ಪಾಕಿಸ್ತಾನದ ಸರ್ವೇ ರಿಪೋರ್ಟ್ ಕೈಯಲ್ಲಿ ಇಟ್ಟುಕೊಂಡಿರಬೇಕು: ಸಿ ಟಿ ರವಿ ಹೇಳಿದ್ದೇನು..?

ಪಾಕಿಸ್ತಾನದ ರಿಪೋರ್ಟ್ ಇಟ್ಟುಕೊಂಡಿರುವ ಬಗ್ಗೆ ನನಗೆ ಅನುಮಾನ ಇದೆ. ಅವರು ಪಾಕಿಸ್ತಾನದ ರಿಪೋರ್ಟ್ ಹೇಳಿದರೆ ಅದು ನಿಜ ಇರಬಹುದು, ಒಪ್ಪುತ್ತೇನೆ ಎಂದು ಡಿ ಕೆ ಶಿವಕುಮಾರ್ ಅವರನ್ನ ಸಿ ಟಿ ರವಿ ಟೀಕಿಸಿದರು.

ಬೆಂಗಳೂರು,ಫೆಬ್ರವರಿ3: ಬಹುಶ: ಅವರು ಪಾಕಿಸ್ತಾನದ ಸರ್ವೇ ರಿಪೋರ್ಟ್ ಕೈಯಲ್ಲಿ ಇಟ್ಟುಕೊಂಡಿರಬೇಕು ಅನ್ನಿಸುತ್ತದೆ. ಅವರು ಇನ್ನೊಮ್ಮೆ ಚೆಕ್ ಮಾಡಿಕೊಳ್ಳುವುದು ಒಳ್ಳೆಯದು ಎಂದು ಡಿ ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.

ಸರ್ವೇ ರಿಪೋರ್ಟ್‌ನಲ್ಲಿ ಕಾಂಗ್ರೆಸ್ 160 ಸ್ಥಾನ ತಲುಪಲಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಾಕಿಸ್ತಾನದ ರಿಪೋರ್ಟ್ ಇಟ್ಟುಕೊಂಡಿರುವ ಬಗ್ಗೆ ನನಗೆ ಅನುಮಾನ ಇದೆ. ಅವರು ಪಾಕಿಸ್ತಾನದ ರಿಪೋರ್ಟ್ ಹೇಳಿದರೆ ಅದು ನಿಜ ಇರಬಹುದು, ಒಪ್ಪುತ್ತೇನೆ ಎಂದು ಟೀಕಿಸಿದರು.

ದೇಶದಲ್ಲಿ ಮೋದಿ ಬಂದಾಗ ಜನ ಹುಚ್ಚೆದ್ದು ಕುಣಿಯುತ್ತಾರೆ. ಕೆಲವು ಮನೆತನಗಳಿಗೆ ತಾವು ಹುಟ್ಟಿರೋದೇ ಲೀಡರ್ ಆಗೋಕೆ ಅಂತಾ ಅಂದುಕೊಂಡಿದ್ದಾರೆ. ತನಗೆ ತಾನೇ ಲೀಡರ್ ಅಂತಾ ಬೋರ್ಡ್ ಹಾಕಿಕೊಂಡು ಬಂದು ಬಿಡುತ್ತಾರೆ. ತನಗೆ ತಾನು ಬೋರ್ಡ್ ಹಾಕಿಕೊಂಡು ಬಂದರೋ ಲೀಡರ್ ಆಗಲ್ಲ. ಲೀಡರ್ ಅಲ್ವೋ ಇಲ್ವೋ ಅಂತಾ ತೀರ್ಮಾನ ಮಾಡೋದು ಜನರು. ಇವಾಗ ಉತ್ತರ ಪ್ರದೇಶದಲ್ಲಿ ಆಗಿಲ್ವಾ..? ಹಾಗೇ ಮುಂದೆ ರಾಜ್ಯದಲ್ಲೂ ಆಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದ ಟಾಂಗ್ ನೀಡಿದ್ದಾರೆ.

BJP Leader CT Ravi Slams KPCC President DK Shivakumar

ಸಿಡಿ ಕೆಲಸಗಳಲ್ಲಿ ಡಿಕೆಶಿ ಹೆಸರುವಾಸಿಯಾಗಿದ್ದಾರೆ: ಅಶ್ವತ್ಥ ನಾರಾಯಣ್

ಶಿವಕುಮಾರ್ ಯಾರ ಯಾರ ಸಿಡಿ ಮಾಡ್ತಿದ್ದಾರೋ ನನಗೇನು ಗೊತ್ತು.?ಇನ್ನು ಯಾವ ಯಾವ ಸಿನಿಮಾ ಇದೆ, ಟ್ರೈಲರ್ ಇದೆ, ಟೀಸರ್ ಇದೆ, ಯಾವಾಗ ಬಿಡುಗಡೆ ಆಗುತ್ತೆ ಅಂತ ಡಿ ಕೆ ಶಿವಕುಮಾರ್ ಕೇಳಬೇಕು ಎಂದು ಸಚಿವ ಅಶ್ವತ್ಥ ನಾರಾಯಣ್ ಹೇಳಿದರು.

