ಬೆಂಗಳೂರು - ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆ ಮಹತ್ವದ ಅಪ್ಡೇಟ್ಸ್‌

ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ‌ನಡೆದ ಸಚಿವ ಸಂಪುಟ ಉಪಸಮಿತಿ ಸಭೆ ಬಳಿಕ ಸಮಿತಿಯ ಅಧ್ಯಕ್ಷರು ಹಾಗೂ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನೈಸ್ ಯೋಜನೆಯಲ್ಲಿ ಅನೇಕ ನ್ಯೂನ್ಯತೆಗಳಿದ್ದಾವೆ. ಫ್ರೇಮ್‌ವರ್ಕ್ ಅಗ್ರಿಮೆಂಟ್ ಮಾಡಿರುವ ಉದ್ದೇಶ, ಈ ಯೋಜನೆ ವ್ಯವಸ್ಥಿತವಾಗಿ, ಪಾರದರ್ಶಕವಾಗಿ ನಡೆಯಬೇಕು ಅಂತ ಮಾಡಿದ್ದಾರೆ.

ಬಹುಶಃ ಕಾಲ ಹೋದಂತೆಲ್ಲ ಬದಲಾಯಿಸುವ ಅಥವಾ ಉಲ್ಲಂಘನೆ ಮಾಡುವ ಪ್ರಕ್ರಿಯೆ ನಡೆದಿವೆ. ನಾವು ಕೊಟ್ಟಂತಹ ಜಮೀನುಗಳು, ಪ್ರಾಜೆಕ್ಟ್‌ನಲ್ಲಿ ಬದಲಾವಣೆಗಳನ್ನು‌ ಮಾಡುವಂತದ್ದು ಇರಬಹುದು. ರಿಯಾಯಿತಿ ಅಗ್ರಿಮೆಂಟ್, ಟೋಲ್ ಅಗ್ರಿಮೆಂಟ್‌ಗಳು ಬಗ್ಗೆ ಸಮಗ್ರವಾಗಿ ನೋಡಿ ಸರ್ಕಾರಕ್ಕೆ ಸಚಿವ ಸಂಪುಟ ಸಮಿತಿಗೆ ಕೊಡಬೇಕು ಅಂತ ಮಾಡಿದ್ದಾರೆ.

Big Boost for Connectivity Key Updates on Bengaluru Mysuru Infrastructure Corridor

ಇದು ಒಂದು ದಿನದಲ್ಲಿ‌ ಮುಗಿಯುವಂತದ್ದು ಅಲ್ಲ. ಎ ಸೆಕ್ಷನ್, ಬಿ ಸೆಕ್ಷನ್ ಅಂತ ಮಾಡಿದ್ದಾರೆ. ಎ ಸೆಕ್ಷನ್ ಬೆಂಗಳೂರಿಗೆ ಹತ್ತಿರ ಇರುವ ಫೆರಿಪೆರಲ್ ರಿಂಗ್ ರೋಡ್, ಬಿಡದಿವರೆಗೂ ತೆಗೆದುಕೊಂಡು ಹೋಗಿ, ಕಾರ್ಪೋರೆಟ್ ಟೌನ್‌ಶಿಪ್ ಮಾಡುವಂತದ್ದನ್ನು ಪ್ರಾಜೆಕ್ಟ್‌ನಲ್ಲಿ ತಂದಿದ್ದಾರೆ. ಎ ಸೆಕ್ಷನ್‌ನಲ್ಲಿ 41 ಕಿ.ಮೀ. ಪೂರ್ಣವಾಗಿದೆ. ಲಿಂಕ್ ರೋಡ್‌ನಲ್ಲಿ 9 ಕಿ.ಮೀ.ನಲ್ಲಿ 5 ಕಿಮೀ ಮಾತ್ರ ಆಗಿದೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ 300ಕ್ಕು ಹೆಚ್ಚು ತಕರಾರುಗಳಿವೆ. ಹೈಕೋರ್ಟ್‌ನಲ್ಲಿ 100ಕ್ಕೂ ಹೆಚ್ಚು ತಕಾರುಗಳಿವೆ. 300 ಪ್ರಕರಣಗಳಲ್ಲಿ 80 ಪ್ರಕರಣಗಳನ್ನು ಕಡಿಮೆ ಮಾಡಲಾಗಿದೆ.

