ಬಿಹಾರ ಚುನಾವಣೆ ಸೋಲಿನ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಹೊಸ ಗೇಮ್ ಪ್ಲಾನ್?
2025
ಬಿಹಾರ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ನಾಯಕರು ಚಿಂತೆಯಲ್ಲೇ & ಬೇಸರದಲ್ಲೇ ಕೂರುವಂತೆ ಆಗಿದೆ. ಯಾಕಂದ್ರೆ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಆ ರೀತಿಯ ಸೋಲು ಎದುರಾಗಿದೆ. ಇಂತಹ ಸೋಲನ್ನು ಕನಸಿನಲ್ಲೂ ಅಂದುಕೊಳ್ಳದ ಕಾಂಗ್ರೆಸ್ ನಾಯಕರಿಗೆ ಈಗ ದೊಡ್ಡ ದೊಡ್ಡ ಸವಾಲುಗಳು ಎದುರಾಗುತ್ತಿವೆ. ಹೀಗಿದ್ದಾಗ, ಬಿಹಾರ ಚುನಾವಣೆ ಸೋಲಿನ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಹೊಸ ಗೇಮ್ ಪ್ಲಾನ್? ಹಾಗಾದರೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ? id="toptextpromo"> id='are-slot-1' class='oiad oi-axt oiadv'> id='top-searched-articles'>ಬಿಹಾರ
ಚುನಾವಣೆ ಸೋಲಿನ ನಂತರ ದೊಡ್ಡ ಆತಂಕ ಕಾಂಗ್ರೆಸ್ ನಾಯಕರಲ್ಲಿ ಶುರು ಆಗಿದೆ. ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ತಿಂಗಳಿಂದ ಒಂದೇ ಒಂದು ಘೋಷಣೆ ಪದೇ ಪದೇ ಕೇಳಿ ಬರುತ್ತಲೇ ಇತ್ತು. ಅದರಲ್ಲೂ ಸಿಎಂ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಸೇರಿ ಹೀಗೆ ಹಲವು ವಿಚಾರಗಳು ಚರ್ಚೆಗೆ ದಾರಿ ಮಾಡಿಕೊಟ್ಟಿದ್ದವು. ನೋಡ ನೋಡುತ್ತಲೇ ಇನ್ನೇನು ಸಿದ್ದರಾಮಯ್ಯ ಅವರ ಸ್ಥಾನವೇ ಬದಲಾಗಿ ಹೋಯ್ತು ಅನ್ನೋ ವಾತಾವರಣ ಕೂಡ ನಿರ್ಮಾಣ ಆಗಿತ್ತು. ಆದರೆ ಬಿಹಾರ ಚುನಾವಣೆ ಫಲಿತಾಂಶ ಹೊರಬಂದ ನಂತರ ಎಲ್ಲವೂ ಫುಲ್ ಸೈಲೆಂಟ್ ಆಗಿ ಹೋಗಿದೆ... id='are-slot-2' class='oiad oi-axt oiadv'>












Click it and Unblock the Notifications