ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನ್ಯಾಯಾಂಗ ಬಂಧನ: ಏಪ್ರಿಲ್ 11ರ ವರೆಗೆ ಮುಂದುವರಿಕೆ

ಬೆಂಗಳೂರು, ಮಾರ್ಚ್‌ 01: ಭ್ರಷ್ಟಾಚಾರ ಪ್ರಕರಣದಲ್ಲಿ ಬಿಜೆಪಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಏಪ್ರಿಲ್ 11ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರು ನ್ಯಾಯಾಲಯ ಆದೇಶ ಹೊರಡಿಸಿದೆ. ಮಾರ್ಚ್ 28 ರಂದು ನ್ಯಾಯಾಲಯವು ಶಾಸಕರ 5 ದಿನಗಳ ಕಸ್ಟಡಿಯನ್ನು ಲೋಕಾಯುಕ್ತ ಪೊಲೀಸರಿಗೆ ನೀಡಿತ್ತು. ಅದು ಶನಿವಾರ ಕೊನೆಗೊಂಡಿತು.

ವಿರೂಪಾಕ್ಷಪ್ಪ ಅವರ ಜಾಮೀನು ಅರ್ಜಿಯನ್ನು ಏಪ್ರಿಲ್ 6 ಕ್ಕೆ ಮುಂದೂಡಿದ ನ್ಯಾಯಾಲಯ, ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಅದರೊಳಗೆ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ತಿಳಿಸಿದೆ.

ಮಾರ್ಚ್ 27 ರಂದು ಚನ್ನಗಿರಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವಿರೂಪಾಕ್ಷಪ್ಪ ಅವರನ್ನು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಟೋಲ್ ಬಳಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.

BJP MLA Madal Virupakshappa sent to judicial custody till April 11

ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ವಿರೂಪಾಕ್ಷಪ್ಪ ಅವರ ಮುಂಗಡ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ನಂತರ ಅವರನ್ನು ತುಮಕೂರು ಜಿಲ್ಲೆಯಲ್ಲಿ ಬಂಧಿಸಲಾಯಿತು.

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಡಿಎಸ್‌ಎಲ್) ಮಾಜಿ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಅವರ ಬೆಂಗಳೂರಿನ ಕಚೇರಿ ಮೇಲೆ ಮಾರ್ಚ್ 2 ರಂದು ಲೋಕಾಯುಕ್ತ ದಾಳಿ ನಡೆಸಿದಾಗ, ಅಧಿಕಾರಿಗಳು ಬಿಜೆಪಿ ಶಾಸಕರ ಪುತ್ರ ಪ್ರಶಾಂತ್ 40 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು.

ನಂತರ ಲೋಕಾಯುಕ್ತರು ಬೆಂಗಳೂರಿನ ವಿರೂಪಾಕ್ಷಪ್ಪ ಮತ್ತು ಪ್ರಶಾಂತ್ ನಿವಾಸದ ಮೇಲೆ ದಾಳಿ ನಡೆಸಿ 8.12 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದರು.

ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿರುವ ಪ್ರಶಾಂತ್ ಅವರು ಬೆಂಗಳೂರು ಜಲ ಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಈ ಪ್ರಕರಣದಲ್ಲಿ ಲೋಕಾಯುಕ್ತರು ಪ್ರಶಾಂತ್ ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ.

ದಾವಣಗೆರೆಯಲ್ಲಿ ಚನ್ನಗಿರಿಯಲ್ಲಿ ಮಾಡಾಳ್‌ ವಿರೂಪಾಕ್ಷಪ್ಪ ಅವರು ಇತ್ತೀಚಿನ ದಿನಗಳಲ್ಲಿ ಸುಮಾರು 125 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಆರೋಪಗಳು ಕೇಳಿಬಂದಿವೆ. ಇದರ ಆದಾಯದ ಮೂಲವನ್ನೂ ಸಹ ಸಹ ಲೋಕಾಯುಕ್ತ ಪೊಲೀಸರು ಪರಿಶೀಲಿಸಲಿದ್ದಾರೆ.

BJP MLA Madal Virupakshappa sent to judicial custody till April 11

ವಶಪಡಿಸಿಕೊಂಡ 6.10 ಕೋಟಿ ರೂಪಾಯಿ ಅಕ್ರಮ ಆಸ್ತಿ ಪ್ರಕರಣವನ್ನು ಇದು ಒಳಗೊಂಡಿದೆ. 125 ಎಕರೆ ಜಮೀನು ಖರೀದಿಗೆ ವಿವರಣೆ ನೀಡಬೇಕು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಪರಿಶೀಲಿಸಬೇಕು. ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿರೂಪಾಕ್ಷಪ್ಪ ಅವರು 2008ರಲ್ಲಿ ಚನ್ನಗಿರಿ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ 50 ಲಕ್ಷ ಮೌಲ್ಯದ ಕೇವಲ 12 ಎಕರೆ ಜಮೀನು ವೈಯಕ್ತಿಕ ಒಡೆತನ ಎಂದು ಘೋಷಿಸಿದ್ದರು. 2013ರಲ್ಲಿ 80 ಲಕ್ಷ ಮೌಲ್ಯದ 12 ಎಕರೆ ಸ್ಥಿರಾಸ್ತಿ ಘೋಷಿಸಿದ್ದರು. 2018ರಲ್ಲಿ ಸುಮಾರು 20 ಎಕರೆ ಜಮೀನನ್ನು ಘೋಷಿಸಿದ್ದರು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿಕಟವರ್ತಿಯಾಗಿರುವ ವಿರೂಪಾಕ್ಷಪ್ಪ ಅವರು ಕೆಎಸ್‌ಡಿಎಲ್‌ಗೆ ಕಚ್ಚಾ ಸಾಮಗ್ರಿಗಳ ಪೂರೈಕೆದಾರರನ್ನು ಪೂರೈಕೆ ಗುತ್ತಿಗೆಗಳ ಅನುಮತಿಗಾಗಿ ತಮ್ಮ ಮಗನನ್ನು ಭೇಟಿಯಾಗುವಂತೆ ನಿರ್ದೇಶಿಸಿದ ಆರೋಪವಿದೆ.

ಬಿಜೆಪಿ ಶಾಸಕರ ಮನೆಯಿಂದ ವಶಪಡಿಸಿಕೊಂಡ ಹಣವು ಅವರ ಕ್ಷೇತ್ರದಲ್ಲಿ ಅವರ ಮಾಲೀಕತ್ವದ ನೂರಾರು ಎಕರೆ ಕೃಷಿ ಭೂಮಿಯಿಂದ ಪಡೆದ ಆದಾಯದ ಭಾಗವಾಗಿದೆ ಎಂದು ವಿರೂಪಾಕ್ಷಪ್ಪ ಹೇಳಿಕೊಂಡಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿರುವ ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ ಅವರೂ ಸೇರಿದಂತೆ ಐವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+