ನಟ ನಾಗಭೂಷಣ್ ಕಾರು ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಕನ್ನಡದ ನಟ ನಾಗಭೂಷಣ್ ಕಾರು ಅಪಘಾತದ ಸುದ್ದಿ ಸಂಚಲನ ಸೃಷ್ಟಿಮಾಡಿತ್ತು. ಈ ಸಂದರ್ಭದಲ್ಲೇ ನಟನ ವಿರುದ್ಧ ಇಲ್ಲಸಲ್ಲದ ಆರೋಪ ಕೂಡ ಕೇಳಿಬಂದಿತ್ತು. ಆದರೆ ಈಗ ನಾಗಭೂಷಣ್ ಅವರ ಕಾರು ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಾಗಾದರೆ ಏನು ಆ ಟ್ವಿಸ್ಟ್? ಇದೀಗ ಕಂಟಕದಿಂದ ನಾಗಭೂಷಣ್ ಪಾರಾದರಾ? ಅಪಘಾತದ ಬಗ್ಗೆ ಈಗಿನ ಬೆಳವಣಿಗೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನ ವಸಂತಪುರ ನಿವಾಸಿ 48 ವರ್ಷದ ಪ್ರೇಮಾ ಎಂಬ ಮಹಿಳೆಗೆ ನಟ ನಾಗಭೂಷಣ್ ಕಾರಲ್ಲಿ ಗುದ್ದಿ, ಅಪಘಾತ ಎಸಗಿದ್ದಾರೆಂದು ಆರೋಪ ಮಾಡಲಾಗಿತ್ತು. ಮೊನ್ನೆ ರಾತ್ರಿ ಘಟನೆ ಸಂಭವಿಸಿತ್ತು. ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಹೀಗಾಗಿ ರಾಜ್ಯಾದ್ಯಂತ ಈ ಅಪಘಾತ ಸದ್ದು ಮಾಡಿತ್ತು. ಅಲ್ಲದೆ ಇಲ್ಲಸಲ್ಲದ ಆರೋಪ ಕೂಡ ನಟ ನಾಗಭೂಷಣ್ ವಿರುದ್ಧ ಕೇಳಿಬಂದಿತ್ತು. ಇದೀಗ ಅದೆಲ್ಲಾ ಸುಳ್ಳು ಎಂಬುದು ಗೊತ್ತಾಗಿದೆ. ಈ ಮೂಲಕ ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ನಟ ನಾಗಭೂಷಣ್ ಮದ್ಯ ಸೇವನೆ...
ಹೌದು, ನಟ ನಾಗಭೂಷಣ್ ಕಾರು ಚಲಾಯಿಸುವಾಗ ಮದ್ಯ ಸೇವನೆ ಮಾಡಿರಲಿಲ್ಲ ಎಂಬ ಸತ್ಯ ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿದೆ. ನಿನ್ನೆಯಷ್ಟೇ ಪೊಲೀಸ್ ಅಧಿಕಾರಿಗಳು ನಟ ನಾಗಭೂಷಣ್ ಮದ್ಯಪಾನ ಮಾಡಿರಲಿಲ್ಲ ಎಂದು ಹೇಳಿದ್ದರು. ಅದಕ್ಕೆ ಸಾಕ್ಷಿ ಎನ್ನುವಂತೆ ಬ್ಲಡ್ ರಿಪೋರ್ಟ್ ಕೂಡ ಬಂದಿದ್ದು, ನಾಗಭೂಷಣ್ ಮದ್ಯಪಾನ ಮಾಡಿರಲಿಲ್ಲ ಎಂಬುದಾಗಿ ವರದಿಯಾಗಿದೆ. ಈ ಮೂಲಕ ಕಾರು ಅಪಘಾತ ಸಂಭವಿಸಿದ ಸಮಯದಲ್ಲಿ ನಾಗಭೂಷಣ್ ಮದ್ಯ ಸೇವನೆ ಮಾಡಿರಲಿಲ್ಲ ಎಂಬುದು ದೃಢವಾಗಿದೆ.
