ಪೊಲೀಸರ ಬಗ್ಗೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ? ‘ಕಮಲ’ ಹೇಳಿದ್ದೇನು?

ರಾಜ್ಯದಲ್ಲಿ ಕಾವೇರಿ ಕಾವು ಹೆಚ್ಚಾಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೂ ಫೈಟಿಂಗ್ ಜೋರಾಗಿದೆ. ಅದ್ರಲ್ಲೂ ತಮಿಳುನಾಡು ಹಠದಿಂದ ರಾಜ್ಯದ ಜನ ಬಳಲುವಾಗ ಪ್ರತಿಭಟನೆ ಕಿಚ್ಚು ಹೆಚ್ಚಾಗುತ್ತಿದೆ. ಹೀಗೆ ರಾಜ್ಯ ಪೊಲೀಸ್ ಇಲಾಖೆಗೆ ಹೊಸ ಟೆನ್ಷನ್ ಶುರುವಾಗಿದ್ದು, ಈ ಹೊತ್ತಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕೂಡ ಗಂಭೀರ ಆರೋಪ ಮಾಡಿದೆ. ಹಾಗಾದರೆ ಪೊಲೀಸರ ಬಗ್ಗೆ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆಯಾ?

ಕಾವೇರಿ ವಿಚಾರದಲ್ಲಿ ಕರ್ನಾಟಕ & ಕನ್ನಡಿಗರಿಗೆ ಭಾರಿ ಹಿನ್ನಡೆಯಾಗಿದೆ. ಬರ ಎದುರಾಗಿರುವ ಸಮಯದಲ್ಲೇ ಗಾಯದ ಮೇಲೆ ಬರೆ ಎಳೆಯುವ ಕೆಲಸ ನಡೆಯುತ್ತಿದೆ. ಹೀಗಾಗಿ ಕನ್ನಡಿಗರನ್ನು ಈಗಿನ ಪರಿಸ್ಥಿತಿ ಬಡಿದೆಬ್ಬಿಸಿದ್ದು ರಾಜ್ಯದ ಮೂಲೆ ಮೂಲೆಯಲ್ಲೂ ಹೋರಾಟ ಶುರುವಾಗಿದೆ. ಈ ಹೊತ್ತಲ್ಲಿ ಬಿಜೆಪಿ ಕೂಡ ರಾಜ್ಯ ಸರ್ಕಾರ ವಿರುದ್ಧ ಗಂಭೀರ ಆರೋಪ ಮಾಡಿದೆ. ಹಾಗಾದ್ರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮಾಡಿದ ಆರೋಪ ಏನು?

BJP continues allegation against Karnataka Congress government in Cauvery Dispute

ಕಾಂಗ್ರೆಸ್ ಸರ್ಕಾರಕ್ಕೆ ಪೊಲೀಸರ ಬಗ್ಗೆ...

ಹೌದು, ಕಾವೇರಿ ವಿಚಾರದಲ್ಲಿ ಬಿಜೆಪಿ ಮಹತ್ವದ ಟ್ವೀಟ್ ಮಾಡಿದೆ. ಅದರಲ್ಲೂ ಮಂಡ್ಯ ಕಾವೇರಿ ಹೋರಾಟದ ಬಗ್ಗೆ ಮಾತನಾಡಿರುವ ಕರ್ನಾಟಕ ಬಿಜೆಪಿ, 'ಈಗಾಗಲೇ ವರ್ಗಾವಣೆ ದಂಧೆಗೆ ಸಿಲುಕಿ ಹೈರಾಣಾಗಿರುವ ವೇತನ ವಿಳಂಬದಿಂದ ಬೇಸತ್ತಿರುವ, ಸಮಾಜಘಾತುಕರನ್ನು ರಕ್ಷಿಸಲೇಬೇಕಾದ ಅನಿವಾರ್ಯತೆಗೆ ಬಿದ್ದಿರುವ ಪೊಲೀಸರಿಗೆ ಈಗ ಮತ್ತೂ ಒಂದು ಸಂಕಷ್ಟ ಎದುರಾಗಿದೆ' ಎಂದು ಬಿಜೆಪಿ ತನ್ನ ಆರೋಪವನ್ನು ಟ್ವೀಟ್ ಮೂಲಕ ಆರಂಭ ಮಾಡಿದೆ.

