ಹಾರೋಹಳ್ಳಿ ತಾಲೂಕು ಉದ್ಘಾಟನೆ; ಅಶ್ವತ್ಥ ನಾರಾಯಣ -ಅನಿತಾ ಕುಮಾರಸ್ವಾಮಿ ನಡುವೆ ಕ್ರೆಡಿಟ್ ವಾರ್
ಹಾರೋಹಳ್ಳಿ ನೂತನ ತಾಲೂಕು ಉದ್ಘಾಟನೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ನಡುವೆ ಮಾತಿನ ಜಟಾಪಟಿಗೆ ಸಾಕ್ಷಿಯಾಗಿದೆ.
ರಾಮನಗರ,ಫೆಬ್ರವರಿ21: 2023 ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದ ರಾಜಕೀಯ ಪಕ್ಷಗಳ ಜಟಾಪಟಿ ಜೋರಾಗಿದ್ದು, ಸಚಿವ ಅಶ್ವತ್ಥ ನಾರಾಯಣ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ರಾಮನಗರ ಪಾಲಿಟಿಕ್ ರಾಜಕಾರಣದಲ್ಲಿ ಸಾಕಷ್ಟು ಚರ್ಚೆ ಗ್ರಾಸವಾಗಿದೆ.
ಈ ಹಿಂದೆ ಸಂಸದರಾದ ಡಿ ಕೆ ಸುರೇಶ್ ಹಾಗೂ ಸಚಿವ ಅಶ್ವತ್ಥ ನಾರಾಯಣ ನಡುವೆ ಅಭಿವೃದ್ದಿ ವಿಚಾರವಾಗಿ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಇಬ್ಬರ ನಾಯಕರ ವಾರ್ ಜೋರಾಗಿ ಸದ್ದು ಮಾಡಿದ್ದು, ಇದೀಗ ಮತ್ತೆ ಹಾರೋಹಳ್ಳಿ ನೂತನ ತಾಲೂಕು ಉದ್ಘಾಟನೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ನಡುವೆ ಮಾತಿನ ಜಟಾಪಟಿಗೆ ಸಾಕ್ಷಿಯಾಗಿದೆ.
ರಾಮನಗರದ ಹಾರೋಹಳ್ಳಿ ತಾಲ್ಲೂಕು ಉದ್ಘಾಟನೆ ಬಳಿಕ ವೇದಿಕೆಯ ಮೇಲೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಹಾರೋಹಳ್ಳಿ ತಾಲ್ಲೂಕು ರಚನೆಗೆ ನಮ್ಮ ಸರ್ಕಾರ ಸಾಕಷ್ಟು ಶ್ರಮ ವಹಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ವೇಳೆ ಅಶ್ವಥ್ ನಾರಾಯಣ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಯೋಜನೆ ಜಾರಿ ತಂದಿದ್ದು, ತಾಲ್ಲೂಕು ಘೋಷಣೆಯಾಗಿದ್ದು ಎಂದು ತಾಲೂಕು ರಚನೆಯ ಕ್ರೆಡಿಟ್ ವಾರ್ ಗೆ ಬಿಜೆಪಿ ಜೆಡಿಎಸ್ ನಾಯಕರು ಮುಂದಾಗಿರುವ ಪ್ರಸಂಗ ನಡೆದಿದೆ.

ಇದಕ್ಕೆ ಪ್ರತಿಯಾಗಿ ಉತ್ತರಿಸಿದಅಶ್ವಥ್ ನಾರಾಯಣ್, ನಾವು ಸುಮ್ಮನೆ ಬೋರ್ಡ್ ಹಾಕಿಕೊಳ್ಳಲ್ಲ. ಹೆಚ್.ಡಿಕೆ ಮುಖ್ಯಂತ್ರಿ ಆಗಿದ್ದಾಗ 2019ರಲ್ಲಿ ತಾತ್ವಿಕ ಅನುಮೋದನೆ ಕೊಟ್ಟಿದ್ದರು. 2022ರಲ್ಲಿ ತಾಲ್ಲೂಕು ರಚನೆಗೆ ಅಂತಿಮ ಅಧಿಸೂಚನೆ ಕೊಟ್ಟಿದ್ದು ನಮ್ಮ ಸರ್ಕಾರ. ನಮ್ಮ ಸರ್ಕಾರದಲ್ಲಿಯೇ ತಾಲ್ಲೂಕು ರಚನೆಗೆ ಅಧಿಸೂಚನೆ ಕೊಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಮನಗರ ಜಿಲ್ಲೆ ಅಭಿವೃದ್ದಿಯಾಗಿದೆ ಎಂದು ಹೇಳಿದ್ದಾರೆ.

ಇನ್ನೂ ಕಾರ್ಯಕ್ರಮದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಮಾತು ಪ್ರಾರಂಭಿಸುತ್ತಿದ್ದಂತೆ ಸಚಿವ ಅಶ್ವಥ್ ನಾರಾಯಣ್ ಅಲ್ಲಿಂದ ತೆರಳಿದರು. ಈ ವೇಳೆ ಮಾತನಾಡಿ ಅಶ್ವಥ್ ನಾರಾಯಣ್ ಗೆ ತಿರುಗೇಟು ನೀಡಿದ ಅನಿತಾ ಕುಮಾರಸ್ವಾಮಿ, ನಾವು ಬರುವುದಕ್ಕೂ ಮುನ್ನ ಕಚೇರಿ ಉದ್ಘಾಟನೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನವೇ ತಾಲೂಕು ಘೋಷಣೆಯಾಗಿತ್ತು. 450 ಕೋಟಿ ರೂ ವೆಚ್ಚದಲ್ಲಿ ಕುಡಿಯವ ನೀರು ಯೋಜನೆಯಾಗಿದ್ದು ಹೆಚ್.ಡಿ ಕುಮಾರಸ್ವಾಮಿ ಅವಧಿಯಲ್ಲಿ ಈ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಬಂದಿದ್ದರೇ ಯಾರು ಮಾತನಾಡುತ್ತಿರಲಿಲ್ಲ ಎಂದು ಅಶ್ವಥ್ ನಾರಾಯಣ್ ವಿರುದ್ದ ಕಿಡಿಕಾರಿದ್ದಾರೆ.












Click it and Unblock the Notifications