದನ್ನ ಬೇರೆಯವರ ಮೇಲೆ ಹಾಕೋಕೆ ಹೊರಟಿದ್ದು, ಇಂಡಿಯಾ 230 ದಾಟದೇನೆ ಸರ್ಕಾರ ಮಾಡೋಕೆ ಹೊರಟಿದ್ರು. ಹೊಸ ಹೊಸ ಅಂಗಿ, ಚೋಣ್ಣ ಹೊಲಸಿಕೊಂಡು ಹೊಸ ಸರ್ಕಾರ ಮಾಡೋ ಹಗಲುಗನಸು ಕಾಣ್ತಾ ಇದ್ದರು. ಅವರಿಗೆ ಕಳೆದ 10 ವರ್ಷದಿಂದ ಅಧಿಕಾರ ಇಲ್ಲದೆ ತಳಮಳ ಆಗಿದೆ. ಮುಂದಿನ 10 ವರ್ಷ ಕೂಡ ಅವರಿಗೆ ಅಧಿಕಾರ ಸಿಗಲ್ಲ ಎಂದು ಹೇಳಿದರು.

ನೀಟ್ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಯಾವುದೇ ಕಾರಣಕ್ಕೋ ಆಗಿಲ್ಲ. ಜನರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಾ ಇದ್ದಾರೆ,ಜನರ ದಿಕ್ಕು ತಪ್ಪಿಸುವ ಕೆಲಸವನ್ನ ರಾಜ್ಯ ಸರ್ಕಾರದವರು ಹಾಗೂ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದರು.

ನೀಟ್ ಪರೀಕ್ಷೆಯಲ್ಲಿ ಅನ್ಯಾಯ ಯಾಕೆ ಆಗುತ್ತೆ? ಇಲ್ಲಿಯವರೆ ಎಷ್ಟೋ ಜನ ಒಳ್ಳೆ ರ್ಯಾಂಕ್ ಪಡೆದಿದ್ದಾರೆ. ಅಂತಹ ಗೊಂದಲ ಯಾವುದೇ ಆಗಿಲ್ಲ, ಸರ್ಕಾರಕ್ಕೆ ಯಾವುದೇ ಅಜೆಂಡಾ ಇಲ್ಲ. ಪ್ರಧಾನ ಮಂತ್ರಿ ಒಳ್ಳೆಯ ಆಡಳಿತ ಕೊಡ್ತಾ ಇದ್ದಾರೆ. ಈ ಕಾಂಗ್ರೆಸ್ ನವರಿಗೆ ಮಾತಾಡೋಕೆ ವಿಷಯಗಳಿಲ್ಲದೆ ಕಾಂಗ್ರೆಸ್ ನವರು ಈ ರೀತಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಮರ್ಥನೆ ಕುರಿತು ಮಾತನಾಡಿದ ಅವರು, ಒಂದು ಜೇಬಿನಿಂದ ತಗೊಂಡು, ಎರಡು ಜಬಿಗೆ ಕತ್ತರಿ ಹಾಕುವ ಕೆಲಸ ಮುಖ್ಯಮಂತ್ರಿ ಮಾಡ್ತಾ ಇದ್ದಾರೆ ಅಬಕಾರಿ, ಪೆಟ್ರೋಲ್, ಡೀಸೆಲ್ ಸೇರಿ ಎಲ್ಲದರ ಮೇಲೂ ಬೆಲೆ ಏರಿಕೆ ಮಾಡ್ತಾ ಇದ್ದೀರಿ. ಒಂದೂ ವರ್ಷದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಬೆಲೆ ಏರಿಕೆ ಮಾಡಿದೆ. ಹಣಕಾಸಿನ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಅದಕ್ಕಾಗಿ ಈ ರೀತಿ ಹೇಳಿಕೆ ಕೊಡ್ತಾ ಇದ್ದಾರೆ ತಕ್ಷಣ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ನಮ್ಮ ಸರ್ಕಾರ ಇದ್ದಾಗ ನಾವು ಯಾವುದೇ ಬೆಲೆ ಏರಿಸಲಿಲ್ಲ. ನಾವು ಒಳ್ಳೆ ಆಡಳಿತ ಕೊಟ್ಟಿದ್ವಿ. ಆದ್ರೆ, ಈಗ ವಿನಾಕಾರಣ ರಾಜ್ಯದ ಜನತೆ ಮೇಲೆ ಹೊರೆ ಹೇರಲಾಗುತ್ತಿದೆ. ನಾವು ನಿರಂತರವಾಗಿ ಹೋರಾಟ ಮಾಡ್ತೇವೆ‌ ಈಗ ವಾಲ್ಮೀಕಿ ನಿಗಮದ ಹಗರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರೆ ಮಾಚುತ್ತಿದ್ದಾರೆ. ಅದರ ಸತ್ಯಾಸತ್ಯತೆ ಹೊರ ತರುವ ಕೆಲಸ ಮುಖ್ಯಮಂತ್ರಿಗಳು ಮಾಡಬೇಕು. ಮುಖ್ಯಮಂತ್ರಿ ಮೂಗಿನ ಕೆಳಗೆ ಆಗಿರುವ ಹಗರಣ ಇದು ಅದನ್ನ ಬಿಟ್ಟು ಬೇರೆ ವಿಷಯಗಳ ಬಗ್ಗೆ ಮಾತಾಡ್ತಾರೆ.

ಸಿಬಿಐ ತನಿಖೆಗೆ ಕೊಡಿ ಅಂದ್ರೆ ಎಸ್ ಐ ಟಿ ತನಿಖೆ ಮಾಡ್ತೇವೆ ಅಂತಾರೆ. ಮುಚ್ಚಲು ಏನು ಬೇಕು ಆ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಕೊನೆಗೆ ಇವರ ಬುಡಕ್ಕೆ ಬರುತ್ತೆ ಅದು ಎಂದ ಅವರು, ನಾಚಿಕೆ ಇಲ್ಲದವರು ಕಾಂಗ್ರೆಸ್ ಪಕ್ಷದವರು ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಇವರಿಗೆ ನಾಚಿಕೆ, ಮಾನ, ಮರ್ಯಾದೆ ಏನಾದ್ರು ಇದ್ದಿದ್ರೆ ಬೆಲೆ ಏರಿಕೆ ಮಾಡ್ತಾ ಇರ್ಲಿಲ್ಲ. ಬೆಲೆ ಏರಿಕೆಗೆ ಕಾರಣವಾದ್ರೂ ಕೊಡಿ ಮುಖ್ಯಮಂತ್ರಿಗಳೇ ರಾಜ್ಯದ ಅಭಿವೃದ್ಧಿಗೆ ಬಹಳಷ್ಟು ಯೋಜನೆಗಳಿದ್ವು, ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತ ಆಗಿರೋದು ಮುಖ್ಯಮಂತ್ರಿಗಳಿಗೆ ಗೊತ್ತಿಲ್ವ ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+