‘ಕಾಂಗ್ರೆಸ್ ಉತ್ತರ ಕರ್ನಾಟಕಕ್ಕೆ ಮಹಾಮೋಸ ಮಾಡುತ್ತಿರುವುದು ಇದೇ ಮೊದಲೇನಲ್ಲ’
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದಿದೆ. ಹೀಗಿದ್ದಾಗಲೇ ಬಿಜೆಪಿ & ಜೆಡಿಎಸ್ ನಾಯಕರು ಕಾಂಗ್ರೆಸ್ ನಾಯಕರ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಹೊಸ ಅಸ್ತ್ರ ಪ್ರಯೋಗ ಮಾಡಿರುವ ಕರ್ನಾಟಕ ಬಿಜೆಪಿ, 'ಕಾಂಗ್ರೆಸ್ ಉತ್ತರ ಕರ್ನಾಟಕಕ್ಕೆ ಮಹಾಮೋಸ ಮಾಡುತ್ತಿರುವುದು ಇದೇ ಮೊದಲೇನಲ್ಲ' ಎನ್ನುವ ಮೂಲಕ ಹೊಸ ಆರೋಪದ ಬಾಂಬ್ ಸಿಡಿಸಿದೆ.
ಹೌದು, ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ 'ರಾಜ್ಯ ವಿಧಾನಸಭಾ ಚುನಾವಣಾ ಮುನ್ನ ಉತ್ತರ ಕರ್ನಾಟಕಕ್ಕೆ ಸ್ವರ್ಗವನ್ನೇ ಇಳಿಸಿಬಿಡುತ್ತೇವೆಂದು ಉತ್ತರ ಕರ್ನಾಟಕದ ಜನತೆಯ ಕಿವಿ ಮೇಲೆ ಹೂವಿಟ್ಟಿದ್ದ @INCKarnataka, ಈಗ ಚುನಾವಣೆ ಗೆದ್ದ ನಂತರ ಉತ್ತರ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿದೆ ಎಂಬುದಂತೂ ನೂರಕ್ಕೆ ನೂರರಷ್ಟು ದಿಟ.' ಎಂದು ಗಂಭೀರ ಆರೋಪ ಮಾಡಿದೆ. ಇದರ ಜೊತೆಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದೆ!

'ಅತ್ಯಂತ ಮಾನವೀಯ ಮತ್ತು ಶೋಚನೀಯ'
ಹಾಗೇ ಬಿಜೆಪಿ ಆರೋಪ ಮಾಡಿರುವಂತೆ, 'ರಾಜ್ಯದೆಲ್ಲೆಡೆ ಕಂಡು ಕೇಳರಿಯದಂತಹ ಬರ ಆವರಿಸಿದೆ, ಉತ್ತರ ಕರ್ನಾಟಕವಂತೂ ಬರದಿಂದ ದಿನೇ ದಿನೇ ಸೊರಗುತ್ತಿದೆ, ಜನ ಜಾನುವಾರು ಸಮೇತ ಗುಳೆ ಹೋಗುತ್ತಿದ್ದಾರೆ, ಆದರೆ ಸಿಎಂ @siddaramaiah ರವರಾದಿಯಾಗಿ ಕಾಂಗ್ರೆಸ್ ಸರ್ಕಾರ, ತಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಅತ್ಯಂತ ಅಮಾನವೀಯ ಮತ್ತು ಶೋಚನೀಯ.' ಎಂದು ಕರ್ನಾಟಕದ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದೆ ಬಿಜೆಪಿ.
2013ರಲ್ಲಿ ಮಾಡಿದ ಮಹಾದ್ರೋಹದಂತೆ...
ಇನ್ನು 'ಕಾಂಗ್ರೆಸ್ ಉತ್ತರ ಕರ್ನಾಟಕಕ್ಕೆ ಮಹಾಮೋಸ ಮಾಡುತ್ತಿರುವುದು ಇದೇ ಮೊದಲಲ್ಲ. 2013ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನಡಿಗೆ-ಕೃಷ್ಣೆಯ ಕಡೆಗೆ ಎಂದು ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಮಾಡಿತ್ತು, ಆದರೆ ಗೆದ್ದ ನಂತರ ಕೃಷ್ಣೆ ಕಡೆಗೆ ಕನಿಷ್ಠ ಭೇಟಿ ಸಹ ನೀಡಲಿಲ್ಲ.
