ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಫ್‌ಐ ನಿಷೇಧ: ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕರ್ನಾಟಕ ಬಿಜೆಪಿ ನಾಯಕರ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು,ಸೆಪ್ಟಂಬರ್ 28: ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವನ್ನು ಐದು ವರ್ಷ ನಿಷೇಧಿಸಿದ ಕೇಂದ್ರ ಸರ್ಕಾರದ ನಡೆಯನ್ನು ಕರ್ನಾಟಕ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಸಚಿವರು, ಇನ್ನಿತರ ನಾಯಕರು ಸ್ವಾಗತಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಕೆ.ಎಸ್‌.ಈಶ್ವರಪ್ಪ, ಮುರಗೇಶ್ ನಿರಾಣಿ, ಆರಗ ಜ್ಞಾನೇಂದ್ರ, ಸಂಸದ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರ ಬಗ್ಗೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

PFI banned : ಪಿಎಫ್‌ಐ ನಿಷೇಧ ಯಾಕೆ? ಐದು ಕಾರಣ ಕೊಟ್ಟ ಸರಕಾರPFI banned : ಪಿಎಫ್‌ಐ ನಿಷೇಧ ಯಾಕೆ? ಐದು ಕಾರಣ ಕೊಟ್ಟ ಸರಕಾರ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು, ಕಾನೂನುಬಾಹಿರ ಚಟುವಟಿಕೆಗಳ ತೊಡಗಿಕೊಳ್ಳುವ ಮೂಲಕ ದೇಶದ ಆಂತರಿಕ ಭದ್ರತೆ ಸವಾಲೊಡ್ಡಿದ್ದ ಹಾಗೂ ಸಮಾಜದ ಶಾಂತಿಗೆ ಭಂಗ ತಂದಿದ್ದ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಅನ್ನು ನಿಷೇಧಿಸಲಾಗಿದೆ. ಅದರ ಅಂಗ ಸಂಸ್ಥೆಗಳನ್ನು ಸಹ ಐದು ವರ್ಷ ಕಾಲ ನಿಷೇಧ ಮಾಡಿರುವ ಕೇಂದ್ರ ಸರ್ಕಾರ ನಿರ್ಧಾರ ಐತಿಹಾಸಿಕ ಕ್ರಮ ಆಗಿದೆ ಎಂದು ಶ್ಲಾಘಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲವು ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ, ನಿಷೇಧ ಕ್ರಮ ಕೈಗೊಂಡಿದೆ. ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿಶ್ ಶಾ ಅವರಿಗೆ ನಿರಾಣಿ ಅಭಿನಂದನೆ ತಿಳಿಸಿದರು.

ಪಿಎಫ್‌ಐ ನಿಷೇಧಕ್ಕೆ ದೇಶಾದ್ಯಂತ ಬೇಡಿಕೆ

ಪಿಎಫ್‌ಐ ನಿಷೇಧಕ್ಕೆ ದೇಶಾದ್ಯಂತ ಬೇಡಿಕೆ

ಪಿಎಫ್‌ಐ ಸಂಘಟನೆಗೆ ನಿಷೇಧ ಹೇರಬೇಕು ಎಂಬುದು ದಶಕಗಳ ಬೇಡಿಕೆಯಾಗಿತ್ತು. ಎಲ್ಲಿಯ ತನಕ ದೇಶದಲ್ಲಿ ಮೋದಿ ಅವರಂತಹ ಬಲಿಷ್ಠ ನಾಯಕ ಅಧಿಕಾರದಲ್ಲಿ ಇರುತ್ತಾರೋ ಅಲ್ಲಿಯ ತನಕ ಭಯೋತ್ಪಾದನೆ, ಭಯೋತ್ಪಾದಕರು, ಮೂಲಭೂತವಾದಿಗಳು ಸೇರಿದಂತೆ ಸಮಾಜಘಾತುಕ ಶಕ್ತಿಗಳಿಗೆ ದೇಶದಲ್ಲಿ ಉಳಿಗಾಲ ಇಲ್ಲ ಎಂಬ ಸಂದೇಶ ಇದೀಗ ರವಾನೆ ಆಗಿದೆ. ಅಲ್ಲದೇ ಸಂಘಟನೆ ನಿಷೇಧದ ಸುತ್ತ ಯಾವುದೇ ರಾಜಕೀಯ ಪಕ್ಷಗಳು ತುಷ್ಟಿಕರಣದ ಮತ್ತು ತಕ್ಷಣದ ರಾಜಕೀಯ ಲಾಭ ಪಡೆದುಕೊಳ್ಳುವ ಕೆಲಸ ಮಾಡಬಾರದು ಎಂದು ಸಚಿವ ಮುರುಗೇಶ್ ನಿರಾಣಿ ಕೋರಿದರು.

