ಡಬಲ್ ಇಂಜಿನ್ ಸರ್ಕಾರ 4 ವರ್ಷ ಆಡಳಿತದಲ್ಲಿ...BJPಗೆ ಕಾಂಗ್ರೆಸ್ ಶಾಕ್!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ನಡುವಿನ ಫೈಟ್ ಹೆಚ್ಚುತ್ತಿದೆ. ಗ್ಯಾರಂಟಿ ವಿಚಾರ ಹಿಡಿದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ತಿರುಗೇಟು ನೀಡಿತ್ತಿದೆ. ಆದರೆ ಬಿಜೆಪಿ ತನ್ನ ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆ ಏನು? ಅಂತಾ ಕಾಂಗ್ರೆಸ್ ಪ್ರಶ್ನೆ ಮಾಡುತ್ತಿದೆ! ಈ ಮೂಲಕ ತಾನೇ ಮಾಡಿದ ಟ್ವೀಟ್ ಬಲೆಯಲ್ಲಿ ಬಿಜೆಪಿ ಲಾಕ್ ಆಗುತ್ತಿದೆ.

'ತಾವುಗಳು ಚುನಾವಣಾಪೂರ್ವದಲ್ಲಿ ಹೇಳಿರುವಂತೆ ರಾಜ್ಯದ ಸಮಸ್ತ ಮಹಿಳೆಯರಿಗೆ ಬೇಷರತ್ ಉಚಿತ ಪ್ರಯಾಣ ನೀಡಲೇಬೇಕು. ನೀಡದಿದ್ದರೆ ನಾವು ಬಿಡುವುದೂ ಇಲ್ಲ! ಆದರೆ ಬಸ್ ಬೇಕಲ್ಲ? ರಾಜ್ಯದ ಹಲವಾರು ಭಾಗಗಳಲ್ಲಿ ಸರ್ಕಾರಿ ಬಸ್‌ಗಳ ವ್ಯವಸ್ಥೆಯೇ ಇಲ್ಲ, ಅಲ್ಲಿನ ನಿವಾಸಿಗಳಿಗೆ ಸರ್ಕಾರಿ ಬಸ್ ಸಂಪರ್ಕವೆಂದರೆ ದೂರದಬೆಟ್ಟ! ಕರಾವಳಿಯ ಹಲವು ತಾಲೂಕುಗಳು ಇಂದಿಗೂ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದೆ.. ಈ ಸಮಸ್ಯೆಗಳಿಗೊಂದು ಯೋಜನೆ ರೂಪಿಸಿ, ಮೊದಲಿಗೆ ಬಸ್ ಸೌಲಭ್ಯ ಕಲ್ಪಿಸಿಕೊಡಿ! ಉಳಿದದ್ದು ಮತ್ತೆ' ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಮೊದಲಿಗೆ ಸವಾಲು ಹಾಕಿತ್ತು, ಈಗ ಅದಕ್ಕೆ ಕಾಂಗ್ರೆಸ್ ರೀಪ್ಲೇ ಕೊಟ್ಟಿದೆ.

BJP and Congress fight is not ending in guarantee scheme matter

ಮುಂದುವರಿದ ಫುಲ್ ಫೈಟಿಂಗ್!

