BJP-JDS alliance: ಎಚ್‌ಡಿ ಕುಮಾರಸ್ವಾಮಿಗೆ ಪ್ರಧಾನಿ ಮೋದಿ ಸಂಪುಟದಲ್ಲಿ ಕೃಷಿ ಖಾತೆ?
ಬೆಂಗಳೂರು, ಜನವರಿ 07: ಲೋಕಸಭಾ ಚುನಾವಣೆ ಸಲುವಾಗಿ ಕರ್ನಾಟಕದ ಪ್ರಾದೇಶಿಕ ಜೆಡಿಎಸ್ ಪಕ್ಷವು ಎನ್‌ಡಿಎ ಮೈತ್ರಿಯ ಭಾಗವಾಗಿರುವುದು ಜಗಜ್ಜಾಹೀರಾಗಿದೆ. ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಕೇಂದ್ರ ಸರ್ಕಾರ ತನ್ನ ಸಂಪುಟದಲ್ಲಿ ಕೃಷಿ ಖಾತೆಯ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.
ಕರ್ನಾಟಕದಲ್ಲಿ ಒಕ್ಕಲಿಗರ ಪ್ರಾಬಲ್ಯ ಇರುವ ಲೋಕಸಭಾ ಸ್ಥಾನಗಳ ಮೇಲೆ ಬಿಜೆಪಿ ಹಿಂದಿನಿಂದಲೂ ಕಣ್ಣಿಟ್ಟಿದೆ. ಇದೀಗ ಜೆಡಿಎಸ್ ಅನ್ನು ತನ್ನೆಡೆಗೆ ಸೆಳೆದಿರುವ ಬಿಜೆಪಿಯು ಮೈತ್ರಿ ಮೂಲಕ ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದ ಕ್ಷೇತ್ರಗಳನ್ನು ಗೆಲ್ಲಲು ತಂತ್ರ ರೂಪಿಸಿದೆ.

ಕೇಂದ್ರ ಸಂಪುಟ ವಿಸ್ತರಣೆ: ಹೊಸಬರ ಸೇರ್ಪಡೆ ಸಾಧ್ಯತೆ
ಅಯೋಧ್ಯೆ ಶ್ರಿರಾಮ ಮಂದಿರ ಉದ್ಘಾಟನೆ ನಂತರ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಈ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಸಂಪುಟಕ್ಕೆ ಸೇರಿದ್ದ ಆದರೆ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗುವ ಸಂಭವವಿದೆ. ಇದೇ ವೇಳೆ ಒಟ್ಟು ಐದು ಮಂದಿ ಹೊಸ ನಾಯಕರು ಕೇಂದ್ರ ಸಂಪುಟ ಸೇರಲಿದ್ದಾರೆ.
ಈ ಹಿಂದೆ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೇ ಮೈತ್ರಿಯ ಮಾತುಗಳು ಕೇಳಿ ಬಂದಿದ್ದು. ಅದಾದ ಬಳಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ಮೈತ್ರಿ ಗುಟ್ಟಾಗಿ ಉಳಿಯಲಿಲ್ಲ. ಈಗಾಗಲೇ ಖುದ್ದು ಎಚ್‌ಡಿ ದೇವೇಗೌಡುರು ಹಾಗೂ ಎಚ್‌ಡಿ ಕುಮಾರಸ್ವಾಮಿಯವರೇ ಕೇಂದ್ರ ವರಿಷ್ಠರ ಬಳಿ ಚರ್ಚಿಸಿದ್ದಾರೆ.
ಕೇಂದ್ರ ಸಂಪುಟಕ್ಕೆ ಸೇರಲು ಎಚ್‌ಡಿಕೆ ಒಲವು
ಈ ವೇಳೆ ಎಚ್‌ಡಿ ಕುಮಾರಸ್ವಾಮಿ ಅವರನ್ನು ಪ್ರಧಾನಿ ಮೋದಿಯವರು ವಿಧಾನಸಭೆಯ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸುವ ಕುರಿತು ಅಭಿಪ್ರಾಯ ಹೊರ ಹಾಕಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಎಚ್‌ಡಿಕೆ ಅವರು, ನಾನು ಈಗಾಗಲೇ ಎರಡು ಭಾರಿ ಸಿಎಂ ಆಗಿ, ಒಂದು ಭಾರಿ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ಮತ್ತೆ ಅದೇ ವಿರೋಧ ಪಕ್ಷದ ಸ್ಥಾನ ಬೇಡ. ಬದಲಾಗಿ ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಅವರು ಕೋರಿದ್ದರು ಎನ್ನಲಾಗಿದೆ.

