5,475 ದಿನಗಳ ಕಾಲ ಮಗ ಹೊರಬರಲ್ಲ: ಬಿಕ್ಕಿಬಿಕ್ಕಿ ಅಳುತ್ತಿರುವ ಭವಾನಿ ರೇವಣ್ಣ, ಮುಂದೇನು ಕತೆ... Prajwal Revanna
ಹಾಸನ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಭಾರಿ ನಿರಾಸೆಯಾಗಿದೆ. ಒಂದು ವರ್ಷದಿಂದಲೂ ಜೈಲುವಾಸದಲ್ಲಿರುವ ಪ್ರಜ್ವಲ್‌ಗೆ ಇಂದು ಕೋರ್ಟ್‌ನಲ್ಲಿ ಬಿಗ್‌ಶಾಕ್ ಎದುರಾಗಿದೆ. ಮಹಿಳೆ ಮೇಲಿನ ಅತ್ಯಾಚಾರ ಕೇಸ್‌ನಲ್ಲಿ ಪ್ರಜ್ವಲ್ ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿದೆ. ಹೀಗಾಗಿ ಪ್ರಜ್ವಲ್‌ಗೆ ಸೆರೆವಾಸ ಮುಂದುವರಿದಿದ್ದು, ತೀರ್ಪು ಕೇಳಿ ಕೋರ್ಟ್‌ನಲ್ಲೇ ಪ್ರಜ್ವಲ್ ಕಣ್ಣೀರಿಟ್ಟಿದ್ದಾರೆ. ಇತ್ತ ಪ್ರಜ್ವಲ್ ತಾಯಿ ರೇವಣ್ಣ ಕೂಡ ಮಗನ ಸ್ಥಿತಿ ಕಂಡು ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗನೂ ಆಗಿರುವ ಪ್ರಜ್ವಲ್, ಚಿಕ್ಕವಯಸ್ಸಿನಲ್ಲೇ ರಾಜಕಾರಣದಲ್ಲಿ ದೊಡ್ಡ ಹೆಸರು ಮಾಡಿದ್ದರು. ಕರ್ನಾಟಕದ ರಾಜಕೀಯ ಕುಟುಂಬ ಎಂದು ಕರೆಸಿಕೊಂಡಿದ್ದ ದೇವೇಗೌಡರಿಗೆ ಪ್ರಜ್ವಲ್ ಕೇಸ್‌ನಿಂದಾಗಿ ಕಳಂಕ ಅಂಟಿದ್ದೂ ಉಂಟು. ಪ್ರಜ್ವಲ್ ತಂದೆ ಹೆಚ್.ಡಿ.ರೇವಣ್ಣ ಕೂಡ ಪ್ರಭಾವಿ ರಾಜಕಾರಣಿ ಎಂದೇ ಹೆಸರುವಾಸಿ. ಆದರೆ ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಪ್ರಜ್ವಲ್ ಮೇಲೆ ಮಹಿಳೆಯರ ಮೇಲೆ ಸರಣಿ ಅ*ತ್ಯಾಚಾರದ ಆರೋಪ ಕೇಳಿಬಂದಿತ್ತು. ಇದು ಕೇವಲ ಆರೋಪವಾಗಿರಲಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಪ್ರಜ್ವಲ್ ಇದ್ದಾರೆ ಎನ್ನಲಾದ ಅಶ್ಲೀಲ ವಿಡಿಯೋಗಳಿದ್ದ ಪೆನ್‌ಡ್ರೈವ್‌ಗಳು ರಾತ್ರೋರಾತ್ರಿ ಹಾಸನ ಕ್ಷೇತ್ರದಲ್ಲಿ ಹಂಚಿಕೆಯಾಗಿತ್ತು.

