12 ಜಿಲ್ಲೆಗೆ ನೂತನ ಅಧ್ಯಕ್ಷರನ್ನು ನೇಮಿಸಿದ ಕರ್ನಾಟಕ ಬಿಜೆಪಿ
ಬೆಂಗಳೂರು, ಜನವರಿ 28 : ಕರ್ನಾಟಕ ಬಿಜೆಪಿ ನೂತನ ರಾಜ್ಯಾಧ್ಯಕ್ಷರ ನೇಮಕದ ಬಳಿಕ ಜಿಲ್ಲಾ ಸಂಘಟನೆಯತ್ತ ಗಮನ ಹರಿಸಿದೆ. 12 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
Recommended Video
ಮಂಗಳವಾರ ಬಿಜೆಪಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಬಿಜೆಪಿ ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಜನವರಿ 16ರಂದು ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನೂತನ ರಾಜ್ಯಾಧ್ಯಕ್ಷರ ನೇಮಕದ ಚುನಾವಣೆ ನಡೆದಿತ್ತು. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ 2020-2023 ನೇ ಸಾಲಿಗೆ ನೇಮಕಗೊಂಡಿದ್ದರು.
ಜನವರಿ 20ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆದಿತ್ತು. ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಜೆ. ಪಿ. ನಡ್ಡಾ ಆಯ್ಕೆಯಾಗಿದ್ದರು. ಈಗ ಜಿಲ್ಲಾ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ನೂತನ ಅಧ್ಯಕ್ಷರ ಪಟ್ಟಿ
* ಮೈಸೂರು ನಗರ - ಶ್ರೀವತ್ಸ
* ಮೈಸೂರು ಗ್ರಾಮಾಂತರ - ಎಸ್. ಡಿ. ಮಹೇಂದ್ರ
* ಚಾಮರಾಜನಗರ - ಆರ್. ಸುಂದರ್
* ಉಡುಪಿ - ಕುಯ್ಲಾಡಿ ಸುರೇಶ್ ನಾಯಕ್

ಬಿಜೆಪಿ ಜಿಲ್ಲಾಧ್ಯಕ್ಷರು
* ಉತ್ತರ ಕನ್ನಡ - ವೆಂಕಟೇಶ್ ನಾಯಕ್
* ಬಾಗಲಕೋಟೆ - ಶಾಂತಪ್ಪ ಗೌಡ ತೀರ್ಥಪ್ಪ ಗೌಡ ಪಾಟೀಲ್
* ರಾಯಚೂರು - ರಮಾನಂದ ಯಾದವ್

ಬಿಜೆಪಿಯ ನೂತನ ಅಧ್ಯಕ್ಷರು
* ಬಳ್ಳಾರಿ - ಚನ್ನಬಸವಗೌಡ ಪಾಟೀಲ್
* ದಾವಣಗೆರೆ - ವೀರೇಶ ಹನಗವಾಡಿ
* ಬೆಂಗಳೂರು ಗ್ರಾಮಾಂತರ - ಎ. ವಿ. ನಾರಾಯಣಸ್ವಾಮಿ

ಜಿಲ್ಲಾಧ್ಯಕ್ಷರು
* ಬೆಂಗಳೂರು ಕೇಂದ್ರ - ಜೆ. ಮಂಜುನಾಥ್
* ಬೆಂಗಳೂರು ದಕ್ಷಿಣ - ಎನ್. ಆರ್. ರಮೇಶ್












Click it and Unblock the Notifications