ಬಿ ಎಸ್ ವೈ ಎದುರೆ ಸಿದ್ದರಾಮಯ್ಯರನ್ನು ಹೊಗಳಿದ ಕುಮಾರಸ್ವಾಮಿ
ವಿಧಾನಸಭೆ, ಬೆಂಗಳೂರು, ಮಾ. 13: ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಒಳ್ಳೆಯ ಕಾರ್ಯಕ್ರಮ ತಂದಿದ್ದಾರೆ ಎಂದು ಬಿಜೆಪಿ ಶಾಸಕರು ಹೊಗಳಿದ್ದಾರೆ.
ವಿಧಾನಸಭೆಯಲ್ಲಿ ಸಂವಿಧಾನದ ಮೇಲೆ ನಡೆಯುತ್ತಿರುವ ವಿಶೇಷ ಚರ್ಚೆ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರು ಎಸ್ಸಿ, ಎಸ್ಟಿ ಸಮುದಾಯಗಳಿಗೆ ರೂಪಿಸಿದ್ದ ಯೋಜನೆಗಳನ್ನು ಶಾಸಕರು ಪ್ರಸ್ತಾಪ ಮಾಡಿದ್ದಾರೆ. ಅವರು ಪರಿಶಿಷ್ಟ ಜಾತಿ, ಪಂಗಡ ಸಮಯದಾಯಕ್ಕೆ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದಿದ್ದಾರೆ.
ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎದುರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹೊಗಳಿದ ಶಾಸಕ. ಸರ್ಕಾರಿ ಕಾಮಗಾರಿಗಳ ಟೆಂಡರ್ ನಲ್ಲಿ ಎಸ್ಸಿ,ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಯೋಜನೆ ತಂದವರು ಸಿದ್ದರಾಮಯ್ಯ. ಅವರು ಜಾರಿಗೆ ತಂದ ಈ ಯೋಜನೆಯಿಂದ ನಮ್ಮ ಸಮಯದಾಯಗಳ ಬಹಳಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ಸಿದ್ದರಾಮಯ್ಯರನ್ನು ಬಿಜೆಪಿ ಶಾಸಕ. ಹಾಗೂ ಸಿಎಂ ಯಡಿಯೂರಪ್ಪ ಆಪ್ತ ಎಂ ಪಿ ಕುಮಾರಸ್ವಾಮಿ ಹೊಳಿದ್ದು ಕುತೂಹಲ ಮೂಡಿಸಿದೆ.











Click it and Unblock the Notifications