PFI Banned : ಭಾರತದಲ್ಲಿ ಪಿಎಫ್ಐ ಸೇರಿ 8 ಸಂಘಟನೆಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರPFI Banned : ಭಾರತದಲ್ಲಿ ಪಿಎಫ್ಐ ಸೇರಿ 8 ಸಂಘಟನೆಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

ದೇಶದ್ರೋಹಿ ಪಿಎಫ್‌ಐ: ಕಟಿಲ್

ದೇಶದ್ರೋಹಿ ಪಿಎಫ್‌ಐ: ಕಟಿಲ್

ದೇಶದಲ್ಲಿ ವರ್ಷಗಳಿಂದ ಆಂತರಿಕವಾಗಿ ವಿಧ್ವಂಸಕ ಕೃತ್ಯಗಳನ್ನು ಮಾಡುತ್ತ ಬಂದ ದೇಶದ್ರೋಹಿ ಪ್ರಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ( PFI) ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಕರ್ನಾಟಕದ ಸಮಸ್ತ ದೇಶಪ್ರೇಮಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಕೇಂದ್ರದ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ವಂದನೆಗಳನ್ನು ತಿಳಿಸಿದ್ದಾರೆ.

ಭಗತ್‌ ಸಿಂಗ್ ಜನ್ಮದಿನದಂದು ಪಿಎಫ್ಐ ಬ್ಯಾನ್

ಭಗತ್‌ ಸಿಂಗ್ ಜನ್ಮದಿನದಂದು ಪಿಎಫ್ಐ ಬ್ಯಾನ್

ಪಿಎಫ್ಐ ನಿಷೇಧ ಕುರಿತು ಮಾತನಾಡಿದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹೋರಾಟಗಾರ ಭಗತ್ ಸಿಂಗ್ ಅವರ ಜಯಂತಿ ದಿನ (ಸೆಪ್ಟಂಬರ್ 28) ಬುಧವಾರದಂದು ಕೇಂದ್ರದಿಂದ ಉತ್ತಮ ನಿರ್ಧಾರ ಪ್ರಕಟವಾಗಿದೆ. ದೇಶದ್ರೋಹಿ ಪ್ರಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಿ ಆದೇಶಿಸಲಾಗಿದೆ. ಇದರಿಂದ ಭಗತ್ ಸಿಂಗ್ ಸೇರಿದಂತೆ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ ಎಂದು ಅವರಿ ಅಭಿಪ್ರಾಯಪಟ್ಟರು.ದೇಶದಲ್ಲಿ ಆಂತರಿಕವಾಗಿ ವಿದ್ವಂಸಕ ಕೃತ್ಯಗಳನ್ನು ಪಿಎಫ್‌ಐ ಮಾಡುತ್ತಿತ್ತು. ಅಂತಹ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಚಿವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.