ಆದರೆ ಅಂದು ಕೇಂದ್ರ ಬಿಜೆಪಿ ನಾಯಕರು ಈ ಬಗ್ಗೆ ಒಪ್ಪಿಗೆ ನೀಡಿರಲಿಲ್ಲವಾದರೂ ಇಂದು ಎಚ್‌ಡಿ ಕುಮಾರಸ್ವಾಮಿ ಅವರ ಆಸೆಯನ್ನು ಈಡೇರಿಲು ಮನಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಗೆದ್ದ ಬಳಿಕ ರಾಜೀನಾಮೆ ನೀಡಿದ್ದ ಕೃಷಿ ಮತ್ತು ಕಲ್ಯಾಣ ಖಾತೆಯ ಸಚಿವ ನರೇಂದ್ರ ಸಿಂಗ್ ತೂಮರ್ ಸ್ಥಾನ ತೆರವಾಗಿದ್ದು, ಆ ಸ್ಥಾನ ಕುಮಾರಸ್ವಾಮಿ ಅವರಿಗೆ ಒಲಿಯುವ ನಿರೀಕ್ಷೆ ಇದೆ.
ಶೋಭಾ ಕರಂದ್ಲಾಜೆ ಸ್ಥಾನ ತೆರವು?
ಒಂದು ವೇಳೆ ತೋಮರ್ ಸ್ಥಾನ ಸಿಗದಿದ್ದಲ್ಲಿ, ಕೇಂದ್ರದ ಕೃಷಿ ಖಾತೆ ಕರ್ನಾಟಕ ರಾಜ್ಯ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಶೋಭಾ ಕರಂದ್ಲಾಜೆ ಅವರ ಸ್ಥಾನವನ್ನು ಎಚ್‌ಡಿಕೆ ನೀಡಿ, ಶೋಭಾ ಅವರ ಖಾತೆಯನ್ನು ಬದಲಾಯಿಸುವ ಸಾಧ್ಯತೆಗಳು ದಟ್ಟವಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ.
ಸದ್ಯ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ಹೆಣೆಯುತ್ತಿರುವ ಬಿಜೆಪಿ, ಜೆಡಿಎಸ್ ಜತೆ ಕೈಜೋಡಿಸಿ ಕರ್ನಾಟಕದ ಒಕ್ಕಲಿಗರ ಪ್ರಾಬಲ್ಯ ಕ್ಷೇತ್ರಗಳಾಗಿರುವ ಮಂಡ್ಯ, ಮೈಸೂರು, ಹಾಸನ, ತುಮಕೂರು, ಬೆಂಗಳೂರು ಉತ್ತರ, ಕೋಲಾರ ಮತ್ತು ಚಿಕ್ಕಬಳ್ಳಾಪುರದಂತೆ ಹಲವು ಕೇತ್ರಗಳನ್ನು ಗೆಲ್ಲಲೇಬೆಕೆಂಬ ತವಕದಲ್ಲಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳ ನಿರ್ಧಾರಗಳ ಮೇಲೆ ಅದರಲ್ಲೂ ಬಿಜೆಪಿ ಕೈಗೊಳ್ಳುವ ನಿರ್ಧಾರದ ಮೇಲೆ ಕುತೂಹಲ ಹೆಚ್ಚಾಗಿದೆ.












Click it and Unblock the Notifications