ಬಿಜೆಪಿ 2ನೇ ಪಟ್ಟಿಯಲ್ಲಿ 6 ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ: ಆ ಸ್ಥಾನಕ್ಕೆ ಟಿಕೆಟ್ ಪಡೆದವರು ಯಾರು?, ತಿಳಿಯಿರಿ
ಬೆಂಗಳೂರು, ಏಪ್ರಿಲ್ 13: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದರ ಬೆನ್ನಲ್ಲೇ ಆಡಳಿತ ಪಕ್ಷ ಬಿಜೆಪಿ ಬುಧವಾರ ತಡರಾತ್ರಿ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿತು. ಅದರಲ್ಲಿ ಹೊಸ ಮುಖಗಳಿಗೆ ಪಕ್ಷ ಮಣೆ ಹಾಕಿದೆ.
ಮೊದಲ ಪಟ್ಟಿ ನಂತರ ಬಾಕಿ ಉಳಿದಿದ್ದ 35 ಕ್ಷೇತ್ರದ ಅಭ್ಯರ್ಥಿಗಳ ಪೈಕಿ 23 ಮಂದಿಗೆ ಟಿಕೆಟ್ ನೀಡಿದ್ದು, 12ಕ್ಷೇತ್ರಗಳಿಗೆ ಮೂರನೇ ಪಟ್ಟಿಯಲ್ಲಿ ಹೆಸರು ಘೋಷಿಸಲಿದೆ. ಈ ಎರಡ ಪಟ್ಟಿಯಲ್ಲಿ 4 ಹೊಸ ಮುಖಗಳಿಗೆ ಟಿಕೆಟ್ ಕೊಡಲಾಗಿದೆ, ಆರು ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದೆ. ಅವರು ಅಸಮಾಧನಗೊಂಡಿದ್ದಾರೆ ಎನ್ನಲಾಗಿದೆ.

ಟಿಕೆಟ್ ಕೈತಪ್ಪಿದ ಹಾಲಿ ಶಾಸಕರು ಯಾರು? ಯಾವ ಕ್ಷೇತ್ರ ಹಾಗೂ ಟಿಕೆಟ್ ಪಡೆದ ಹೊಸಬರು ಯಾರೆಂದು ಇಲ್ಲಿ ತಿಳಿಯೋಣ.
ಟಿಕೆಟ್ ಕೈ ತಪ್ಪಿದ 6 ಹಾಲಿ ಶಾಸಕರ ಪಟ್ಟಿ
| ಕ್ಷೇತ್ರ | ಹೆಸರು |
| ಚನ್ನಗಿರಿ | ಮಾಡಾಳ್ ವಿರೂಪಾಕ್ಷಪ್ಪ |
| ಹಾವೇರಿ | ನೇಹರು ಓಲೆಕಾರ್ |
| ಮೂಡಿಗೆರೆ | ಎಂ.ಪಿ. ಕುಮಾರ್‌ಸ್ವಾಮಿ |
| ಬೈಂದೂರು | ಸುಕುಮಾರ್ ಶೆಟ್ಟಿ |
| ಮಾಯಕೊಂಡ | ಎನ್.ಲಿಂಗಣ್ಣ |
| ಬೆಂಗಳೂರು ಉತ್ತರ | ಎಸ್.ಎ.ರವೀಂದ್ರನಾಥ್ |
ಲಂಚದ ಆರೋಪ ಪ್ರಕರಣದಡಿ ರಾಜ್ಯ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಲುಕಿದ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಸ್ಥಾನದ ಸ್ಥಾನಕ್ಕೆ ಹೊಸ ಅಭ್ಯರ್ಥಿ ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ತಿಳಿಸಿದೆ.
ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಾದ ಹಾವೇರಿ ಕ್ಷೇತ್ರ ಹಾಲಿ ಶಾಸಕ ನೆಹರು ಓಲೇಕಾರ್ ಮತ್ತು ಮೂಡಿಗೆರೆ ಶಾಸಕರಾದ ಎಂಪಿ ಕುಮಾರಸ್ವಾಮಿ ಈ ಇಬ್ಬರೂ ಪ್ರತ್ಯೇಕ ಎರಡು ಭ್ರಷ್ಟಚಾರ ಪ್ರಕರಣದಲ್ಲಿ ಕೋರ್ಟ್ ದೋಷಿ ಎಂದು ತೀರ್ಪು ಪ್ರಕಟಿಸಿತ್ತು. ಹೀಗಾಗಿ ಹಾವೇರಿಗೆ ಹೊಸಬರಾದ ಗವಿಸಿದ್ದಪ್ಪ ದ್ಯಾಮಣ್ಣನವರ್ ಹಾಗೂ ಮೂಡಿಗೆರೆಗೆ ದೀಪಕ್ ದೊಡ್ಡಯ್ಯ ಎಂಬುವವರಿಗೆ ಟಿಕೆಟ್ ಕೊಡಲಾಗಿದೆ.