ಸಂಸದ ಪ್ರತಾಪ್ ಸಿಂಹ ಅವರು ಸಹ ಕೇಂದ್ರ ಸರ್ಕಾರದ ನೀರ್ಧಾರ ಸ್ವಾಗತಿಸಿದ್ದಾರೆ. ಪಿಎಫ್ಐ ಹಾಗೂ ಮತ್ತದರ ವ್ಯಾಪ್ತಿಯ ಸಂಘ ಸಂಸ್ಥೆಗಳು, ಸಂಘಟನೆಗಳಿಂದ ಸಾಕಷ್ಟು ಆವಾಂತರಗಳಾಗಿದ್ದವು. ದೇಶದಲ್ಲಿ ಹಲವಾರು ವಿಧ್ವಂಸಕ ಚಟುವಟಿಕೆಯಲ್ಲಿ ಪಿಎಫ್‌ಐ ಸೇರಿದಂತೆ ಆ ಸಂಘಟನೆಗಳು ಪಾಲ್ಗೊಂಡಿದ್ದರ ಬಗ್ಗೆ ಅನೇಕ ಸಾಕ್ಷ್ಯ, ಆಧಾರಗಳು ಲಭಿಸಿದ್ದವು. ಎಂಟು ಸಂಘಟನೆಗಳ ನಿಷೇಧದ ಮೂಲಕ ಸೂಕ್ತ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂಬ ರಾಜ್ಯ ಬಿಜೆಪಿ ಸರ್ಕಾರದ ಹೇಳಿಕೆಯನ್ನು ಸಂಸದರು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

UAPA ಕಾಯ್ದೆಯಡಿ ನಿಷೇಧ: ಆರಗ ಜ್ಞಾನೇಂದ್ರ

UAPA ಕಾಯ್ದೆಯಡಿ ನಿಷೇಧ: ಆರಗ ಜ್ಞಾನೇಂದ್ರ

ಪಿಎಫ್‌ಐ ಸಂಘಟನೆ ನಿಷೇಧ ಸ್ವಾಗತಾರ್ಹ ಸಂಗತಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಕಾನೂನು ಭಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA)ಯಡಿ ನಿಷೇಧಿಸಲಾಗಿದೆ. ಇತ್ತೀಚೆಗೆ ಎನ್‌ಐಎ ಮತ್ತು ಅನೇಕ ರಾಜ್ಯಗಳ ಪೊಲೀಸರು ಈ ಸಂಘಟನೆಗಳ ಕಾರ್ಯಕರ್ತರ ಮೇಲೆ ದಾಳಿ ಮಾಡಿ ಅನೇಕ ಸಾಕ್ಷ್ಯಾಧಾರ ಸಂಗ್ರಹಿಸಿದ್ದರು. ಇಂತಹ ಮತಾಂಧ ಶಕ್ತಿ, ಸಂಘಟನೆಗಳು ದೇಶದ ವಿರುದ್ಧ ಯುವಕರನ್ನು ಎತ್ತಿ ಕಟ್ಟುವ ಕೆಟ್ಟ ಕೆಲಸ ಮಾಡುತ್ತಿದ್ದರು. ಹೀಗಾಗಿ ದೇಶದ ಏಕತೆಗಾಗಿ, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧ ಮಾಡಿರುವುದು ಸರಿಯಾಗಿ ಇದೆ ಎಂದು ಅವರು ಹೇಳಿದರು.

ನಿಷೇಧಿತ ಸಂಘಟನೆ ತಲೆ ಎತ್ತದಂತೆ ನಿಗಾ

ನಿಷೇಧಿತ ಸಂಘಟನೆ ತಲೆ ಎತ್ತದಂತೆ ನಿಗಾ

ಸಮಾಜ, ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಪಿಎಫ್ಐ ಮತ್ತದೆ 8 ಅಂಗಸಂಸ್ಥೆಗಳನ್ನು 5 ವರ್ಷ ಮಟ್ಟಿಗೆ ನಿಷೇಧದ ನಿರ್ಧಾರವನ್ನು ದೇಶವೇ ಸ್ವಾಗತಿಸುತ್ತಿದೆ ಎಂದು ರಾಮನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.

ಈ ನಿಷೇಧಿತ ಸಂಘಟನೆಗಳು ಬೇರೆ ಯಾವುದೇ ರೂಪದಲ್ಲಿ ತಲೆ ಎತ್ತದಂತೆ ತೀವ್ರ ನಿಗಾ ವಹಿಸಲಾಗುವುದು. ಪಿಎಫ್‌ಐ ವಿದೇಶಿ ಜಾಲಗಳ ಮೂಲಕ ಅಕ್ರಮ ನೆರವು ಪಡೆದಿತ್ತು. ದೇಶದಲ್ಲಿ ಧಾರ್ಮಿಕ ಸಂಘರ್ಷ ಉಂಟು ಮಾಡಲು ಸಂಚು ರೂಪಿಸುತ್ತಿತ್ತು ಎಂದರು.

