ಯಡಿಯೂರಪ್ಪ ಮನೆ ಮೇಲಿನ ದಾಳಿಯ ಹಿಂದೆ ಬಿಜೆಪಿಯದ್ದೇ ಕೈವಾಡವಿದೆ: ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ
ಎಚ್‌ಡಿ ಕೋಟೆ, ಮಾರ್ಚ್ 28: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ( Karnataka Assembly Elections 2023 ) ವರುಣಾ ಜೊತೆಗೆ ಕೋಲಾರದಿಂದಲೂ ಸ್ಪರ್ಧಿಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ( Siddaramaiah ) ಹೇಳಿದರು. ಕಾಂಗ್ರೆಸ್‌ನ ( Congress ) ಮೊದಲ ಪಟ್ಟಿಯ ಪ್ರಕಾರ, ಸಿದ್ದರಾಮಯ್ಯನವರು ವರುಣಾದಿಂದ ಕಣಕ್ಕಿಳಿಯುವುದು ಖಚಿತವಾಗಿದೆ.
ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆಯಲ್ಲಿ ಮಾತನಾಡಿದ ಅವರು, ಪಕ್ಷವು ವರುಣಾದಿಂದ ಸ್ಪರ್ಧಿಸುವಂತೆ ಹೇಳಿದೆ. ಕೋಲಾರದಿಂದಲೂ ಸ್ಪರ್ಧಿಸುವಂತೆ ಜನರು ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ವರುಣಾ ಜೊತೆಗೆ ಕೋಲಾರದಿಂದಲೂ ಕಣಕ್ಕಿಳಿಯುತ್ತೇನೆ ಎಂದು ಅವರು ಖಚಿತ ಪಡಿಸಿದ್ದಾರೆ.

ವರುಣಾ ವಿಧಾನಸಭೆ ಕ್ಷೇತ್ರದಿಂದ ಜಯಗಳಿಸಿದೆ. ಅದು ಸಿದ್ದರಾಮಯ್ಯವರಿಗೆ ಅದೃಷ್ಟದ ಕ್ಷೇತ್ರವೆಂದು ಜನರು ಹೇಳುತ್ತಾರೆ. ಅಲ್ಲಿಂದ ಗೆದ್ದ ಮೇಲೆಯೇ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದೆ. ನನ್ನ ಬದುಕಿನ ಕೊನೆಯ ಚುನಾವಣೆ ನನ್ನ ಹುಟ್ಟೂರಿನಲ್ಲೇ ಆಗಬೇಕಿದೆ. ಈ ಆಸೆ ನನಗೂ ಇದೆ. ಈ ಹಿನ್ನೆಲೆಯಲ್ಲಿ ನಾನು ವರುಣಾದೊಂದಿಗೆ ಕೋಲಾರದಿಂದಲೂ ಕಣಕ್ಕಿಳಿಯುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಿಜೆಪಿ- ಜೆಡಿಎಸ್ ಮೈತ್ರಿ
ಜೆಡಿಎಸ್ - ಬಿಜೆಪಿ ಮೈತ್ರಿ ಕುರಿತಂತೆ ಮಾತನಾಡಿದ ಸಿದ್ದರಾಮಯ್ಯ, ಕಳೆದ ಚುನಾವಣೆಯಲ್ಲಿಯೂ ಈ ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿದ್ದವು. ಈ ಬಾರಿಯೂ ಮೈತ್ರಿ ಮಾಡಿಕೊಂಡರೂ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದರು.

