ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ
ಬೆಂಗಳೂರು, ನವೆಂಬರ್ 15 : ಆರು ವಿಧಾನಪರಿಷತ್ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗ ಬಿಜೆಪಿ ತನ್ನ 6 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.
ನೈಋತ್ಯ ಶಿಕ್ಷಕರ ಕ್ಷೇತ್ರದ ಗಣೇಶ ಕಾರ್ಣಿಕ್ ಅವರನ್ನು ಹೊರತುಪಡಿಸಿ ಉಳಿದ ಹಾಲಿ ಬಿಜೆಪಿ ಪರಿಷತ್ ಸದಸ್ಯರಿಗೆ ಬಿಎಸ್ ವೈ ಕೊಕ್ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದಾರೆ. ಮೊನ್ನೆ ಅಷ್ಟೇ ಬಿಜೆಪಿ ಸೇರಿದ್ದ ಎ. ದೇವೇಗೌಡ ಅವರಿಗೆ ಟಿಕೆಟ್ ದಕ್ಕಿಸಿಕೊಡುವಲ್ಲಿ ಆರ್ ಅಶೋಕ್ ಯಶಸ್ವಿಯಾಗಿದ್ದಾರೆ.
ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ನೇತೃತ್ವದಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪರಿಷತ್ತಿನ 6 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಒಮ್ಮತದ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ.
ಆದ್ದರಿಂದ, ಜಾವ್ಡೇಕರ್ ಯಡಿಯೂರಪ್ಪ ಅವರಿಗೆ ಪಟ್ಟಿ ಅಂತಿಮಗೊಳಿಸುವ ಜವಾಬ್ದಾರಿ ನೀಡಿದ್ದರು, ಅದರಂತೆ ಬಿಎಸ್ ವೈ ಆರು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಗೊಳಿಸಿದ್ದಾರೆ.

ಆರು ಅಭ್ಯರ್ಥಿಗಳ ಪಟ್ಟಿ
1. ನೈರುತ್ಯ ಪದವೀಧರರ ಕ್ಷೇತ್ರ- ಮಾಜಿ ಸಂಸದ ಆಯನೂರು ಮಂಜುನಾಥ್ 2. ನೈರುತ್ಯ ಶಿಕ್ಷಕರ ಕ್ಷೇತ್ರ- ಕ್ಯಾಪ್ಟನ್ ಗಣೇಶ್ ಕಾರ್ಣಿಕ್ 3. ಬೆಂಗಳೂರು ಪದವೀಧರ ಕ್ಷೇತ್ರ- ಎ ದೇವೇಗೌಡ 4. ದಕ್ಷಿಣ ಪದವೀಧರ ಕ್ಷೇತ್ರ- ಬಿ ನಿರಂಜನ್ ಮೂರ್ತಿ 5. ಆಗ್ನೇಯ ಶಿಕ್ಷಕರ ಕ್ಷೇತ್ರ- ಡಾ, ಹಾಲನೂರು ಲೇಪಾಕ್ಷಿ 6. ಈಶಾನ್ಯ ಪದವೀಧರ ಕ್ಷೇತ್ರ - ಕೆ. ಬಿ. ಶ್ರೀನಿವಾಸ.

ಹೊಸ ಮುಖಗಳಿಗೆ ಮಣೆ
ನೈಋತ್ಯ ಶಿಕ್ಷಕರ ಕ್ಷೇತ್ರದ ಗಣೇಶ ಕಾರ್ಣಿಕ್ ಅವರನ್ನು ಹೊರತುಪಡಿಸಿ ಉಳಿದ ಹಾಲಿ ಬಿಜೆಪಿ ಪರಿಷತ್ ಸದಸ್ಯರಿಗೆ ಬಿಎಸ್ ವೈ ಕೊಕ್ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದಾರೆ. ಮೊನ್ನೆ ಅಷ್ಟೇ ಬಿಜೆಪಿ ಸೇರಿದ್ದ ಎ. ದೇವೇಗೌಡ ಅವರಿಗೆ ಟಿಕೆಟ್ ದಕ್ಕಿಸಿಕೊಡುವಲ್ಲಿ ಆರ್ ಅಶೋಕ್ ಯಶಸ್ವಿಯಾಗಿದ್ದಾರೆ. ಇನ್ನು ಬಿಎಸ್ ವೈ ಆಪ್ತ ಆಯನೂರು ಮಂಜುನಾಥ ಟಿಕೆಟ್ ನೀಡಲಾಗಿದೆ.

ಪಟ್ಟಿಯನ್ನು ಅಂತಿಮ ಗೊಳಿಸಿದ್ದು ಬಿಎಸ್ ವೈ
ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ನೇತೃತ್ವದಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪರಿಷತ್ತಿನ 6 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಒಮ್ಮತದ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ, ಜಾವ್ಡೇಕರ್ ಯಡಿಯೂರಪ್ಪ ಅವರಿಗೆ ಪಟ್ಟಿ ಅಂತಿಮಗೊಳಿಸುವ ಜವಾಬ್ದಾರಿ ನೀಡಿದ್ದರು, ಅದರಂತೆ ಬಿಎಸ್ ವೈ ಆರು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಗೊಳಿಸಿದ್ದಾರೆ.

ಯಾವ ಕ್ಷೇತ್ರಗಳಿಗೆ, ಯಾವಾಗ ಚುನಾವಣೆ?
ಮುಂದಿನ ವರ್ಷದ ಜೂನ್ ತಿಂಗಳಿನಲ್ಲಿ ಸದಸ್ಯತ್ವದ ಅವಧಿ ಮುಗಿಯಲಿರುವ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೆಂಗಳೂರು ಪದವೀಧರ ಕ್ಷೇತ್ರ - ರಾಮಚಂದ್ರಗೌಡ (ಬಿಜೆಪಿ), ಆಗ್ನೇಯ ಶಿಕ್ಷಕರ ಕ್ಷೇತ್ರ - ರಮೇಶ ಬಾಬು (ಜೆಡಿಎಸ್), ದಕ್ಷಿಣ ಪದವೀಧರ ಕ್ಷೇತ್ರ - ಮರಿತಿಬ್ಬೇಗೌಡ (ಜೆಡಿಎಸ್), ನೈಋತ್ಯ ಪದವೀಧರ ಕ್ಷೇತ್ರ - ಡಿ.ಎಚ್.ಶಂಕರಮೂರ್ತಿ (ಬಿಜೆಪಿ), ನೈಋತ್ಯ ಶಿಕ್ಷಕರ ಕ್ಷೇತ್ರ - ಗಣೇಶ ಕಾರ್ಣಿಕ್ (ಬಿಜೆಪಿ), ಈಶಾನ್ಯ ಪದವೀಧರ ಕ್ಷೇತ್ರ - ಅಮರನಾಥ ಪಾಟೀಲ (ಬಿಜೆಪಿ) ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.











Click it and Unblock the Notifications