ರಾಜ್ಯ ವಿಧಾನಸಭಾ ಚುನಾವಣಾ ಮುನ್ನ ಉತ್ತರ ಕರ್ನಾಟಕಕ್ಕೆ ಸ್ವರ್ಗವನ್ನೇ ಇಳಿಸಿಬಿಡುತ್ತೇವೆಂದು ಉತ್ತರ ಕರ್ನಾಟಕದ ಜನತೆಯ ಕಿವಿ ಮೇಲೆ ಹೂವಿಟ್ಟಿದ್ದ @INCKarnataka, ಈಗ ಚುನಾವಣೆ ಗೆದ್ದ ನಂತರ ಉತ್ತರ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿದೆ ಎಂಬುದಂತೂ ನೂರಕ್ಕೆ ನೂರರಷ್ಟು ದಿಟ.
— BJP Karnataka (@BJP4Karnataka) December 6, 2023
ರಾಜ್ಯದೆಲ್ಲೆಡೆ ಕಂಡು ಕೇಳರಿಯದಂತಹ ಬರ ಆವರಿಸಿದೆ, ಉತ್ತರ…
2013ರಲ್ಲಿ ಮಾಡಿದ ಮಹಾದ್ರೋಹದಂತೆ 2023ರಲ್ಲಿ ಸಹ ಉತ್ತರ ಕರ್ನಾಟಕಕ್ಕೆ ಮಹಾಮೋಸ ಮಾಡುತ್ತಿದೆ ಕಾಂಗ್ರೆಸ್. ಉತ್ತರ ಕರ್ನಾಟಕದ ಜೀವನಾಡಿ ಮಹಾದಾಯಿ ಯೋಜನೆಗೆ ಕಾಂಗ್ರೆಸ್ ಈ ಬಾರಿ ಬಜೆಟ್‌ನಲ್ಲಿ ಬಿಡಿಗಾಸು ಅನುದಾನ ಸಹ ನೀಡಿಲ್ಲ. ಇದು ಉತ್ತರ ಕರ್ನಾಟಕದ ಬಗ್ಗೆ ಕಾಂಗ್ರೆಸ್ ಹೊಂದಿರುವ ಅಸಡ್ಡೆಯ ಪರಮಾವಧಿ.' ಎಂದು ಆರೋಪಿಸಿದೆ ಬಿಜೆಪಿ.
ಬೆಳಗಾವಿಯಲ್ಲಿ ಏಳು ತಿಂಗಳಿಂದ..
ಮತ್ತೊಂದು ಕಡೆ, 'ಅಭಿವೃದ್ದಿಗೊಳಿಸಿ ಎಂದು ಜನ ಅಧಿಕಾರ ನೀಡಿದರೆ, ಕಾಂಗ್ರೆಸ್‌ನ ಉತ್ತರ ಕರ್ನಾಟಕದ ನಾಯಕರು ನಡೆಸುತ್ತಿರುವುದು ಕಚ್ಚಾಟ ಮಾತ್ರ. ಬೆಳಗಾವಿಯಲ್ಲಿ ಏಳು ತಿಂಗಳಿಂದ ಕೇಳಿ ಬರುತ್ತಿರುವುದು ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಫೈಟ್. ಕಲ್ಬುರ್ಗಿಯನ್ನು ತಮ್ಮ ಪುಂಡ ಪಟಾಲಂಗಳಿಗೆ ಒಪ್ಪಿಸಿ, ರಿಪಬ್ಲಿಕ್ ಅನ್ನಾಗಿಸಿದ್ದಾರೆ ಸಚಿವ ಪ್ರಿಯಾಂಕ್ ಖರ್ಗೆ.' ಎಂದಿದೆ ಬಿಜೆಪಿ.

