ಹೈಕಮಾಂಡ್ ನೀಡಿರುವ ಸಾವಿರ ಕೋಟಿ ಟಾರ್ಗೆಟ್ ತಲುಪಲು ಸರ್ಕಾರದ ವಾಮಮಾರ್ಗಗಳು..!
ಬೆಂಗಳೂರು, ಅಕ್ಟೋಬರ್ 18: ಬೆಂಗಳೂರಿನ ಗುತ್ತಿಗೆದಾರರ ನಿವಾಸದಲ್ಲಿ 42 ಕೋಟಿ ಹಣ ಪತ್ತೆಯಾದ ಹಿನ್ನಲೆ ರಾಜ್ಯ ಬಿಜೆಪಿ ಹಾಗೂ ಸರ್ಕಾರದ ನಡುವೆ ಟ್ವೀಟ್ ವಾರ್ ಮುಂದುವರೆದಿದೆ.
ಹೌದು, ಬುಧವಾದ ರಾಜ್ಯ ಸರ್ಕಾರದ ವಿರುದ್ದ ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, ರಾಜ್ಯದ ಕಾಂಗ್ರೆಸ್ ಗೆ ಹೈಕಮಾಂಡ್ ನೀಡಿರುವ ಸಾವಿರ ಕೋಟಿ ರೂಪಾಯಿಗಳ ಮೊದಲ ಹಂತದ ಟಾರ್ಗೆಟ್ ತಲುಪಲು ಮುಖ್ಯಮಂತ್ರಿ ಸಿದ್ದರಾಮಮಯ್ಯ ಅವರ ಸರ್ಕಾರ ಆಯ್ಕೆ ಮಾಡಿಕೊಂಡಿರುವ ವಾಮಮಾರ್ಗಗಳು ಎಂದು ಬಿಜೆಪಿ ಹಲವು ವಿಚಾರಗಳನ್ನ ಪಟ್ಟಿ ಮಾಡಿದೆ.

- ಕೃಷಿ ಅಧಿಕಾರಿಗಳಿಂದ ಕಲೆಕ್ಷನ್..!
- ಅಬಕಾರಿ ಅಧಿಕಾರಿಗಳಿಂದ ಕಲೆಕ್ಷನ್..!
- ಗುತ್ತಿಗೆದಾರರ ಮೂಲಕ ಕಲೆಕ್ಷನ್..!
- ಅಧಿಕಾರಿಗಳಿಂದ ದಸರಾ ಕಮಿಷನ್..!
- ಶ್ಯಾಡೋ ಸಿಎಂ ವರ್ಗಾವಣೆ ಕಲೆಕ್ಷನ್..!
ಕಾಂಗ್ರೆಸ್ ಬಂದಿದೆ ಲೂಟಿ ಮಾಡುತ್ತಿದೆ. ಕಲೆಕ್ಷನ್ ಉಚಿತ, ಕಮಿಷನ್ ಖಚಿತ, ಕರಪ್ಷನ್ ನಿಶ್ಚಿತ ಎಂದು ಬಿಜೆಪಿ ಕಿಡಿಕಾರಿದ್ದು, ₹600 ಕೋಟಿ ಬಿಡುಗಡೆ ಮಾಡಿದ್ದರಲ್ಲೇ ₹102 ಕೋಟಿಯಷ್ಟು ಕಮಿಷನ್ ಪಾಲು ಪತ್ತೆಯಾಗಿದೆ! ಬೆಂಗಳೂರು ಅಭಿವೃದ್ಧಿಯ 'ಹೆಸರಿನಲ್ಲಿ' ಈಗಾಗಲೇ ಸಾವಿರಾರು ಕೋಟಿಗಳನ್ನು ಬಜೆಟ್‌ನಲ್ಲಿ ಮೀಸಲಿಟ್ಟಿರುವ ಸಿದ್ದರಾಮಯ್ಯ ಅವರು ಪಂಚರಾಜ್ಯ ಮತ್ತು ಲೋಕಸಭೆ ಚುನಾವಣೆಗಾಗಿ ಹೈ ಕಮಾಂಡ್‌ಗೆ ಕಳಿಸಬೇಕಿರುವ ಮೊತ್ತ ಕೇಳಿದರೆ ನೀವು ಕೂತಲ್ಲೇ ಹೌಹಾರಬಹುದು ಎಂದು ರಾಜ್ಯ ಬಿಜೆಪಿ ಹೇಳಿದೆ.
ರಾಜ್ಯದ @INCKarnataka ಕ್ಕೆ ಹೈಕಮಾಂಡ್ ನೀಡಿರುವ ಸಾವಿರ ಕೋಟಿ ರೂಪಾಯಿಗಳ ಮೊದಲ ಹಂತದ ಟಾರ್ಗೆಟ್ ತಲುಪಲು @siddaramaiah ಅವರ ಸರ್ಕಾರ ಆಯ್ಕೆ ಮಾಡಿಕೊಂಡಿರುವ ವಾಮಮಾರ್ಗಗಳು..!
— BJP Karnataka (@BJP4Karnataka) October 18, 2023
✔️ ಕೃಷಿ ಅಧಿಕಾರಿಗಳಿಂದ ಕಲೆಕ್ಷನ್..!
✔️ ಅಬಕಾರಿ ಅಧಿಕಾರಿಗಳಿಂದ ಕಲೆಕ್ಷನ್..!
✔️ ಗುತ್ತಿಗೆದಾರರ ಮೂಲಕ ಕಲೆಕ್ಷನ್..!
✔️ ಅಧಿಕಾರಿಗಳಿಂದ ದಸರಾ…
ರಾಜ್ಯದಲ್ಲಿ #ATMSarkara ಅಧಿಕಾರಕ್ಕೆ ಬಂದ ಮೇಲೆ ಕಲೆಕ್ಷನ್, ಕಮಿಷನ್ ದಂಧೆ ಶಿಕ್ಷಣ ವ್ಯವಸ್ಥೆಗೂ ವಿಸ್ತರಿಸಿದೆ. ಲಂಚದ ಕಲೆಕ್ಷನ್‌ಗಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಹೊಸ ಹುದ್ದೆಗಳನ್ನು ಸೃಷ್ಟಿಸಿರುವುದೇ ಇದಕ್ಕೆ ನಿದರ್ಶನ. ಸರ್ಕಾರದ್ದೇ ಅಂಗಸಂಸ್ಥೆಯಾದ ಚಿತ್ರಕಲಾ ಪರಿಷತ್ತಿಗೆ ಬೆಂಗಳೂರು ವಿವಿ ಪರಿಶೀಲನಾ ಸಮಿತಿ ಅಧ್ಯಕ್ಷರು ಲಂಚಕ್ಕೆ ಬೇಡಿಕೆಯಿಟ್ಟಿರುವುದು ಈ ಸರ್ಕಾರದ ಭ್ರಷ್ಟ ಬೇರುಗಳು ಎಲ್ಲೆಲ್ಲೂ ಹಬ್ಬಿರುವುದರ ಸೂಚನೆ. ಕಲೆಕ್ಷನ್ ಮಾಸ್ಟರ್‌ಗಳೇ ಕುರ್ಚಿ ಮೇಲೆ ಕೂತಿರುವಾಗ ಕಲೆಕ್ಷನ್ ಶಿಷ್ಯಂದಿರಿಗೆ ಕಡಿವಾಣ ಬೀಳುವುದು ಅಸಾಧ್ಯ ಎಂದು ಬಿಜೆಪಿ ತಿಳಿಸಿದೆ.