ಕೇಂದ್ರ ಸರ್ಕಾರವು ಪಿಎಫ್‌ಐ ಸಂಘಟನೆ ವಿಧ್ವಂಸಕ ಚಟುವಟಿಕೆ, ಹಣಕಾಸು ವ್ಯವಹಾರದ ಕಣ್ಣಿಟ್ಟಿತ್ತು. ಇದರ ಬೆನ್ನಲ್ಲೇ ಎರಡು ದಿವಸಗಳ ಹಿಂದೆ ದೇಶಾದ್ಯಂತ ಆ ಸಂಘಟನೆಯ ಕಚೇರಿ, ನಾಯಕರ ಮೇಲೆ ಎನ್ಐಎ ದಾಳಿ ನಡೆದಿತ್ತು. ಸಮಾಜ ಮತ್ತು ದೇಶದ ಹಿತಕ್ಕೆ ವಿರುದ್ಧವಾಗಿ ವರ್ತಿಸುವ ಯಾವ ಸಂಘಟನೆಗಳನ್ನು ಕೂಡ ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪಿಎಫ್‌ಐ ಬ್ಯಾನ್: ರಾಷ್ಟ್ರೀಯ ಸುರಕ್ಷತೆಗೆ ಆದ್ಯತೆ:ಜೋಶಿ

ಪಿಎಫ್‌ಐ ಬ್ಯಾನ್: ರಾಷ್ಟ್ರೀಯ ಸುರಕ್ಷತೆಗೆ ಆದ್ಯತೆ:ಜೋಶಿ

ಪಿಎಫ್‌ಐ ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರ ರಾಷ್ಟ್ರದ ಸುರಕ್ಷಿತತೆಗೆ ಆದ್ಯತೆ ನೀಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ನಿಷೇಧಧ ಮೂಲಕ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ರಾಷ್ಟ್ರೀಯ ಸುರಕ್ಷತೆಯೇ ಸರ್ವೋಚ್ಛ ಆದ್ಯತೆಯಾಗಿದೆ. ಸಂಘಟನೆಯ ನಿಷೇಧದಿಂದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಅಪಾಯಕಾರಿಯಾಗಿದ್ದ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ದೇಶಕ್ಕಾಗಿ ಎಂತಹ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಅವರು ತಿಳಿಸಿದರು.

ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಪ್ರಕರಣದಲ್ಲಿ ಪಿಎಫ್ ಐ ಕೈವಾಡ ಇರುವ ಬಗ್ಗೆ ಜೋಶಿ ಆರೋಪಿಸಿದ್ದರು. ಈ ಬಗ್ಗೆ ತನಿಖೆ ತೀವ್ರಗೊಳಿಸುವಂತೆ ಸೂಚಿಸಿದ್ದರು. ಪಿಎಫ್ಐ, ಎಸ್‌ಡಿಪಿಐ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಅವರು ಸಿಎಂ ಬೊಮ್ಮಾಯಿ ಜೊತೆ ಹಂಚಿಕೊಂಡಿದ್ದರು.‌ ಪಿಎಫ್ ಐ ಮೇಲೆ ಸಂಘಟಿತ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾದಳ, ಜಾರಿ ನಿರ್ದೇಶನಾಲಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ನೂರಾರು ಪಿಎಫ್ಐ, ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿತ್ತು. ಪಿಎಫ್ಐ ಸಂಘಟನೆ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ಹಲವು ಸಾಕ್ಷ್ಯಗಳು ದೊರೆತ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದೆ ಎಂದು ಪಹ್ಲಾದ್ ಜೋಶಿ ತಿಳಿಸಿದರು.

English summary
Karnataka State BJP Leaders Murugesh Nirani, Pratap Simha, Nalin Kumar Kateel, KS Eshwarappa and other are welcome Union government decision of Popular Front of India (PFI) Banned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X