ಹೀಗೆ ತನ್ನ ಆರೋಪ ಮುಂದುವರಿಸಿ, 'ನಿಮ್ಮ ಮೈತ್ರಿಕೂಟದ ರಾಜಕೀಯ ಹಿತಾಸಕ್ತಿಗಾಗಿ ಸ್ಟಾಲಿನ್‌ ನಾಡಿಗೆ ನೀರು ಹರಿಸಿದ್ದರ ಬಿಸಿಯನ್ನು ಪೊಲೀಸರು ನಡುರಸ್ತೆಯಲ್ಲಿ ಅನುಭವಿಸಬೇಕಿದೆ. ಅನ್ನದಾತ ಮತ್ತು ಆರಕ್ಷಕರಿಬ್ಬರನ್ನೂ ಬೀದಿಯಲ್ಲಿ ಬಡಿದಾಡಿಕೊಳ್ಳಲು ಬಿಟ್ಟು ಕಾಂಗ್ರೆಸ್ ಸರ್ಕಾರ ಮಜಾ ನೋಡುತ್ತಿದೆ' ಎಂದು ಗಂಭೀರ ಆರೋಪ ಮಾಡಿದೆ ಕರ್ನಾಟಕ ಬಿಜೆಪಿ ಘಟಕ. ಅಲ್ಲದೆ, 'ಪ್ರಜ್ಞಾವಂತಿಕೆ ಮೆರೆಯಬೇಕಾದ ಸ್ಥಾನದಲ್ಲಿ ಕೂತ ಕಾಂಗ್ರೆಸ್‌ ಸರ್ಕಾರ ಕರ್ನಾಟಕವನ್ನೇ ಪ್ರಜ್ಞಾಹೀನ ಸ್ಥಿತಿಗೆ ತಳ್ಳುತ್ತಿದೆ' ಎಂದು ಆರೋಪಿಸಿದೆ ಬಿಜೆಪಿ.

ಬಣ್ಣ ಬದಲಿಸುತ್ತಿರುವ ಕಾಂಗ್ರೆಸ್...

ಇದರ ಜೊತೆಗೆ ಮೇಕದಾಟು ವಿಚಾರವನ್ನೂ ಪ್ರಸ್ತಾಪ ಮಾಡಿರುವ ಬಿಜೆಪಿ, 'ಅಧಿಕಾರ ಇಲ್ಲದಾಗ ಒಂದು ಬಣ್ಣ, ಅಧಿಕಾರ ಸಿಕ್ಕಾಗ ಮತ್ತೊಂದು ಬಣ್ಣ ಬದಲಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ನೀರಾವರಿ ವಿಚಾರ ಕೇವಲ ರಾಜಕೀಯ ಆಟ. 2013 ರಿಂದ ಇದುವರೆಗೆ ಕಾಂಗ್ರೆಸ್‌ ಬದಲಿಸಿದ ಬಣ್ಣಗಳ ಕಲರ್‌ ಕಲರ್‌ ಪಟ್ಟಿ ಇಲ್ಲಿವೆ ನೋಡಿ.' ಎಂದು ಮತ್ತೊಂದು ಟ್ವೀಟ್ ಮೂಲಕ ತಿರುಗೇಟು ನೀಡಿದೆ.

ಒಟ್ನಲ್ಲಿ ರಾಜ್ಯದಲ್ಲಿ ಕಾವೇರಿ ಕಾವು ಮತ್ತೊಮ್ಮೆ ರಾಜಕೀಯ ಮೇಲಾಟವಾಗಿದೆ. ಆಡಳಿತ & ವಿಪಕ್ಷಗಳು ಇಲ್ಲಿ ಒಗ್ಗಟ್ಟು ಪ್ರದರ್ಶನ ಮಾಡ್ತಿವೆ ಅಂತಾ ಕನ್ನಡಿಗರು ಅಂದುಕೊಂಡಿದ್ದ ನಿರೀಕ್ಷೆ ಮತ್ತೆ ಸುಳ್ಳಾಗುತ್ತಿದೆ. ಹೀಗೆ ಬಿಜೆಪಿ & ಕಾಂಗ್ರೆಸ್ ಜಗಳದಲ್ಲಿ ಕರ್ನಾಟಕದ ದಾಹ ನೀಗಿಸಬೇಕಿದ್ದ ಕಾವೇರಿ ನೀರು ತಮಿಳುನಾಡಿಗೆ ಹರಿದು, ಕನ್ನಡಿಗರ ಬಾಯಿಗೆ ಬರ ಪಕ್ಕಾ ಆಗಿದೆ ಅಂತಾ ಹೋರಾಟಗಾರರು ಆರೋಪ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+