ಇನ್ನೊಂದು ಟ್ವೀಟ್ ಮಾಡಿರುವ ಬಿಜೆಪಿ, ಕೈ ಪಾರ್ಟಿಯಲ್ಲಿ ಒಳಗೊಳಗೇ ನಡೆಯುತ್ತಿರುವ ಹೊಯ್‌ಕೈಗೆ ಕೊನೆಯೇ ಇಲ್ಲ! ಬೆಳಗಾವಿ ಜಿಲ್ಲೆಯ ಕಲೆಕ್ಷನ್‌ನ ಪಾಲು ಹಂಚಿಕೆ ವಿಚಾರದಲ್ಲಿ ಈಗ ಸತೀಶ್ ಜಾರಕಿಹೋಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಜಗಳ ತಾರಕಕ್ಕೇರಿದೆ. ಇಬ್ಬರ ಜಗಳದಿಂದಾಗಿ, ಹೈಕಮಾಂಡ್‌ಗೆ ತಾವು ಕಳಿಸುವ ಕಲೆಕ್ಷನ್‌ನಲ್ಲಿ ಇಳಿಕೆಯಾಗಬಹುದು ಎಂಬುದು ಡಿ ಕೆ ಶಿವಕುಮಾರ್ ಅವರಿಗೆ ಇರುವ ಭಯ. ಹಾಗಾಗಿ ಕಲೆಕ್ಷನ್‌ನಲ್ಲಿ ಇಬ್ಬರಿಗೂ ಒಂದೊಂದು ಪಾಲು ನೀಡಿ ದೆಹಲಿಗೆ ಕಳಿಸುವ ಪಾಲಿನಲ್ಲಿ ಯಾವುದೇ ಇಳಿಕೆಯಾಗದಂತೆ ನೋಡಿಕೊಳ್ಳುವ ಪ್ರಮುಖ ಜವಾಬ್ದಾರಿ ಡಿ.ಕೆ. ಸಾಹೇಬರ ಹೆಗಲಿನಲ್ಲಿದೆ ಎಂದು ಹೇಳಿದರು.












Click it and Unblock the Notifications