'ಇದು ಕಳ್ಳನಿಗೊಂದು ಪಿಳ್ಳೆ ನೆವ'
ಅಲ್ಲದೆ 'ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಬರ ತಾಂಡವವಾಡುತ್ತಿದ್ದರೂ, ಇದುವರೆಗೂ ಕಾಂಗ್ರೆಸ್‌ನ ಒಬ್ಬರೇ ಒಬ್ಬ ನಾಯಕರು ಸಹ ಬರ ಅಧ್ಯಯನ ಪ್ರವಾಸ ನಡೆಸಿಲ್ಲ. ಕನಿಷ್ಠ ಬರ ಪೀಡಿತ ಪ್ರದೇಶಗಳಿಗೆ ಭೇಟಿಯನ್ನು ಸಹ ನೀಡಿಲ್ಲ.
ತೆಲಂಗಾಣಕ್ಕೆ ದಿನಕ್ಕೊಮ್ಮೆ ಹೋಗಿ ಬರುವ ಕಾಂಗ್ರೆಸ್‌ನ ಸಚಿವ-ಶಾಸಕರುಗಳಿಗೆ, ತಮ್ಮದೇ ಸ್ವಕ್ಷೇತ್ರಗಳ ಜನರ ಸಂಕಷ್ಟಗಳನ್ನು ಆಲಿಸಲು ಸಮಯವಿಲ್ಲವೆಂದರೆ ಇದಕ್ಕಿಂತ ಹಾಸ್ಯಾಸ್ಪದ ಸಂಗತಿ ಮತ್ತೊಂದಿದೆಯೇ..? - ಇದು ಕಳ್ಳನಿಗೊಂದು ಪಿಳ್ಳೆ ನೆವ ಅಷ್ಟೆ.' ಎಂದು ಕರ್ನಾಟಕದ ಕಾಂಗ್ರೆಸ್ ನಾಯಕರ ಕಾಲೆಳೆದಿದೆ ಬಿಜೆಪಿ.
'ಜನತೆಗೆ ಧೈರ್ಯ ತುಂಬಿದ್ದೇವೆ'
ಅಂತಿಮವಾಗಿ, 'ಈಗಾಗಲೇ ಬಿಜೆಪಿಯ ಹಿರಿಯ ನಾಯಕರ ನಿಯೋಗಗಳು ಎರೆಡೆರೆಡು ಬಾರಿ ಉತ್ತರ ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿ ಬರದಿಂದ ಬದುಕಿನ ಉತ್ಸಾಹವನ್ನು ಕಳೆದುಕೊಂಡಿರುವ ರೈತ ಬಾಂಧವರಿಗೆ, ಜನತೆಗೆ ಧೈರ್ಯ ತುಂಬಿ ಸಾಂತ್ವನ ಹೇಳಲಾಗಿದೆ.
ಆಡಳಿತ ಪಕ್ಷ ಮಾಡಬೇಕಿದ್ದ ಕೆಲಸವನ್ನು ವಿರೋಧ ಪಕ್ಷ ಮಾಡುತ್ತಿದೆ. ಆದರೆ ಆಡಳಿತ ಪಕ್ಷ ಕಾಂಗ್ರೆಸ್ ಮಾತ್ರ ರಾಜ್ಯವನ್ನು ಬೇಕಾಬಿಟ್ಟಿಯಾಗಿ ಲೂಟಿ ಹೊಡೆಯುತ್ತಾ, ಕುರ್ಚಿ ಕಿತ್ತಾಟ ಹಾಗೂ ಕಲೆಕ್ಷನ್-ಕಮಿಷನ್-ಕರಪ್ಷನ್ ಅನ್ನೇ ದಿನನಿತ್ಯದ ಕಾರ್ಯವನ್ನಾಗಿಸಿ ಕೊಂಡಿರುವುದು ದುರಂತವೇ ಸರಿ.' ಎಂದು ಬಿಜೆಪಿ ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ.












Click it and Unblock the Notifications