ಬಿಜೆಪಿ ಟಿಕೆಟ್ ಹಂಚಿಕೆ ಕಸರತ್ತು, ಯಲಹಂಕದಲ್ಲಿ ವರಿಷ್ಠರ ಸಭೆ
ಬೆಂಗಳೂರು, ಏಪ್ರಿಲ್ 07: ಬಿಜೆಪಿ ಟಿಕೆಟ್ ಹಂಚಿಕೆ ಯಡಿಯೂರಪ್ಪ ಸೇರಿದಂತೆ ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದ್ದು, ಇಂದು ಟಿಕೆಟ್ ಹಂಚಿಕೆ ಸಂಬಂಧ ಚರ್ಚೆಗೆಂದು ಯಲಹಂಕದಲ್ಲಿ ಸಭೆ ಸೇರಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಾಜ್ಯ ಬಿಜೆಪಿ ವರಿಷ್ಠರಾದ ಅರವಿಂದ ಲಿಂಬಾವಳಿ, ಸಂತೋಶ್ ಜೀ, ಉಸ್ತುರವಾರಿಯಾದ ಮುರಳಿ ಮನೋಹರ ಜೋಷಿ ಹಾಗೂ ಇನ್ನೂ ಹಲವು ರಾಜ್ಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದಾರೆ.
ಶಿವಮೊಗ್ಗ ಸೇರಿದಂತೆ, ಕರಾವಳಿ ಹಾಗೂ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಟಿಕೆಟ್ ವಿತರಣೆ ಕಗ್ಗಂಟಾಗಿದ್ದು, ಇಂದು ಟಿಕೆಟ್ ನ ಮೊದಲ ಪಟ್ಟಿ ಅಂತಿಮ ಮಾಡಿಕೊಂಡು ನಾಳೆ ಅಥವಾ ನಾಡಿದ್ದು ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಟಿಕೆಟ್ ಪಟ್ಟಿಗೆ ರಾಷ್ಟ್ರ ಬಿಜೆಪಿ ಅಧ್ಯಕ್ಷ ಅಮಿತ್ ಶಾರ ಒಪ್ಪಿಗೆ ಪಡೆಯಲಿದ್ದಾರೆ.
ನಾಳೆ ಸಂಜೆ ಅಥವಾ ಸೋಮವಾರದಂದು ಬಿಜೆಪಿಯು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಧ್ಯತೆ ಇದೆ.
ಇಂದು ಯಲಹಂಕದ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗಗಳ ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದು, ಜೊತೆಗೆ ಪಕ್ಷಾಂತರಿಗಳು ಕೂಡಾ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿರುವುದು ಬಿಜೆಪಿಗೆ ತಲೆನೋವು ಹೆಚ್ಚಿಸಿದೆ.












Click it and Unblock the Notifications