Bhavani Revanna: ಭವಾನಿ ರೇವಣ್ಣ ಅವರೇ ಒಂದೂವರೇ ಕೋಟಿ ಕಾರಿನ ಬಗ್ಗೆ ಮಾತನಾಡುವ ಅಹಂ ಈಗ ಎಲ್ಲೋಯ್ತು?

Bhavani Revanna: ಕೆಲವು ತಿಂಗಳೂಗಳ ಹಿಂದೆಯಷ್ಟೇ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಪತ್ನಿ ಕಾರಿಗೆ ಇತ್ತೀಚೆಗಷ್ಟೇ ಒಬ್ಬ ಸಾಮಾನ್ಯ ವ್ಯಕ್ತಿಯ ಬೈಕ್‌ ಡಿಕ್ಕಿಯಾಗಿತ್ತು. ಈ ವೇಳೆ ಅವರು ಬೈಕ್‌ನಲ್ಲಿದ್ದವರ ಆರೋಗ್ಯ ಕ್ಷೇಮವನ್ನು ವಿಚಾರಿಸುವುದನ್ನು ಬಿಟ್ಟು, ಅವರ ಮೇಲೆಯೆ ದರ್ಪ ತೋರಿದ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮದ ಬಳಿ ನಡೆದಿತ್ತು. ಇನ್ನು ಈ ವಿಡಿಯೋ ಎಲ್ಲೆಡೆ ಹರಿದಾಡಿದ್ದು, ಭವಾನಿ ಅವರ ಈ ನಡೆಗೆ ಜನರಿಂದ ಆಕ್ರೋಶಗಳು ಕೂಡ ಭುಗಿಲೆದ್ದಿದ್ದವು. ಇದೀಗ ಮತ್ತೆ ಇದೇ ವಿಚಾರ ಮುನ್ನೆಲೆಗೆ ಬಂದಿದೆ.

ಸಾಮಾನ್ಯವಾಗಿ ಭವಾನಿ ರೇವಣ್ಣ ಅವರ ಗತ್ತು, ಅಹಂಕಾರ, ಮದ, ಅಹಂನ ನಿಜರೂಪದ ಬಗ್ಗೆ ಹಾಸನದ ಜನರಿಗೆ ಮಾತ್ರ ಗೊತ್ತಿತ್ತು. ಬಳಿಕ ಅವರ ಅಸಲಿ ಮುಖವಾಡ ಗೊತ್ತಾಗಿದ್ದೇ ಒಂದೂವರೇ ಕೋಟಿ ಕಾರು ಎನ್ನುವ ಹೇಳಿಕೆಯಿಂದ. ಹಾಗಾದರೆ ಇದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Bhavani Revanna s 1 5 crore car statement again viral

ಒಂದೂವರೇ ಕೋಟಿ ಕಾರು ಎಂಬ ಹೇಳಿಕೆಯ ವಿಚಾರವೇ ಭವಾನಿ ರೇವಣ್ಣ ಅವರ ಅಸಲಿ ಮುಖವಾಡವನ್ನೇ ಬಿಚ್ಚಿಡಲು ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸಾಮಾನ್ಯವಾಗಿ ಏನೇ ಆಗ್ಲಿ ಅತಿಯಾಗಬಾರ್ದು. ಅತಿಯಾದ್ರೆ ಹೀಗೆ ಆಗೋದು ಅಂತಲೂ ಹೇಳುತ್ತಿದ್ದಾರೆ ಜನರು. ಮತ್ತೊಂದೆಡೆ, ಇದೀಗ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದ್ದಂತೆ ಭವಾನಿ ರೇವಣ್ಣ ಅವರ ಮುಖ ಬಾಡಿದಂತಾಗಿದ್ದು, ಆಗ ಇದ್ದ ಗತ್ತು, ಗಾಂಭೀರ್ಯ, ಅಹಂ ಎಲ್ಲೋಯ್ತು ಅಂತಿದ್ದಾರೆ.