ಟಿಕೆಟ್ ಪಡೆದ ಹೊಸಬರ ಪಟ್ಟಿ
| ಕ್ಷೇತ್ರ | ಅಭ್ಯರ್ಥಿಗಳು |
| ಚನ್ನಗಿರಿ | ಶಿವಕುಮಾರ್ |
| ಹಾವೇರಿ | ಗೋವಿಂದಪ್ಪ ದ್ಯಾಮಣ್ಣನವರ |
| ಮೂಡಿಗೆರೆ | ದೀಪಕ್ ದೊಡ್ಡಯ್ಯ |
| ಕಲಘಟಗಿ | ನಾಗರಾಜ್ ಛಬ್ಬಿ |
ಅದೇ ರೀತಿ ಮಾಯಕೊಂಡ ಕ್ಷೇತ್ರ ಶಾಸಕ ಎನ್ ಲಿಂಗಣ್ಣ, ಬೈಂದೂರು ಕ್ಷೇತ್ರ ಶಾಸಕರಾದ ಸುಕುಮಾರ್ ಶೆಟ್ಟಿ, ದಾವಣಗೆರೆ ಉತ್ತರದ ಶಾಸಕ ಎಸ್.ಎ. ರವೀಂದ್ರನಾಥ್ (ಇವು ನಿವೃತ್ತಿ ಘೋಷಿಸಿದ್ದಾರೆ) ಅವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ.
ಕಲಘಟಗಿ: ಬಿಜೆಪಿಗೆ ಸೇರಿದವರಿಗೆ ಟಿಕೆಟ್
ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣನವರ್ ಅವರಿಗೆ ಸಿಗಬೇಕಿದ್ದ ಟಿಕೆಟ್ ಇತ್ತೀಚೆಗೆ ಟಿಕೆಟ್ ವಿಚಾರವಾಗೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಮಾಜಿ ವಿಧಾನಪರಿಷತ್ ಸದಸ್ಯರಾದ ನಾಗರಾಜ್ ಛಬ್ಬಿ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ತಮ್ಮ ಕ್ಷೇತ್ರದಲ್ಲಿ ಸಂತೋಷ್ ಲಾಡ್ ವಿರುದ್ಧ ಸೆಣಸಲಿದ್ದಾರೆ.
ಹರಪ್ಪನಹಳ್ಳಿ ಕ್ಷೇತ್ರದ ಹಾಲಿ ಶಾಸಕ ಕರುಣಾಕರ್ ರೆಡ್ಡಿಗೂ ಟಿಕೆಟ್ ಕೈ ಸಿಕ್ಕಿದೆ. ಬಿಜೆಪಿಯ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪನವರ ಮಾಜಿ ಆಪ್ತ ಸಹಾಯಕ ಎನ್.ಆರ್ ಸಂತೋಷ್ ಅವರು ಅರಸೀಕೆರೆ ಟಿಕೆಟ್ ಆಕಾಂಕ್ಷಿಯಾಗಿದ್ದರು, ಅವರನ್ನು ಟಿಕೆಟ್ ಗೆ ನಾಮ ನಿರ್ದೇಶಿಸಲಾಗಿದೆ.
12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಬಾಕಿ
ಆಡಳಿತಾರೂಢ ಬಿಜೆಪಿ ಪಕ್ಷವು ಒಟ್ಟು 224 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸದೆ ಬಿಟ್ಟಿದೆ. ಅವರು ಯಾರು ಎಂದು ನೋಡುವುದಾದರೆ ಮಾಜಿ ಮುಖ್ಯಮಂತ್ರಿ ಆರು ಭಾರಿ ಸತತವಾಗಿ ಗೆದ್ದ ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಹುಬ್ಬಳ್ಳಿ-ಧಾರವಾಡ (ಕೇಂದ್ರ), ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಬಾಕಿ ಇದೆ.
ಅದೇ ರೀತಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಶಿವಮೊಗ್ಗ ನಗರ ಕ್ಷೇತ್ರ, ಹಾಲಿ ಸಚಿವ ವಿ.ಸೋಮಣ್ಣ ಅವರ ಗೋವಿಂದರಾಜನಗರ, ಹಾಲಿ ಶಾಸಕರಾದ ಎಸ್.ಎ.ರಾಮದಾಸ್ ಮತ್ತು ಹಾಲಿ ಶಾಸಕ ರಾಜಕುಮಾರ್ ಪಾಟೀಲ್ ಸೇಡಂ ಅವರ ಕ್ಷೇತ್ರಗಳು ಹಾಗೂ ಹಾಲಿ ಶಾಸಕ ಕಳಕಪ್ಪ ಬಂಡಿ ಅವರ ರೋನ್, ಕೊಪ್ಪಳ, ಹೆಬ್ಬಾಳ, ಹಗರಿಬೊಮ್ಮನಹಳ್ಳಿ, ನಾಗಠಾಣ ಮತ್ತು ಮಾನ್ವಿ ವಿಧಾಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಆಗಬೇಕಿದೆ. ಇದು ಮೂರನೇ ಪಟ್ಟಿಯಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ.












Click it and Unblock the Notifications