ಸಚಿವ ಸಂಪುಟ ಪುನರ್‌ ರಚನೆಯಾದ್ರೆ ಈ ಖಾತೆ ನಮಗೆ ಕೊಡಿ: ಯತ್ನಾಳ್‌ ಡಿಮ್ಯಾಂಡ್‌

ನಾನು ಯಾವ ರಾಜಕಾರಣಿ ಮನೆಗೆ ಹೋಗಿ ಭಿಕ್ಷೆ ಬೇಡಿದವನಲ್ಲ. ನಾನು ಯಾರಿಗೂ ಏಜೆಂಟ್‌ ಅಲ್ಲ. ನಮ್ಮ ಉತ್ತರ ಕರ್ನಾಟಕದ ನಾಯಕರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಈಗ ಸಂಪುಟ ಪುನರ್‌ರಚನೆ ಅಂತಿದ್ದಾರೆ. ಅದು ನಡೆಯುವುದೇ ಆದರೆ ನಮ್ಮ ಉತ್ತರ ಕರ್ನಾಟಕದ ನಾಯಕರಿಗೆ ಜಲಸಂಪನ್ಮೂಲ ಸಚಿವ ಸ್ಥಾನ ಕೊಡಿ ಎಂದು ಸಿದ್ದರಾಮಯ್ಯ ಅವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿದ್ದಾರೆ.

ನೀರಾವರಿ ಇಲಾಖೆ ಹಾಗೂ ಜಲ ಸಂಪನ್ಮೂಲ ಸಚಿವ ಸ್ಥಾನ ನಮ್ಮ ಉತ್ತರ ಕರ್ನಾಟಕ ಭಾಗದವರಿಗೆ ಸಿಗಬೇಕು. ಏಕೆಂದರೆ ಜಲಸಂಪನ್ಮೂಲ ಸಚಿವರಾಗಿದ್ದಾಗ ನಮ್ಮ ಭಾಗದ ನಾಯಕರು ಬಹಳ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಅವರಿದ್ದಾಗ, ಗೋವಿಂದ ಕಾರಜೋಳ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್‌ ಅವರಿಂದಲೂ ಈ ಭಾಗಕ್ಕೆ ನ್ಯಾಯ ಸಿಕ್ಕಿದೆ. ಇದನ್ನ ಬಿಟ್ಟರೆ ಬೇರೆ ಭಾಗದವರಿಗೆ ಕಾಳಜಿ ಇರೋದಿಲ್ಲ ಎಂದಿದ್ದಾರೆ.

BJP MLA Basanagouda Patil Yatnal Demands Water Resources Ministry For North Karnataka Leaders

ಇನ್ನುಳಿದವರು ಲೂಟಿ ಮಾಡುವ ಕಾರಣಕ್ಕೆ ಮಾತ್ರವೇ ಸಚಿವ ಸ್ಥಾನ ಪಡೆದುಕೊಳ್ಳುತ್ತಾರೆ. ಈ ಹಿಂದಿನ ಅವಧಿಯಲ್ಲಿ ನಮ್ಮ ಸರ್ಕಾರ ಮಾಡಿದ್ದ ಬಿಲ್‌ಗಳಿಗೆ ಕಮೀಷನ್‌ ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಆಗಿರುವ ಕೆಲಸಗಳಿಗೂ ಆ ಪುಣ್ಯಾತ್ಮ ಹಣ ವಸೂಲಿ ಮಾಡುತ್ತಿದ್ದಾನೆ. ಇಂತವರಿಂದ ಅಭಿವೃದ್ಧಿ ಎಲ್ಲಾಗುತ್ತೆ? ಎಂದು ಕಾಂಗ್ರೆಸ್‌ ನಾಯಕರ ಮೇಲೆ ಆರೋಪ ಮಾಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಒಂದೆಡೆ ಸಿಎಂ ಬದಲಾವಣೆ, ಅಧಿಕಾರ ಹಂಚಿಕೆ, ಸಚಿವ ಸಂಪುಟ ವಿಸ್ತರಣೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಆದರೆ, ವಿರೋಧ ಪಕ್ಷ ಸ್ಥಾನದಲ್ಲಿರುವ ಬಿಜೆಪಿಯಲ್ಲೂ ಕೂಡ ಇದೀಗ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಇಂಗಿತ ವ್ಯಕ್ತವಾಗಿದೆ. ಒಂದೆಡೆ ಬಣ ಬಡಿದಾಟವಿದ್ದರೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ರಾಜ್ಯದ ಸಿಎಂ ಆಗುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ.