ಸಣ್ಣಪುಟ್ಟ ತಕರಾರುಗಳನ್ನು ಪರಿಹರಿಸಲಾಗಿದೆ. ಸರ್ಕಾರದ ಹಂತದಲ್ಲಿರುವುದನ್ನು ಕಡಿಮೆ ಮಾಡಲಾಗಿದೆ. ಈಗ ಪ್ರತಿಯೊಂದ ಕೇಸ್‌ನ್ನು ಪರಿಶೀಲಿಸಬೇಕು. ಪ್ರತಿಯೊಂದು ಕೇಸ್‌ನ್ನು ಪರಿಹರಿಸುವುದಕ್ಕೆ ಚರ್ಚೆ ಮಾಡಿದ್ದೇವೆ. ಸ್ಟ್ರಾಂಗ್ ಲೀಗಲ್ ಟೀಮ್ ನೇಮಿಸಿಕೊಳ್ಳಲಾಗಿದೆ. ಆದಷ್ಟು ಶೀಘ್ರವಾಗಿ ಬಗೆಹರಿಸುವ ಬಗ್ಗೆ ಸಮಿತಿಗೆ ಆಲೋಚನೆ ಇದೆ. ಬಹಳ ತಕರಾರುಗಳಿರುವುದರಿಂದ ಜಮೀನುಗಳನ್ನು ಎಷ್ಟು ಸರ್ವೇ ನಂಬರ್‌ಗಳಲ್ಲಿ ಕೊಟ್ಟಿದ್ದಾರೆ. ಆ ಸರ್ವೇ ಯಾವುದು. ಅಧಿಕೃತವಾಗಿ ಆಗಿದೆಯಾ. ಒಪ್ಪಂದ ಆಗಿದೆಯಾ. ಕರಾರು ಒಪ್ಪಂದ ಆಗಿದೆಯಾ? ಇದೆಲ್ಲವು ಕೂಡ ಜಟೀಲ ಮಾಡಿಟ್ಟಿದ್ದಾರೆ. ಸಮಿತಿ ಬಹಳ ಜವಾಬ್ದಾರಿಯುತವಾಗಿ ಬಗೆಹರಿಸಬೇಕೆಂದು ಹೊರಟಿದ್ದೇವೆ ಎಂದು ಹೇಳಿದ್ದಾರೆ.

ರೈತರಿಗೆ ನಿವೇಶನ ಕೊಡುವ ವಿಚಾರವೂ ಇದರಲ್ಲಿ ಬರುತ್ತದೆ. ಫ್ರೇಮ್‌ವರ್ಕ ಒಪ್ಪಂದದಲ್ಲಿ ಇಲ್ಲ. ಔಟ್‌ಸೈಡ್ ಅಗ್ರಿಮೆಂಟ್‌ನಲ್ಲಿ ತಿಳುವಳಿಕೆ‌ಮೇಲೆ ನಿವೇಶನ ಕೊಡುತ್ತೇವೆ ಎಂದು ನೈಸ್ ಕಂಪನಿಯವರು ಹೇಳಿದ್ದಾರೆ. ಅದನ್ನು ಪರಿಶೀಲಿಸುತ್ತೇವೆ.

