ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ; ಕೋರ್ ಕಮಿಟಿ ಸಭೆಯಲ್ಲಿ ಆಗಿದ್ದೇನು?
ಬೆಂಗಳೂರು,ಸೆಪ್ಟೆಂಬರ್ 12: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬಳಿಕ ಮಾಜಿ ಹಾಗೂ ಹಾಲಿ ಶಾಸಕರು ಮತ್ತು ಮುಖಂಡರ ಅಸಮಾಧಾನ ಹೆಚ್ಚಾಗಿದ್ದು, ಅಸಮಾಧಾನ ಶಮನಕ್ಕೆ ಹುಬ್ಬಳ್ಳಿ-ಧಾರವಾಡ ಬಿಜೆಪಿ ನಾಯಕರನ್ನ ಜೊತೆ ಸಭೆ ನಡೆಸಿದ್ದು, ಸಭೆಯಲ್ಲೇ ಭಿನ್ನಮತ ಸ್ಟೋಟಗೊಂಡಿದೆ.
ಹೌದು, ಹುಬ್ಬಳ್ಳಿ-ಧಾರವಾಡ ಹಲವು ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇ ಸೇರಿದ್ದು, ಹುಬ್ಬಳ್ಳಿ-ಧಾರವಾಡ ಕಮಲ ಕೋಟೆಯಲ್ಲಿ ಅಸಮಾಧಾನ ಭುಗಿಲೆದಿದೆ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನ ಗೆಲ್ಲುವ ಗುರಿ ಹಾಕಿಕೊಂಡಿರುವ ಕಾಂಗ್ರೆಸ್ ಹಲವು ಬಿಜೆಪಿ ಅಸಮಾಧಾನಿತರಿಗೆ ದಾಳ ಉರುಳಿಸಿದೆ.

ಈಗಾಗಲೇ ಲೋಕಸಮರಕ್ಕೆ ಸಜ್ಜಾಗಿರುವ ಕಾಂಗ್ರೆಸ್ ನಲ್ಲಿ ಮಾಜಿ ಸಿಎಂ ಹಾಗೂ ವಿಧಾನ ಪರಿಷತ್ ಸದಸ್ತ ಜಗದೀಶ್ ಶೆಟ್ಟರ್ ಮೂಲಕ ಬಿಜೆಪಿಯ ಲಿಂಗಾಯತ ನಾಯಕರಿಗೆ ಕಾಂಗ್ರೆಸ್ ದಾಳ ಉರುಳಿಸಿದ್ದು, ಇತ್ತ ಬಿಜೆಪಿ ಎಚ್ಚೆತ್ತುಕೊಂಡು ಅಸಮಾಧಾನ ಶಮನಗೊಳಿಸಲು ಕೋರ್ ಕಮಿಟಿ ಸಭೆ ಕರೆದಿದೆ.
ಇನ್ನೂ ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಭಿನ್ನಮತ ಶಮನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಖಾಸಗಿ ಹೋಟೆಲ್ನಲ್ಲಿ ಕೋರ್ ಕಮಿಟಿ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಬಿಜೆಪಿ ಅಸಮಾಧಾನಿತ ನಾಯಕರಾದ ಪ್ರದೀಪ್ ಶೆಟ್ಟರ್, ಮುನೇನಕೊಪ್ಪ, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಗೈರಾಗಿದ್ದಾರೆ.
ಇನ್ನು ಕೋರ್ ಕಮಿಟಿ ಸಭೆಯಲ್ಲಿ ಘಟಾನುಘಟಿ ನಾಯಕರು ಭಾಗಿಯಾಗಿದ್ರು. ಶೆಟ್ಟರ್ ಆಪ್ತ ಹಾಗೂ ಮಾಜಿ ಸಚಿವ ಮುನೇನಕೊಪ್ಪ, ಪ್ರದೀಪ್ ಶೆಟ್ಟರ್, ಹಾಗೂ ಅರವಿಂದ್ ಬೆಲ್ಲದ್ ಗೈರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಏಕೆಂದ್ರೆ, ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಬಿಜೆಪಿ ವಿರುದ್ಧ ನೇರವಾಗಿ ಅಸಮಾಧಾನ ಹೊರಹಾಕಿದ್ದರು. ಇನ್ನೂ ಜಗದೀಶ್ ಶೆಟ್ಟರ್ ಆಪ್ತ ಮುನ್ನ ಶಂಕರ ಪಾಟೀಲ ಮುನೇನಕೊಪ್ಪ ಕೂಡ ಅಸಮಾಧಾನ ಹೊರಹಾಕಿದ್ದರು. ಪಕ್ಷದಲ್ಲಿ ಹಿರಿಯರು ಇಲ್ಲದಂತಾಗಿದೆ ಎಂದಿದ್ದರು.
ಇತ್ತ ಬಿಜೆಪಿಯಲ್ಲಿನ ಅಸಮಾಧಾನದಿಂದ ಜಗದೀಶ್ ಶೆಟ್ಟರ್ ಬಿಜೆಪಿ ತೊರೆಯೋ ಲಿಂಗಾಯತ ನಾಯಕರ ಪಟ್ಟಿಯನ್ನೇ ತೆರೆದಿಟ್ಟಿದ್ದು, ಬಿಜೆಪಿ ಹಿರಿಯ ನಾಯಕರು ಫುಲ್ ಅಲರ್ಟ್ ಆಗಿದ್ದಾರೆ. ಈ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಕಾರ್ಯಕರ್ತರನ್ನ ಹುರಿದುಂಬಿಸುವ ನಿಟ್ಟಿನಲ್ಲಿ ಬಿಜೆಪಿ ಹಿರಿಯ ನಾಯಕರು ಮುಂದಾಗಿದ್ದಾರೆ. ಯಾರು ಏನೇ ಮಾತಾಡಿದ್ರು ನಮಗೆ ಕಾರ್ಯಕರ್ತರು ಮುಖ್ಯ. ಒಬ್ಬರು ಇಬ್ಬರು ಮಾತಾಡಿದರೆ ಅದು ಭಿನ್ನಮತ ಅಲ್ಲ. ಬಹಿರಂಗವಾಗಿ ಯಾರೂ ಪಕ್ಷದ ವಿರುದ್ಧ ಹೇಳಿಕೆ ಕೊಡಬಾರದು ಎಂದು ನಾಯಕರು ಖಡಕ್ ಸೂಚನೆ ಕೊಟ್ಟಿದ್ದಾರೆ. ಅಲ್ಲದೇ ಅಸಮಾಧಾನ ಶಮನಗೊಳಿಸಲು ಕರೆದ ಸಭೆಯಲ್ಲಿ ಶಾಸಕರು ಹಾಗೂ ಹಲವು ಅತೃಪ್ತ ನಾಯಕರ ಗೈರಿನಿಂದಾಗಿ ಇನ್ನು ಅಸಮಾಧಾನ ಶಮನವಾಗದಂತೆ ಕಾಣುತ್ತಿದೆ.












Click it and Unblock the Notifications