BJP MLA Basanagouda Patil Yatnal Demands Water Resources Ministry For North Karnataka Leaders

ನನ್ನಲ್ಲಿ ಏನು ಕೊರತೆ ಇದೆ? ನಾನೇಕೆ ಸಿಎಂ ಆಗಬಾರದು? ಎಂದು ಯತ್ನಾಳ್‌ ಪ್ರಶ್ನಿಸಿದ್ದಾರೆ. ದೇವರೇನಾದ್ರೂ ಒಳ್ಳೆಯ ವ್ಯಕ್ತಿ ಮುಖ್ಯಮಂತ್ರಿ ಆಗಬೇಕು ಎಂದು ಆದೇಶ ಕೊಟ್ರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ. ಪ್ರಾಮಾಣಿಕರನ್ನು ಸಿಎಂ ಮಾಡುವುದಾದರೆ ಮೊದಲು ನನ್ನ ಹೆಸರೇ ಮುಂದಕ್ಕೆ ಬರುತ್ತದೆ ಎಂದು ಯತ್ನಾಳ್‌ ಅವರು ಸಿಎಂ ಕುರ್ಚಿ ಏರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ದೇವರು ಕೃಪೆ ತೋರಿದರೆ ಮುಖ್ಯಮಂತ್ರಿ ಆಗುತ್ತೇನೆ. ಇಲ್ಲದಿದ್ದರೆ ನನ್ನ ಪಾಡಿಗೆ ನಾನು ಇರುತ್ತೇನೆ. ನನ್ನ ಮೇಲೆ ಯಾವುದಾದರೂ ಭ್ರಷ್ಟಾಚಾರ ಅಥವಾ ಹಗರಣ ಇದ್ದಿದ್ರೆ ಸುಮ್ಮನೆ ಬಿಡುತ್ತಿದ್ರಾ? ಈ ಹಿಂದೆ ನನ್ನ ಮೇಲೂ ದಾಳಿ ಮಾಡಿಸಿ ವಿಫಲರಾಗಿದ್ದಾರೆ. ಗುಪ್ತಚರ ಇಲಾಖೆಯನ್ನ ಬಿಟ್ರೂ ಏನೂ ಮಾಡಲು ಆಗಲಿಲ್ಲ. ಹೀಗಾಗಿ ಈಗ ಸುಮ್ಮನಿದ್ದಾರೆ. ನನ್ನೊಂದಿಗೆ ಜನರ ಶಕ್ತಿ ಇದೆ, ಆ ಭಗವಂತನ ಕೃಪೆಯೂ ಇದೆ ಎಂದು ಯತ್ನಾಳ್‌ ಹೇಳಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಕೋರ್‌ ಕಮಿಟಿ ಸಭೆ ಕುರಿತು ಮಾತನಾಡಿದ ಯತ್ನಾಳ್‌, ಅವರು ಕೋರ್ ಕಮಿಟಿ ಮಾಡಲಿ. ಅವರು ನನ್ನನ್ನು ಏಕೆ ಕೋರ್ ಕಮಿಟಿ ಸಭೆಗೆ ಕರೆಯಬೇಕು? ನಾನು ಕೋರ್ ಕಮಿಟಿಯ ಸದಸ್ಯ ಅಲ್ಲ, ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಸಾಮಾನ್ಯ ಶಾಸಕ ಎಂದು ಯತ್ನಾಳ್‌ ಟಾಂಗ್‌ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+