'ಬಿಜೆಪಿ ನಂಗಾನಾಚ್' ಪ್ರಕರಣಕ್ಕೆ ಹೊಸ ತಿರುವು!

ಬೆಳಗ್ಗೆಯಿಂದ ಟಿವಿ ಮಾದ್ಯಮಗಳಲ್ಲಿ ಒಂದೇ ಸಮನೆ ಪ್ರಸಾರವಾಗುತ್ತಿರುವ ವಿಡಿಯೋ ದೃಶ್ಯಗಳು ಬೀದರ್ ನಗರದಲ್ಲಿ ಚಿತ್ರೀಕರಣವಾಗಿರುವುದಲ್ಲ. ಬದಲಿಗೆ ಹೈದರಾಬಾದಿನ ಅಪಾರ್ಟ್ ಮೆಂಟ್ ಒಂದರಲ್ಲಿ ಎಂಬ ಅಂಶ ಈಗ ಬಯಲಾಗಿದೆ.
ಹೈದರಾಬಾದಿನ ಅಪಾರ್ಟ್ ಮೆಂಟ್ ಒಂದರಲ್ಲಿ ಬೀದರ್ ನ ಮಹಿಳೆಯೊಬ್ಬರು ಜನವರಿ 4, 2013ರಂದು ಪಾರ್ಟಿ ಆಯೋಜಿಸಿದ್ದರು. ಈ ಮಹಿಳೆ ಆಗಾಗ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತಾರೆ. ಅಲ್ಲದೇ ಕಾರ್ಯಕ್ರಮದಲ್ಲಿ ಹಲವು ರಾಜಕಾರಣಿಗಳು ಪಾಲ್ಗೊಳ್ಳುತ್ತಾರೆ ಎಂಬುದು ತಿಳಿದುಬಂದಿದೆ.
ನಂಗಾನಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರೊಂದಿಗೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ ಹಿನ್ನಲೆಯಲ್ಲಿ ಸ್ವತ: ಆಯೋಜಕಿಯೇ ತಾನು ರೆಕಾರ್ಡ್ ಮಾಡಿದ ಅರೆನಗ್ನ ದೃಶ್ಯಾವಳಿಯ ಸಿಡಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾಳೆ. ಈ ಕಾರ್ಯಕ್ರಮದಲ್ಲಿ 20-25 ಜನರು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.
ಈ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೀದರ್ ಎಸ್ಪಿ ತ್ಯಾಗರಾಜ್, ನಂಗಾನಾಚ್ ಪ್ರಕರಣದ ಬಗ್ಗೆ ಯಾರೂ ದೂರು ದಾಖಲಿಸಿಲ್ಲ. ಆದರೆ ನಾವೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಇಂತಹ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಹಣಕಾಸಿನ ವಿಚಾರವಾಗಿ ಅಥವಾ ಮತ್ಯಾವುದೋ ಭಿನ್ನಾಭಿಪ್ರಾಯ, ದ್ವೇಷದ ಹಿನ್ನೆಲೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.












Click it and Unblock the Notifications