ಘಟನೆಯ ಸಂಪೂರ್ಣ ಚಿತ್ರಣ ಇಲ್ಲಿದೆ
ಅಷ್ಟಕ್ಕೂ ಶನಿವಾರ ರಾತ್ರಿ 9 ಗಂಟೆ ಹೊತ್ತಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಪ್ರೇಮಾ ಎನ್ನುವ ಮಹಿಳೆ ಸಾವನ್ನಪ್ಪಿದ್ದರು. ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಮಹಿಳೆ ಪತಿ ಕೃಷ್ಣ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಗಭೂಷಣ್ ಈ ಅಪಘಾತಕ್ಕೆ ಕಾರಣವಾಗಿದ್ದಾರೆ ಎಂಬ ಆರೋಪ ಇರುವ ಹಿನ್ನೆಲೆ ಈಗಾಗಲೇ ನಟನ ವಿಚಾರಣೆ ನಡೆಸಲಾಗಿದೆ. ಅಲ್ಲದೆ ನಟ ನಾಗಭೂಷಣ್ ಅವರ ಹೇಳಿಕೆಯನ್ನೂ ಪೊಲೀಸರು ದಾಖಲಿಸಿದ್ದಾರೆ.
ಮತ್ತೊಮ್ಮೆ ಪೊಲೀಸರಿಂದ ವಿಚಾರಣೆ?
ಈ ನಡುವೆ ಇಲ್ಲಸಲ್ಲದ ಆರೋಪ ಕೂಡ ನಟನ ವಿರುದ್ಧ ಮಾಡಲಾಗಿತ್ತು. ಆದರೆ ಮದ್ಯ ಸೇವನೆ ಮಾಡಿರಲಿಲ್ಲ ಅಂತಾ ಈಗ ದೃಢವಾಗಿದೆ. ಹಾಗೇ ಪ್ರಕರಣದ ತನಿಖೆಯನ್ನು ಈಗ ಪೊಲೀಸರು ಚುರುಕಾಗಿಸಿದ್ದು, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದಿದ್ದಾರೆ. ಮತ್ತೊಂದು ಕಡೆ ಮೃತರ ಕುಟುಂಬ ಸದಸ್ಯರ ಆಕ್ರಂದನ ಕೂಡ ಮುಗಿಲು ಮುಟ್ಟಿತ್ತು. ಹೀಗಾಗಿ ಸೂಕ್ತ ತನಿಖೆಗೆ ಮೃತರ ಕುಟುಂಬಸ್ಥರು ಕೂಡ ಆಗ್ರಹಿಸಿದ್ದರು. ಇದೀಗ ತನಿಖೆಗೆ ಮತ್ತಷ್ಟು ವೇಗ ಸಿಕ್ಕಿದ್ದು, ನಟನನ್ನು ಹೆಚ್ಚಿನ ವಿಚಾರಣೆಗೆ ಕರೆಯಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಆರ್.ಆರ್. ನಗರದಲ್ಲಿ ಸ್ನೇಹಿತರನ್ನ ಭೇಟಿ ಮಾಡಲು ಹೋಗಿದ್ದ ನಾಗಭೂಷಣ್ ಅವರು, ತಮ್ಮ ಜೆಪಿ ನಗರದ ಮನೆಗೆ ವಾಪಸ್ ಆಗುತ್ತಿದ್ದರು. ಈ ಸಮಯದಲ್ಲಿ ಭೀಕರ ಅಪಘಾತವು ಸಂಭವಿಸಿದೆ. ಈ ವೇಳೆ ಸ್ವತಃ ನಟ ನಾಗಭೂಷಣ್ ಕಾರು ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿತ್ತು. ಅಲ್ಲದೆ ಸಿಸಿ ಕ್ಯಾಮೆರಾ ದೃಶ್ಯಗಳು ಕೂಡ ಘಟನೆ ಬಗ್ಗೆ ಮಾಹಿತಿಯನ್ನು ನೀಡಿದ್ದವು. ಅಪಘಾತ ಸಂಭವಿಸಿದ ಬಳಿಕ ತಕ್ಷಣ ಕಾರು ನಿಲ್ಲಿಸಿ ಬಂದಿದ್ದ ನಾಗಭೂಷಣ್ ಗಾಯಾಳು ಪ್ರೇಮಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ ತೀವ್ರ ಗಾಯವಾಗಿದ್ದ ಪರಿಣಾಮ ಪ್ರೇಮಾ ಅವರು ದಾರಿ ಮಧ್ಯದಲ್ಲೇ ಮೃತಪಟ್ಟು, ಅವರ ಪತಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications