ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕರ್ನಾಟಕದಲ್ಲಿ ಕೊರೊನಾ ರೋಗಿಗೆ ನೀಡುವ ಹಾಸಿಗೆಯಲ್ಲೂ ಹಗರಣ"

|
Google Oneindia Kannada News

ಬೆಂಗಳೂರು, ಮೇ 4: ಕರ್ನಾಟಕದಲ್ಲಿ ಪ್ರತಿನಿತ್ಯ 40,000ಕ್ಕೂ ಅಧಿಕ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರ ಮಧ್ಯೆ ಕೊವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಇರುವ ಹಾಸಿಗೆಗಳನ್ನೂ ಕೂಡ ಅಕ್ರಮಕ್ಕೆ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಕೊರೊನಾವೈರಸ್ ರೋಗಿಗಳನ್ನು ವಂಚಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಂದೀಪ್ ಸಿಂಗ್ ಸುರ್ಜೆವಾಲಾ ಟ್ವಿಟರ್ ಮೂಲಕ ಆರೋಪಿಸಿದ್ದಾರೆ.

ಬೆಡ್ ಬ್ಲಾಕಿಂಗ್ ಅವ್ಯವಹಾರ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ಅವ್ಯವಹಾರ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ

ಅಕ್ರಮವಾಗಿ ಬೆಡ್ ಬುಕಿಂಗ್ ಮಾಡುತ್ತಿದ್ದ ಮಾಫಿಯಾವನ್ನು ಸ್ವತಃ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೇ ಬಯಲಿಗೆಳೆದಿದ್ದಾರೆ. ಬಿಬಿಎಂಪಿ ಬೆಡ್ ಗಳು ಅಕ್ರಮವಾಗಿ ಬುಕ್ ಆಗುತ್ತಿರುವುದನ್ನು ಬಹಿರಂಗಪಡಿಸಿದ್ದು, ಈ ಅಕ್ರಮದಲ್ಲಿ ಶಾಮೀಲಾಗಿರುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಯಾವೆಲ್ಲ ವಿಷಯಗಳಲ್ಲಿ ಅಕ್ರಮಗಳನ್ನು ಎಸಗಿದೆ ಎನ್ನುವುದರ ಬಗ್ಗೆ ದೊಡ್ಡ ಪಟ್ಟಿ ಮಾಡಲಾಗಿದೆ. ಕಾಂಗ್ರೆಸ್ ಮುಖಂಡ ಉಲ್ಲೇಖಿಸಿದ ಅಕ್ರಮಗಳ ಪಟ್ಟಿಯನ್ನು ಮುಂದೆ ಓದಿ.

Karnataka BJP Govt Has Deceived Coronavirus Patients, Randeep Singh Surjewala Allegation


ಸರ್ಕಾರದ ವೈಫಲ್ಯ ಮತ್ತು ಅಕ್ರಮಗಳ ಪಟ್ಟಿ:

* ಆಮ್ಲಜನಕ ಕೊರತೆಯಿಲ್ಲದೇ ಕೊರೊನಾವೈರಸ್ ರೋಗಿಗಳು ಮೃತಪಡುತ್ತಿದ್ದಾರೆ

* ಕಾಳ ಸಂತೆಯಲ್ಲಿ ಅಕ್ರಮವಾಗಿ ಕೊವಿಡ್-19 ಔಷಧಿಗಳ ಮಾರಾಟ

* ಕೊವಿಡ್-19 ಪರೀಕ್ಷೆಯೂ ಇಲ್ಲ, ಸೋಂಕಿತರ ಹುಡುಕಾಟವೂ ಇಲ್ಲ

* ವೆಂಟಿಲೇಟರ್ ವ್ಯವಸ್ಥೆಯೂ ಇಲ್ಲ

* ಇದೀಗ ಬಿಬಿಎಂಪಿ ಕೊವಿಡ್-19 ಹಾಸಿಗೆಗಳಲ್ಲೂ ಭ್ರಷ್ಟಾಚಾರ

English summary
Karnataka BJP Govt Has Deceived Coronavirus Patients, Congress Leader Randeep Singh Surjewala Allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X