Bjp: ಮುನಿಸು ಮರೆತು ವಕ್ಫ್‌ ಹೋರಾಟಕ್ಕೆ ಕೈಜೋಡಿಸಿದ ಬಿಜೆಪಿ: ವಕ್ಫ್‌ ಹೋರಾಟಕ್ಕೆ ಬಿಜೆಪಿಯಿಂದ ಮೂರು ಟೀಂ

ವಕ್ಫ್‌ ಆಸ್ತಿ ವಿಚಾರವು ರಾಜ್ಯದಲ್ಲಿ ಇದೀಗ ಹೊಸ ಹೋರಾಟಕ್ಕೆ ನಾಂದಿಯಾಗಿದೆ. ವಕ್ಫ್‌ ಆಸ್ತಿ ವಿಚಾರವಾಗಿ ಒಂದು ಬಣ ಮಾತ್ರ ಬಿಜೆಪಿಯಲ್ಲಿ ಹೋರಾಟ ಮಾಡುತ್ತಿತ್ತು. ಇದರ ಮುಂದಾಳತ್ವವವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಹಿಸಿದ್ದರು. ಇದೀಗ ಈ ವಿಷಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲೂ ಹೋರಾಟ ನಡೆಯುತ್ತಿದ್ದು, ಈ ವಿಷಯ ತಾರಕಕ್ಕೇರಿದೆ. ಕರ್ನಾಟಕದಲ್ಲಿ ಈ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿ ರೈತರ ಜಮೀನು ವಕ್ಫ್‌ ಹೆಸರಲ್ಲಿ ಕಬಳಿಸುವ ಕೆಲಸ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ವಿಧಾನ ಪರಿಷತ್ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ವಕ್ಫ್‌ ವಿಚಾರದಲ್ಲಿ ಕರ್ನಾಟಕದಲ್ಲಿ ಗೊಂದಲಗಳು ಶುರುವಾಗಿದೆ]. 10ರಿಂದ 12 ಶತಮಾನದ ಮಠಗಳ ಆಸ್ತಿಯ ಪಹಣಿಯಲ್ಲಿ ಹೆಸರುಗಳನ್ನು ಸೇರಿಸಿದ್ದಾರೆ. ಇನ್ನು ಈ ವಿಚಾರವಾಗಿ ಬಿಜೆಪಿಯು ಮೂರು ತಂಡದಲ್ಲಿ ಬಿಜೆಪಿ ವಕ್ಪ್ ವಿರುದ್ಧ ಅಭಿಯಾನ ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.

BJP leaders forgets grievances and joins the Waqf protest Three teams from BJP

ಇನ್ನು ಈಗಾಗಲೇ ಮಿಶ್ರಿಕೋಟಿಯಲ್ಲಿ ಜನರಿಂದ ಅಹವಾಲು ಸ್ವೀಕರಿಸಲಾಗಿದೆ. ಇಲ್ಲಿನ ಗರಡಿಮನೆ, ಸರ್ಕಾರಿ ಸಂಘದ ಸ್ಥಳಗಳು ಹಾಗೂ ದೇವಸ್ಥಾನವನ್ನು ವಕ್ಫ್‌ ಆಸ್ತಿ ಎಂದು ನಮೂದಿಸಿಕೊಳ್ಳಲಾಗಿದೆ. ಇನ್ನು ಈ ವಿಷಯವು ಇದೀಗ ಇತ್ಯರ್ಥವಾಗಬೇಕಿದ್ದು, 1954ರಿಂದ ಇತ್ತಿಚೆಗೆ ಇದಕ್ಕೆ ಜೀವ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ಇಂದಿರಾಗಾಂಧಿ ಸರ್ವೇ ಆಧಾರದ ಮೇಲೆಯೇ 1974ರಲ್ಲಿ ಕಾಂಗ್ರೆಸ್ ಸರ್ಕಾರ ಗೆಜೆಟ್ ನೋಟಿಫಿಕೇಷನ್‌ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸರ್ಕಾರದ ನಿರ್ದೇಶನದ ಮೇರೆಗೆ ಅಧಿಕಾರಿಗಳು ಅಂದೇ ನಮೂದು ಮಾಡಿದ್ದಾರೆ. ಈಗ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸೈತಾನರಿಗೆ ವಕ್ಪ್ ಆಸ್ತಿ ಕಾಣಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪರಮಾಧಿಕಾರ ಕೋರ್ಟಿಗೆ ಮಾತ್ರವೇ ಇದೆ. ಕಾಂಗ್ರೆಸ್ ವಕ್ಪ್ ಗೆ ಸರ್ವಾಧಿಕಾರ ನೀಡಿದೆ. ಇದಕ್ಕೆ ಕಡಿವಾಣ ಬೀಳದೆ ಇದ್ದರೆ ರೈತರು ತಮ್ಮ ಆಸ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಇದಲ್ಲದೇ 1974ರ ಆಗಿರುವ ಗೆಜೆಟ್ ರದ್ದು ಮಾಡಬೇಕು. ರೈತರ ಹಾಗೂ ಸಮಾಜದ ಹಿತವನ್ನು ಕಾಪಾಡಬೇಕು. ಇಸ್ಲಾಂ ಕಾನೂನಿನಲ್ಲಿ ಹಾಗೂ ಯಾವುದೇ ವ್ಯಕ್ತಿ ಯಾದರೂ ಇಸ್ಲಾಂ ಧರ್ಮವನ್ನು ಪಾಲಿಸದೇ ಇದ್ದರೆ ಅವರು ಪಾಪಿಗಳು ಎನ್ನಲಾಗುತ್ತದೆ. ಅವರಿಂದ ಯಾವುದೇ ದಾನ ಧರ್ಮ ತೆಗೆದುಕೊಳ್ಳಬಾರದು ಎಂಬುವುದು ಇದೆ. ಹೀಗಿದ್ದರೂ ವಕ್ಫ್ ಆಸ್ತಿ ಕಬಳಿಸಲು ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ‌ದ್ದಾರೆ.