ಹೌದು, ಬಿಜೆಪಿ ಈ ರೀತಿಯ ಟ್ವೀಟ್ ಮಾಡಿದ್ದೇ ಬಂತು, ಕಾಂಗ್ರೆಸ್ ರಾಜ್ಯ ಘಟಕ ಈ ಟ್ವೀಟ್‌ಗೆ ತಿರುಗೇಟು ನೀಡಿದೆ. ಅದು ಯಾವ ರೀತಿ ಅಂದ್ರೆ ಈಗ ಬಸ್ ವ್ಯವಸ್ಥೆ ಕಲ್ಪಿಸಿ ಅಂತಾ ಒತ್ತಾಯ ಮಾಡುವವರು ತಮ್ಮದೇ ಸರ್ಕಾರ ಇದ್ದಾಗ ಏನು ಮಾಡ್ತಾ ಇದ್ರಿ? ಎಂದಿದೆ. 'ಡಬಲ್ ಇಂಜಿನ್ ಸರ್ಕಾರ 4 ವರ್ಷ ಆಡಳಿತದಲ್ಲಿ ಕಡಿದು ಕಟ್ಟೆ ಹಾಕಿದ್ದೇನು ಎನ್ನುವುದನ್ನು ಬಿಜೆಪಿ ಉತ್ತರಿಸಬೇಕು. 90 ಗ್ರಾಮಗಳಿಗೆ ಬಸ್ ಇಲ್ಲ ಎಂದಾದರೆ 4 ವರ್ಷದ ಆಡಳಿತದ ವೈಫಲ್ಯವಲ್ಲವೇ? Dear @BJP4Karnataka, ಹೀಗೆಯೇ ನಿಮ್ಮ ವೈಫಲ್ಯಗಳನ್ನು ಒಂದೊಂದಾಗಿ ಅನಾವರಣಗೊಳಿಸುತ್ತಲೇ ಇರಿ ಎನ್ನುವುದು ನಮ್ಮ ವಿನಂತಿ!' ಎಂದು ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಪಿಂಚಣಿ ವಿಚಾರದಲ್ಲೂ ಹಿನ್ನಡೆ?

ಹಾಗೇ ಇನ್ನೊಂದು ವಿಚಾರವನ್ನೂ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಇದೀಗ ಪ್ರಯೋಗ ಮಾಡಿದ್ದಾರೆ. ಅದೇನೆಂದರೆ 'ಬಿಜೆಪಿ ಈಗ ಸೆಲ್ಫ್ ಗೋಲ್ ಅಭಿಯಾನ ನಡೆಸುತ್ತಿದೆ! ಕಳೆದ ಮೂರ್ನಾಲ್ಕು ತಿಂಗಳಿಂದ ಎಲ್ಲಾ ಬಗೆಯ ಪಿಂಚಣಿಯನ್ನು ಅರ್ಹರಿಗೆ ನೀಡದೆ ಖಜಾನೆ ಲೂಟಿ ಹೊಡೆದಿದ್ದ ಬಿಜೆಪಿ ಈಗ ತಮ್ಮದೇ ದುರಾಡಳಿತವನ್ನು ಕಾಂಗ್ರೆಸ್ ತಲೆಗೆ ಕಟ್ಟಲು ಹೋಗಿ ಬೆತ್ತಲಾಗುತ್ತಿದೆ. ಕಳೆದ 2,3 ತಿಂಗಳ ಹಿಂದಿನಿಂದ ನಡೆದ ವಂಚನೆಗೆ @BJP4Karnataka ಸರ್ಕಾರ ಹೊಣೆಯಲ್ಲವೇ?' ಎಂದು ಪ್ರಶ್ನೆ ಮಾಡಿದೆ. ಈ ಮೂಲಕ ಬಿಜೆಪಿ ತಾನೇ ಮಾಡಿದ್ದ ಟ್ವೀಟ್ ಈಗ ಅವರದ್ದೇ ಸರ್ಕಾರದ ಅವಧಿಯ ಹಿನ್ನಡೆಯನ್ನ ಕಾಂಗ್ರೆಸ್‌ಗೆ ತೋರಿಸಿದಂತೆ ಕಾಣ್ತಿದೆ ಅನ್ನೋ ಆರೋಪ ನೆಟ್ಟಿಗರದ್ದು.

ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ?

ಮತ್ತೊಂದ್ಕಡೆ ರೌಡಿಶೀಟರ್ಸ್ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಬಿಜೆಪಿಯು ಮಾಡಿರುವ ಆರೋಪದ ಪ್ರಕಾರ, 'ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಭಯಭೀತಿ ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ. ನಕಲಿ ಕೇಸ್‌ ದಾಖಲು, ದೌರ್ಜನ್ಯ, ದಬ್ಬಾಳಿಕೆ ನಡೆದಲ್ಲಿ ಕಾನೂನು ಸಹಾಯವಾಣಿಗೆ ಕರೆ ಮಾಡಿ, ನೆರವು ಪಡೆಯಬಹುದು ಮತ್ತು ಕಾರ್ಯಕರ್ತರ ಬೆಂಬಲಕ್ಕೆ ಧಾವಿಸಲು ಕಾನೂನು ತಜ್ಞರ ತಂಡ ಸದಾ ಸಿದ್ಧವಾಗಿರುತ್ತದೆ.' ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಉಲ್ಲೇಖಿಸಿ ಟ್ವೀಟ್ ಮಾಡಿದೆ ರಾಜ್ಯ ಬಿಜೆಪಿ ಘಟಕ.