ಮುಟ್ಟುಗೋಲು ಹಾಕುವ ತೀರ್ಮಾನ ಆಗುವಂತಿದ್ದಾರೆ ಇಷ್ಟೆಲ್ಲ ಯಾಕ್ ಮಾಡುತ್ತಿದ್ದರು. ಸಮಿತಿಗಳನ್ನು‌ ಮಾಡಿ, ಚರ್ಚೆಗಳನ್ನು‌ ಮಾಡಿ ಬಗೆಹರಿಸಿ ಪ್ರಾಜೆಕ್ಟ್‌ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಸಚಿವ ಸಂಪುಟ ಉಪ ಸಮಿತಿ ಮಾಡಿದ್ದಾರೆ. ಒಂದುವೇಳೆ ಮುಟ್ಟುಗೋಲು ಹಾಕಿಕೊಳ್ಳಬೇಕು ಅಂತ ಹೇಳೋದಾರೆ, ಸರ್ಕಾರ ಇಷ್ಟೊತ್ತಿಗೆ ಮುಟ್ಟುಗೋಲು ಹಾಕಿಕೊಂಡು ಸರ್ಕಾರ ತೀರ್ಮಾನ ಮಾಡಿ ಅಂತಿಮಕ್ಕೆ ಬರುತ್ತಿತ್ತು ಎಂದಿದ್ದಾರೆ.

ಅರಮನೆ ಮೈದಾನದಲ್ಲಿ ಶುಕ್ರವಾರ ಮತ್ತು ಶನಿವಾರ‌ ನಡೆಯಲಿರುವ ಈದ್ ಉನ್ನಬಿ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಅವರು, ಈಗಾಗಲೇ ಪೊಲೀಸ್ ಇಲಾಖೆ ವತಿಯಿಂದ ಈ ಕಾರ್ಯಕ್ರಮದ ಆಯೋಜಕರ ಗಮನಕ್ಕೆ ತರಲಾಗಿದೆ. ವಿದೇಶಿಗರು ಬಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಚಾರ ಮಾಡಲು, ಭಾಗವಹಿಸಲು ನಮ್ಮ ದೇಶದ ಕಾನೂನಿನಲ್ಲಿ ಅವಕಾಶ ಇಲ್ಲ ಎಂಬುದನ್ನು ಗಮನಕ್ಕೆ ತರಲಾಗಿದೆ.

ವಿದೇಶಿಗರನ್ನು ಆಯೋಜಕರು ಕರೆದಿರಬಹುದು.‌ ಅವರನ್ನು ಕರೆಯಬೇಡಿ,‌ ಉಲ್ಲಘನೆಯಾಗುತ್ತದೆ ಎಂದು ತಿಳಿಸಿದ್ದೇವೆ. ಎಫ್‌ಆರ್‌ಆರ್‌ಒ‌ ನಿಗಾವಹಿಸುತ್ತಾರೆ. ಸ್ವಾಬಾಬವಿಕವಾಗಿ ಇಲಾಖೆಯವರು ಕಣ್ಣಿಡುತ್ತಾರೆ. ವಿರೋಧ ಪಕ್ಷದವರಿಗಿಂತ ನಮಗೆ ಹತ್ತರಷ್ಟು ಜವಾಬ್ದಾರಿ ಇದೆ.‌ ಭಾಷಣಕ್ಕಷ್ಟೆ ಅಲ್ಲ, ಅಲ್ಲಿ ಉಪಸ್ಥಿತಿಯೂ ಇರಬಾರದು.

ಧರ್ಮಸ್ಥಳ ಪ್ರಕರಣ

ಇನ್ನು ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಇಡಿಯವರು ಯಾವ ಉದ್ದೇಶದಲ್ಲಿ, ಯಾವ ಸುಳಿವು ಆಧರಿಸಿ ತನಿಖೆ ಮಾಡುತ್ತಾರೆ ಎಂಬುದು ನಮ್ಮ ಗಮನಕ್ಕೆ ಇಲ್ಲ. ವರದಿ ಬರುವವರೆಗೂ ಎಲ್ಲವನ್ನು ತಿಳಿದುಕೊಳ್ಳಲು ಹೋಗುವುದಿಲ್ಲ. ಈ ತನಿಖೆಯನ್ನು ಯಾವುದಾದರು ಸುಳಿವು ಸಿಕ್ಕಿರಬಹುದು. ಅದನ್ನು ಆಧರಿಸಿ ಕೆಲವರನ್ನು ವಿಚಾರಣೆಗೆ ಕರೆದಿರಬಹುದು ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+