ಜಮೀರ್ ಅಹ್ಮದ್ ಅವರು ಮುಖ್ಯಮಂತ್ರಿ ಆದೇಶದ ಮೇಲೆ ಮಾಡ್ತಿದ್ದೀನಿ ಅಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಂ 11ರಲ್ಲಿ ವಕ್ಪ್ ಅಂತ ತೆಗೆಯುತ್ತೇವೆ ಎಂದು ಹೇಳಿದ್ದಾರೆ. ಆದರೆ, ಗೆಜೆಟ್ ನಲ್ಲಿಯೇ ಈ ವಿಷಯ ಇತ್ಯರ್ಥವಾಗಬೇಕು. ಅಂದಾಗಲೇ ರೈತರಿಗೆ ಜಮೀನು ಸಿಗುತ್ತೇ. ಕಾಂಗ್ರೆಸ್ ರೈತರ ಆಸ್ತಿ ಕಬಳಿಸುವ ಕಾರ್ಯ ಮಾಡ್ತಿದೆ. ಅನ್ನದಾತನ ಹಾಗೂ ದೇವಸ್ಥಾನಗಳನ್ನು ಒಕ್ಕಲೆಬ್ಬಿಸುವ ಕಾರ್ಯವನ್ನು ಮಾಡ್ತಿದೆ ಎಂದು ಹೇಳಿದ್ದಾರೆ.

ಮೂರು ತಂಡ: ರಾಜ್ಯದಲ್ಲಿ ವಕ್ಫ್‌ ಆಸ್ತಿ ವಿವಾದವನ್ನು ಪರಿಣಾಮಕಾರಿಯಾಗಿ ಜನರ ಮುಂದೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಬಿಜೆಪಿಯು ಪರಿಣಾಮಕಾರಿಯಾಗಿ ಹೋರಾಟ ಹಾಗೂ ಪ್ರತಿಭಟನೆ ಮಾಡಲು ಮುಂದಾಗಿದೆ. ಬಿಜೆಪಿಯು ಮೂರು ತಂಡಗಳನ್ನಾಗಿ ಈ ವಿಷಯದಲ್ಲಿ ಹೋರಾಟ ಮಾಡುತ್ತಿದೆ. ಈ ವಿಷಯವನ್ನು ಮೊದಲು ಬಿಜೆಪಿ ಶಾಸಕ ಹಾಗೂ ಹಿಂದೂ ಫೈರ್‌ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಾರಂಭಿಸಿದ್ದರು. ರಾಜ್ಯದಲ್ಲಿ ವಕ್ಫ್‌ ಅದಾಲತ್‌ಗಳು ನಡೆದ ಬೆನ್ನಲ್ಲೇ ಈ ವಿಷಯವನ್ನು ಬಿಜೆಪಿ ಹೋರಾಟಕ್ಕೆ ತಿರುಗಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+