ಗ್ಯಾರಂಟಿ ಹೋಯ್ತು.. ರೌಡಿಶೀರ್ಸ್ ಬಂದ್ರು?

ಇಷ್ಟುದಿನ ಗ್ಯಾರಂಟಿ ವಿಚಾರಕ್ಕೆ ಟ್ವೀಟ್ ಯುದ್ಧ ನಡೆಸುತ್ತಿದ್ದ ಬಿಜೆಪಿ, ಕಾಂಗ್ರೆಸ್ ನಡುವೆ ಈಗ ರೌಡಿಶೀಟರ್ಸ್ ವಿಚಾರ ಎಂಟ್ರಿಯಾಗಿದೆ. ಇಷ್ಟುದಿನ ಬರೀ ಗ್ಯಾರಂಟಿ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿದ್ದ ಚರ್ಚೆ, ಈಗ ರೌಡಿಗಳ ವಿಚಾರದಲ್ಲೂ ನಡೆಯುವ ನಿರೀಕ್ಷೆ ಇದೆ. ಆ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಗೆ ಹೊಸ ವಿಷಯವೂ ಸಿಕ್ಕಂತಾಗಿದೆ. ಆದರೆ ರೌಡಿಗಳ ಮನೆ ಮೇಲೆ ದಾಳಿಯಾದ ಸಂದರ್ಭದಲ್ಲಿ ಮಾರಕಾಸ್ತ್ರ ಹಾಗೂ ಮಾದಕ ವಸ್ತು ಸಿಕ್ಕ ಬಗ್ಗೆ ಪೊಲೀಸ್ ದಾಖಲೆಗಳು ಸ್ಪಷ್ಟಪಡಿಸಿದ್ದವು. ಆದರೆ ಬಿಜೆಪಿ ಈಗ ಬೇರೆಯದ್ದೇ ಆರೋಪ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ.

ಬಿಜೆಪಿ & ಕಾಂಗ್ರೆಸ್ ಕಿತ್ತಾಟದಲ್ಲಿ ಗೊಂದಲ!

ನೂತನ ಪೊಲೀಸ್‌ ಆಯಕ್ತ ಬಿ.ದಯಾನಂದ ಸೂಚನೆಯ ನಂತರ ಬೆಂಗಳೂರಿನ 8 ವಿಭಾಗದ ಕಾನೂನು & ಸುವ್ಯವಸ್ಥೆ ಪೊಲೀಸರು ಏಕಕಾಲದಲ್ಲಿ 1344 ರೌಡಿಶೀಟರ್ಸ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 9.1 ಕೆ.ಜಿ. ಗಾಂಜಾ, ಮಾರಕಾಸ್ತ್ರ ಪತ್ತೆ ಆಗಿವೆ. ಈ ಹಿನ್ನೆಲೆ ರಾಜ್ಯ ಬಿಜೆಪಿ ವಿರುದ್ಧ ಟ್ವೀಟ್ ಮಾಡಿದ್ದ ಕಾಂಗ್ರೆಸ್ ರಾಜ್ಯ ಘಟಕ ರೌಡಿಗಳ ಹೆಡೆಮುರಿ ಕಟ್ಟುವ ಬಗ್ಗೆ ಚಾಲೆಂಜ್ ಹಾಕಿತ್ತು. ಆದರೆ ಬಿಜೆಪಿ ಪ್ರತ್ಯೇಕ ಆರೋಪ ಮಾಡಿ, ನಮ್ಮ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿದ್ದಾರೆ ಎನ್ನುತ್ತಿದೆ. ಈ ಮೂಲಕ ಬಿಜೆಪಿ, ಕಾಂಗ್ರೆಸ್ ನಡುವೆ ರೌಡಿಶೀಟರ್ಸ್ ವಿಚಾರದಲ್ಲಿ ಕೂಡ ಕಿಚ್ಚು ಹೊತ್ತಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+