"ಬೋರ್ಡ್‌ ಎಲ್ಲಾ ಡ್ಯಾಮೇಜ್‌ ಆಗಿದೆ, ಎಲ್ಲಿಗೆ ನುಗ್ಗಿಸುತ್ತೀಯಾ.. ಸುಟ್ಟು ಹಾಕ್ರೋ ಎನ್ನುವ ದುರಹಂಕಾರದ ಮಾತನ್ನು ಹಾಡಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ಅಷ್ಟೇ ಅಲ್ಲದೆ, ಕಾರು ಎಷ್ಟು ಡ್ಯಾಮೇಜ್‌ ಆಗಿದೆ, ಹೆಂಗೆ ರೆಡಿ ಮಾಡ್ಸೋದು? ಎಲ್ಲಾ ಹೋಗಿದೆ. ನಡಿ ಆಚೆಗೆ ಯಾವನು ಸೀಜ್‌ ಮಾಡಿ ಗಾಡಿ. ಅವನಿಗೆ ಬೈಕ್ ಮುಟ್ಟಬೇಡ ಅಂತೇಳು. ಸಾಲಿಗ್ರಾಮ ಎಸ್‌ಐ ಬರಲು ಹೇಳು," ಎನ್ನುವ ದುರಂಹಕಾರದ ಮಾತುಗಳು ಎಲ್ಲೆಡೆ ವೈರಲ್‌ ಆಗಿದ್ದವು.

"ಒಂದೂವರೆ ಕೋಟಿ ರೂಪಾಯಿ ಗಾಡಿ ಅದು, ಅದನ್ನು ಡ್ಯಾಮೇಜ್ ಮಾಡಿ ಬಿಟ್ಟಿದ್ದಾನೆ. ಏನ್ ಅರ್ಜೆಂಟ್ ಇತ್ತು? ಏನ್ ದೇಶ ಮುಳುಗಿ ಹೋಗಿತ್ತಾ? ಸಾಯಂಗಿದ್ರೆ ನೀನು ಸಾಯಬೇಕಿತ್ತು. ಬಸ್‌ಗೆ ಸಿಗಾಕೊಂಡು, ನನ್ನ ಕಾರು ಡ್ಯಾಮೇಜ್ ಮಾಡೋಕೆ ನೀನ್ ಯಾವನು?," ಅಂತೆಲ್ಲಾ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಭವಾನಿ ರೇವಣ ಅವರ ಈ ನಡೆಗೆ ವ್ಯಾಪಕ ಆಕ್ರೋಶಗಳು ಕೂಡ ಭುಗಿಲೆದ್ದಿದ್ದವು.

ಇನ್ನು ಈ ವೇಳೆ ಮೇಡಂ ಗಾಡಿ ತೆಗಿರಿ ಹೋಗೋಣ ಎಂದು ಸ್ಥಳದಲ್ಲಿದ್ದವರು ಹೇಳಿದ್ದು, ಅದಕ್ಕೆ ಗಾಡಿ ತಗಂಡು ಏನ್ ಮಾಡೋಣ? ರಿಪೇರಿ ಮಾಡಿಸೋದಿಕ್ಕೇ 50 ಲಕ್ಷ ರೂಪಾಯಿ ಕೊಡ್ತೀರಾ ಎಂದು ಅವರನ್ನೇ ಪ್ರಶ್ನಿಸಿದ್ದರು.

ಸಾಮಾನ್ಯವಾಗಿ ಭವಾನಿ ರೇವಣ್ಣ ಅವರು ಏನು ಅಂತಾ ಗೊತ್ತಿದ್ದಿದ್ದು ಮಾತ್ರ ಹಾಸನ ಜನತೆಗೆ ಮಾತ್ರ. ಆದರೆ ಕಾರು ಅಪಘಾತದ ವೇಳೆ ಅವರು ಬೈಕ್‌ ಸವಾರನನ್ನು ನಿಂದಿಸಿದ ಬಳಿಕವಷ್ಟೇ ಇವರು ಇಷ್ಟೊಂದು ದುರಹಂಕಾರಿ ಎಂದು ಇಡೀ ರಾಜ್ಯಕ್ಕೆ ಗೊತ್ತಾಗಿದ್ದು ಎನ್ನುತ್ತಿದ್ದಾರೆ ಜನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+