ಬೀದರ್: ಬಸ್‍ ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರ ಬಂಧನ

Posted By:
Subscribe to Oneindia Kannada

ಬೀದರ್, ಮಾರ್ಚ್. 10 : ಬಸ್‍ ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರನ್ನು ಶುಕ್ರವಾರ ಬೀದರ್ ತಾಲೂಕಿನ ಚಾಂಬೋಳ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಮಲಾಬಾಯಿ (33), ಅಂಬಾಬಾಯಿ (35), ರಮಾಬಾಯಿ (36) ಹಾಗೂ ರೇಖಾಬಾಯಿ (31) ಬಂಧಿತ ಮಹಿಳೆಯರು. ಈ ನಾಲ್ವರು ಬೀದರ್ ಜಿಲ್ಲೆಯ ಔರಾದ್ ತಾಲೂಕಿನಿಂದ ಮಹಾರಾಷ್ಟ್ರದ ಲಾಥೂರ್ ನಗರಕ್ಕೆ ಗಾಂಜಾ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

Bidar 4 women arrested for transporting ganja in a bus

ಬಂಧಿತರಿಂದ 22 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆಯರು ಬಸ್‍ ನಲ್ಲಿ ಗಾಂಜಾ ಸಾಗಿಸುವ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ಮಾಡಿದೆ.

ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The 4 women's arrested in Chambola, Bidar taluku on March 10. The women's transporting ganja from Aurad to Latur in a bus. Police seized 22 kg ganja.
Please Wait while comments are loading...