Lok Sabha Election 2024: ಶಿವಮೊಗ್ಗದಿಂದ ರಾಜಾಹುಲಿ ಪುತ್ರನಿಗೆ ಟಿಕೆಟ್ ?
ಶಿವಮೊಗ್ಗ, ಮಾರ್ಚ್ 01: ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಮೂವರು ಪಕ್ಷಗಳು ಅಧಿಕಾರಿಯ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿವೆ. ಗುರುವಾರ ತಡರಾತ್ರಿಯವರೆಗೂ ಬಿಜೆಪಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಕುರಿತು ಸಭೆ ನಡೆಸಿದ್ದು, ಮೊದಲ ಪಟ್ಟಿಯಲ್ಲಿ ಕರ್ನಾಟಕದ ಕೆಲ ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಲಿದೆ.
ಬಿಜೆಪಿಯ ಮೊದಲ ಪಟ್ಟಿಯಲ್ಲಿ 125 ಅಭ್ಯರ್ಥಿಗಳ ಪೈಕಿ ಕರ್ನಾಟಕದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಹಾಲಿ ಸಂಸದರಾದ ಬಿ ವೈ ರಾಘವೇಂದ್ರ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿಲಿದೆ. ಶಿವಮೊಗ್ಗ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಭದ್ರಕೋಟೆ. ಈಗಾಗಲೇ ರಾಜಕೀಯ ನಿವೃತ್ತಿ ಘೋಷಿಸಿರುವ ಬಿ ಎಸ್ ಯಡಿಯೂರಪ್ಪ ಅವರು, ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನ ಪುತ್ರ ವಿಜಯೇಂದ್ರಗೆ ಬಿಟ್ಟುಕೊಟ್ಟಿದ್ದು, ಇದೀಗ ಶಿವಮೊಗ್ಗದಿಂದ ರಾಘವೇಂದ್ರ ಅವರನ್ನ ಹೈಕಮಾಂಡ್ ಮತ್ತೊಮ್ಮೆ ಕಣಕ್ಕಿಳಿಸಲಿದೆ.

ಬಿಜೆಪಿಗೆ ಸಂಸದ ರಾಘವೇಂದ್ರರೇ ಅಭ್ಯರ್ಥಿ ಬಹುತೇಕ ನಿಚ್ಚಳವಾಗಿದೆ. ಆದ್ರೆ ಕಾಂಗ್ರೆಸ್ ಪಕ್ಷದಲ್ಲಿ ಅಕಾಂಕ್ಷಿಗಳು ಟಿಕೆಟ್ ಪಡೆಯಲು ಗುಪ್ತಗಾಮಿನಿಯಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶಿಕ್ಷಣ ಸಚಿವ ಮಧುಬಂಗಾರಪ್ಪರ ಮೇಲೆ ಮನಸು ಕೇಂದ್ರೀಕರಿಸಿದ್ದಾರೆ. ಮಧು ಬಂಗಾರಪ್ಪ ಸ್ಪರ್ಧಿಸುವುದಿಲ್ಲ ಎನ್ನಲಾಗಿದ್ದು, ಗೀತಾ ಶಿವರಾಜಕುಮಾರ್ ಸ್ಪರ್ಧಿಸುವುದು ಅನುಮಾನವಾಗಿದೆ. ಏಕೆಂದರೇ 2 ಬಾರಿ ಸೋತಿರೋ ಗೀತಾ ಮೇಲೆ ಪಕ್ಷದಲ್ಲಿ ಉತ್ಸಾಹ ಇದ್ದಂತಿಲ್ಲ. ಅಚ್ಚರಿ ಅಭ್ಯರ್ಥಿಯೊಬ್ಬರು ಕಡೆಕ್ಷಣದಲ್ಲಿ ಕಣಕ್ಕೆ ಇಳಿಯಬಹುದು ಎಂದು ಹೇಳಲಾಗಿದೆ.












Click it and Unblock the Notifications