ಯಡಿಯೂರಪ್ಪ ಮನೆ ಮೇಲೆ ದಾಳಿ ವಿಚಾರ
ಒಳ ಮೀಸಲಾತಿ ವಿರೋಧಿಸಿ ಬಂಜಾರ ಸಮುದಾಯವರು ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿ ಎಸ್ ಯಡಿಯೂರಪ್ಪ ಮನೆ ಮೇಲಿನ ದಾಳಿಯ ಹಿಂದೆ ಬಿಜೆಪಿ ಕೈವಾಡ ಇರಬಹುದು ಎಂದು ಹೇಳಿದ್ದಾರೆ.
ಚಾಮರಾಜಪೇಟೆ, ಕೋಲಾರ, ಬಾದಾಮಿ, ಕೊಪ್ಪಳ, ವರುಣಾ, ಚಾಮರಾಜನಗರ ಸೇರಿದಂತೆ ಕಳೆದ ಕೆಲವು ತಿಂಗಳುಗಳಿಂದ ಸಿದ್ದರಾಮಯ್ಯನವರ ಸಂಭಾವ್ಯ ಕ್ಷೇತ್ರಗಳ ಹೆಸರುಗಳು ಕೇಳಿಬರುತ್ತಲೇ ಇವೆ. 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನಿಂದ ಕಂಗೆಟ್ಟಿದ್ದ ಅವರ ಹಿಂಬಾಲಕರು ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಬೇಕೊಳ್ಳುವಂತೆ ಒತ್ತಾಯಿಸಿದ್ದರು.
1983 ರಲ್ಲಿ ಲೋಕದಳದ ಟಿಕೆಟ್ ಮೂಲಕ ಸಿದ್ದರಾಮಯ್ಯ ಪಾದಾರ್ಪಣೆ ಮಾಡಿದ ಕ್ಷೇತ್ರವಿದು. ಅಂದಿನಿಂದ ಎಂಟು ಚುನಾವಣೆಗೆ ಸ್ಪರ್ಧಿಸಿ ಐದರಲ್ಲಿ ಗೆದ್ದಿದ್ದಾರೆ. ಜೆಡಿಎಸ್‌ನಿಂದ ಉಚ್ಛಾಟನೆಗೊಂಡು ಕಾಂಗ್ರೆಸ್ ಸೇರಿದ ನಂತರ, 2006 ರಲ್ಲಿ ತಮ್ಮ ವೃತ್ತಿ ಜೀವನದ ಅತ್ಯಂತ ಕಠಿಣ ಚುನಾವಣೆಗಳಲ್ಲಿ ಒಂದನ್ನು ಎದುರಿಸಿ 257 ಮತಗಳ ಅಂತರದಿಂದ ಗೆದ್ದರು.

2008 ರಲ್ಲಿ ಕ್ಷೇತ್ರಗಳ ವಿಂಗಡಣೆಯ ನಂತರ, ಮೈಸೂರು ನಗರಕ್ಕೆ ಸಮೀಪವಿರುವ ಗ್ರಾಮಾಂತರ ಭಾಗವಾದ ವರುಣಾ, ನಂಜನಗೂಡಿನ ಬದನವಾಳು ಹೋಬಳಿಯ ಭಾಗಗಳಾದ ಚಾತ್ರ ಮತ್ತು ಬಿಲ್ಗೆರೆ, ಮೈಸೂರು ತಾಲ್ಲೂಕಿನಿಂದ ವರುಣ ಹೋಬಳಿ ಮತ್ತು ಟಿ ನರಸೀಪುರದ ಕಸಬಾ ಹೋಬಳಿಗಳೊಂದಿಗೆ ರಚನೆಯಾಯಿತು.
ಇದು ಲಿಂಗಾಯತರಿಂದ ಪ್ರಾಬಲ್ಯ ಹೊಂದಿದೆ, ನಂತರ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ( ನಾಯಕ ಸಮುದಾಯ ), ಕುರುಬರು, ಉಪ್ಪಾರರು, ಇತರ ಹಿಂದುಳಿದ ಸಮುದಾಯಗಳು, ಅಲ್ಪಸಂಖ್ಯಾತರು ಮತ್ತು ಒಕ್ಕಲಿಗರ ಸಣ್ಣ ಜನಸಂಖ್ಯೆಯನ್ನು ಒಳಗೊಂಡಿದೆ. ಇಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಒಕ್ಕಲಿಗ ಜನಸಂಖ್ಯೆ ಇರುವುದರಿಂದ ಸಿದ್ದರಾಮಯ್ಯನವರ ಗೆಲುವು ಸಲೀಸಾಗಬಹುದೆಂದು ನಂಬಲಾಗಿದೆ. ಈ ಕ್ಷೇತ್ರವು ಸಿದ್ದರಾಮಯ್ಯನವರಿಗೆ ಅದೃಷ್ಟದ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದೆ.












Click it and Unblock the Notifications