ಬಿಜೆಪಿ ಶಾಸಕಾಂಗ ಸಭೆ: ಶಾಸಕರಿಗೆ ಅಧಿಕಾರದ ಭರವಸೆ ನೀಡಿದ ಬಿಎಸ್‌ವೈ

ಬೆಂಗಳೂರು, ನವೆಂಬರ್ 29: ಯಡಿಯೂರಪ್ಪ ಅವರ ಮುಖಂಡತ್ವದಲ್ಲಿ ಇಂದು ಬಿಜೆಪಿ ಶಾಸಕಾಂಗ ಸಭೆ ಕರೆದಿದ್ದು, ಸಭೆಯಲ್ಲಿ ಬಿಜೆಪಿಯ ಎಲ್ಲ ಶಾಸಕರು ಅದರಲ್ಲಿ ಭಾಗಿಯಾಗಿದ್ದಾರೆ.

ಬಿಜೆಪಿ ಶಾಸಕಾಂಗ ಸಭೆಯು ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆಯುತ್ತಿದ್ದು, ಸಭೆಯಲ್ಲಿ ಇತ್ತೀಚೆಗೆ ಅಸುನೀಗಿದ ಕೇಂದ್ರ ಸಚಿವ ಅನಂತ್‌ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಸಭೆ ಪ್ರಾರಂಭವಾದಾಗ ಬಿಜೆಪಿ ಶಾಸಕರು ಯಡಿಯೂರಪ್ಪ ಅವರ ಮೇಲೆ ಸರ್ಕಾರ ರಚಿಸುವ ಯತ್ನ ಮಾಡಬೇಕೆಂದು ಒತ್ತಡ ಹೇರಿದರು. ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು ಎಲ್ಲ ಶಾಸಕರು ಸಮಾಧಾನದಿಂದಿರಬೇಕು ಸರ್ಕಾರ ರಚಿಸುವ ಯತ್ನ ನಿಂತಿಲ್ಲ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿಯು ಸರ್ಕಾರ ರಚಿಸುವ ಯತ್ನವನ್ನು ಕೈಬಿಟ್ಟಿಲ್ಲ, ಶಾಸಕರು ಸಮಾಧಾನದಿಂದರಬೇಕು ಎಂದು ಯಡಿಯೂರಪ್ಪ ಅವರು ಶಾಸಕರಿಗೆ ಭರವಸೆ ನೀಡಿದ್ದಾರೆ. ಬೇರೆ ಪಕ್ಷಕ್ಕೆ ಹಾರುವ ಮುನ್ಸೂಚನೆ ನೀಡಿದ್ದ ಶಾಸಕರನ್ನು ತಡೆಯಲು ಈ ರೀತಿ ಯಡಿಯೂರಪ್ಪ ಹೇಳಿರುವ ಸೇರಿರುವ ಸಾಧ್ಯತೆ ಇದೆ.

ಅಧಿವೇಶನಕ್ಕಾಗಿ ಬಿಜೆಪಿ ಭರ್ಜರಿ ತಯಾರಿ

ಅಧಿವೇಶನಕ್ಕಾಗಿ ಬಿಜೆಪಿ ಭರ್ಜರಿ ತಯಾರಿ

ಅಧಿವೇಶನ ಆರಂಭಕ್ಕೆ ಕೆಲವು ದಿನಗಳ ಮುಂಚೆ ಬಿಜೆಪಿ ಪಕ್ಷದ ಶಾಸಕಾಂಗ ಸಭೆಯಾಗಿದ್ದು ಕರೆದಿದ್ದು, ಅಧಿವೇಶನದಲ್ಲಿ ಬಿಜೆಪಿಯ ಹೋರಾಟದ ಬಗ್ಗೆ ಪೂರ್ಣ ರೂಪುರೇಶೆಗಳನ್ನು ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತಿದೆ. ಭಾರಿ ತಯಾರಿಯೊಂದಿಗೆ ಬಿಜೆಪಿಯು ಅಧಿವೇಶನ ಪ್ರವೇಶ ಮಾಡುತ್ತಿದೆ.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ. ಅಧಿವೇಶನದಲ್ಲಿ ಯಾವ-ಯಾವ ವಿಷಯದ ಬಗ್ಗೆ ಯಾರ್ಯಾರು ಚರ್ಚೆ ಮಾಡಬೇಕು ಎಂದು ಇಂದಿನ ಸಭೆಯಲ್ಲಿ ಪಕ್ಷದ ಹಿರಿಯ ಶಾಸಕರಿಗೆ ಜವಾಬ್ದಾರಿ ವಹಿಸಲಾಗುತ್ತದೆ ಎನ್ನಲಾಗುತ್ತಿದೆ. ಯಾರ್ಯಾರು ಯಾವ ಯಾವ ವಿಷಯಗಳನ್ನು ಪ್ರಧಾನವಾಗಿಸಿಕೊಂಡು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಬೇಕೆಂಬುದು ಇಂದು ನಿರ್ಣಯವಾಗಲಿದೆ.

ಶಾಸಕರ ಅಭಿಪ್ರಾಯ ಸಂಗ್ರಹಣೆ

ಶಾಸಕರ ಅಭಿಪ್ರಾಯ ಸಂಗ್ರಹಣೆ

ಇಂದಿನ ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಲೋಕಸಭೆ ಚುನಾವಣೆ ಬಗ್ಗೆಯೂ ಕ್ಷೇತ್ರವಾರು ಸಮೀಕ್ಷೆಯನ್ನು ರಾಜ್ಯ ಬಿಜೆಪಿಯು ಶಾಸಕರಿಂದ ಪಡೆದುಕೊಳ್ಳಲಿದೆ. ಶಾಸಕರ ಅಭಿಪ್ರಾಯವನ್ನೂ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತಿದೆ.

ಸುದೀರ್ಘ ಸಭೆ

ಸುದೀರ್ಘ ಸಭೆ

ಬಿಜೆಪಿ ಪಕ್ಷದ ಶಾಸಕಾಂಗ ಸಭೆಯು ಬೆಳಿಗ್ಗೆ ಆರಂಭವಾಗಿದ್ದು, ಬಹು ದೀರ್ಘವಾಗಿ ನಡೆಯುವ ಸಾಧ್ಯತೆ ಇದೆ. ಪಕ್ಷದ ಆಂತರಿಕ ವಿಷಯ, ರಾಜ್ಯದ ರಾಜಕಾರಣ, ರಾಷ್ಟ್ರ ರಾಜಕಾರಣ, ಚುನಾವಣೆಗಳು, ಶಾಸಕರ ಕ್ಷೇತ್ರದ ಸಮಸ್ಯೆ, ರಾಜ್ಯದ ಅನುದಾನಗಳು ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+