ಇದೊಂದು ಕೆಟ್ಟ ಬೆಳವಣಿಗೆ. ರಾಜಕಾರಣಗಳನ್ನ ಟ್ರ್ಯಾಪ್, ಫ್ಯಾಬ್ರಿಕೇಟ್ ಮಾಡಲಾಗ್ತಿದೆ. ಇಂತಹದ್ದೊಂದು ವ್ಯವಸ್ಥಿತ ನೆಟ್ವರ್ಕ್ ಬೆಳೆದಿದೆ. ಸಮಾಜದಲ್ಲಿ ಗೊಂದಲ ಸೃಷ್ಠಿಮಾಡಿ, ಚುನಾಯಿತ ಪ್ರತಿನಿಧಿಗಳ ಬದುಕು ಹಾಳು‌ಮಾಡ್ತಿದ್ದಾರೆ. ಇಂತಹ ರಾಕೇಟ್ ಗಳನ್ನ ನಡೆಸುವ ನಾಯಕರ ಬಂಡವಾಳ ಬಯಲಾಗಬೇಕು. ಈ ಬಗ್ಗೆ ತನಿಖೆ ಅಗತ್ಯ ಇದೆ. ರಮೇಶ್ ಜಾರಕಿಹೋಳಿ ಧೈರ್ಯ ತೋರಿ ಈ ಬಗ್ಗೆ ದೂರು ನೀಡಿದ್ದಾರೆ. ಈಗ ಕಾಂಗ್ರೆಸ್ ನಾಯಕರಿಗೆ ಆತಂಕ ಸೃಷ್ಠಿಯಾಗ್ತಿದೆ. ಈ ಬಗ್ಗೆ ತನಿಖೆ ಆಗಲಿ ಅಂತ ಕಾಂಗ್ರೆಸ್ ನ ಯಾವೊಬ್ಬ ನಾಯಕರೂ ಹೇಳುತ್ತಿಲ್ಲ ಎಂದು ಡಿ ಕೆ ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.

ಸಿಡಿ ಪ್ರಕರಣ ಕುರಿತು ರಮೇಶ್ ಜಾರಕಿಹೋಳಿ ಅಮಿಶ್ ಶಾ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಬ್ಲಾಕ್ ಮೇಲರ್ ಪಕ್ಷ, ಸಿಡಿ ಪಕ್ಷ ಅಂತಾರೆ.ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷರು ಅದರಲ್ಲಿ ಪರಿಣಿತರು. ಎಲ್ಲರ ಸಿಡಿ ಮಾಡಿಸ್ತಿದ್ದಾರೆ ಅಂತ ರಮೇಶ್ ಜಾರಕಿಹೋಳಿ ಆರೋಪಿಸಿದ್ದಾರೆ. ಅವರ ಆರೋಪವನ್ನ ಎಲ್ಲರೂ ಒಪ್ಪುವಂತಹದ್ದು. ಇಂತಹ ಕೆಲಸಗಳಲ್ಲಿ ಡಿಕೆಶಿ ಹೆಸರುವಾಸಿಯಾಗಿದ್ದಾರೆ, ಕಾಂಗ್ರೆಸ್ ನಲ್ಲಿ ಇಂತಹ ನಾಯಕರು ಮತ್ತಷ್ಟು ಜನ ಇದ್ದಾರೆ. ಇದರ ಬಗ್ಗೆ ರಮೇಶ್ ಜಾರಕಿಹೋಳಿ ದೂರು ನೀಡಿದ್ದಾರೆ. ಇದರ ಮೇಲೆ ತನಿಖೆ ಆದ್ರೆ ಒಳ್ಳೆಯದು.ಇಂತಹ ಜಾಲ ಇರೋದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಿಡಿಕಾರಿದರು.

BJP Leader CT Ravi Slams KPCC President DK Shivakumar

ತಮ್ಮ ವಂಶ ಪಾರಂಪರಿಕವಾಗಿ ರಾಮನಗರ ಜಿಲ್ಲೆಯಲ್ಲಿ ಸ್ವಾರ್ಥಕ್ಕಾಗಿ ರಾಜಕೀಯ ಮಾಡಿದ್ದಾರೆ.ಅಭಿವೃದ್ಧಿ ಕಾರ್ಯಗಳನ್ನ ಮಾಡದೇ ಜನರನ್ನ ಮೋಡಿ ಮಾಡಿಕೊಂಡು ಬಂದಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ದ ಸಚಿವ ಅಶ್ವತ್ಥ ನಾರಾಯಣ್ ಕಿಡಿಕಾರಿದರು. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಗೆ ತಕ್ಕ ಪಾಠ ಆಗಬೇಕು ಎಂದು ಬಿಜೆಪಿ ವಿಜಯ ಸಂಕಲ್ಪ ಹಾಗೂ ಶಕ್ತಿಕೇಂದ್ರ ಪ್ರಮುಖರ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಸಚಿವ ಅಶ್ವಥ್ ನಾರಾಯಣ್ ಕಿವಿಮಾತು‌ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+