ಇದನ್ನು ಕಂಡ ಹಾಸನ ಮಂದಿ ಬೆಚ್ಚಿಬಿದ್ದಿದ್ದರು. ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಪ್ರಜ್ವಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿ, ಕೊನೆಗೆ ಅವರ ಮೇಲೆ ಕೇಸ್ ಕೂಡ ದಾಖಲಾಯ್ತು. ವಿದೇಶದಲ್ಲಿ ಕೆಲ ಕಾಲ ಇದ್ದ ಪ್ರಜ್ವಲ್, ಬಳಿಕ ಬೆಂಗಳೂರಿಗೆ ಬಂದ ತಕ್ಷಣ ಅರೆಸ್ಟ್ ಆಗಿದ್ದರು. ಮಹಿಳೆಯರ ಮೇಲಿನ ಅತ್ಯಾಚಾರ ಆರೋಪದಡಿ ಪ್ರಜ್ವಲ್ ಮೇಲೆ ನಾಲ್ಕು ಕೇಸ್‌ಗಳು ದಾಖಲಾಗಿವೆ. ಈ ಪೈಕಿ ಒಂದು ಅತ್ಯಾಚಾರ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ನಾಳೆ ಶಿಕ್ಷೆಯ ಪ್ರಮಾಣ ಕೂಡ ಪ್ರಕಟವಾಗಲಿದೆ.
ಶಿಕ್ಷೆ ಎಷ್ಟು ವರ್ಷ?
ಮೂಲಗಳ ಪ್ರಕಾರ ಪ್ರಜ್ವಲ್ ದೋಷಿ ಎಂದು ತೀರ್ಪು ಬಂದಿರುವುದರಿಂದ ಇನ್ನೂ ಹಲವು ವರ್ಷಗಳ ಕಾಲ ಜೈಲುವಾಸದಲ್ಲೇ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಜ್ವಲ್ ವಿರುದ್ಧ ಬಿಎನ್ಎಸ್ 376(2) (k), 376 (2) (n), 354 (a) (b) (c), 506 ಮತ್ತು 201, IT ACT 66(E) ಅಡಿಯಲ್ಲಿ ಕೇಸ್ ದಾಖಲಾಗಿದೆ. ಈಗ ಅತ್ಯಾಚಾರ ಕೇಸ್‌ನಲ್ಲಿ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 376(2) (k) ಮತ್ತು 376 (2) (n) ಕನಿಷ್ಟ 10 ವರ್ಷ ಅಥವಾ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶ ಇದೆ.

ಇನ್ನು 354 (a) (b) (c) ಅಡಿಯಲ್ಲಿ 3 ವರ್ಷ ಶಿಕ್ಷೆಯೂ ನೀಡಬಹುದು. ಸೆಕ್ಷನ್ 506 ಅಡಿಯಲ್ಲಿ 6 ತಿಂಗಳು, 201 ಬಿಎನ್ಎಸ್ ಅಡಿಯಲ್ಲಿ ಕನಿಷ್ಠ 1ರಿಂದ 7 ವರ್ಷದವರೆಗೆ ಶಿಕ್ಷೆ ನೀಡಬಹುದು. ಹಾಗೆಯೇ ಸೆಕ್ಷನ್ 66(E) ಐಟಿ ಆ್ಯಕ್ಟ್ 2008 ಅಡಿಯಲ್ಲಿ 3 ವರ್ಷ ಶಿಕ್ಷೆ ವಿಧಿಸಲು ಅವಕಾಶವಿದೆ. ಇಂದು ತೀರ್ಪು ನೀಡಿರುವ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ಹೇಳಿದೆ. ಪ್ರಜ್ವಲ್ ದೋಷಿ ಆಗಿರುವುದರಿಂದ ಶಿಕ್ಷೆಯ ಪ್ರಮಾಣವೂ ಅಧಿಕವಾಗಿರುತ್ತೆ ಎಂದು ಕಾನೂನು ತಜ್ಞರು ಹೇಳಿದ್ದಾರೆ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರಿಗೆ ಕೋರ್ಟ್ ಯಾವ ಶಿಕ್ಷೆ? ಎಷ್ಟು ವರ್ಷಗಳ ಕಾಲ ಶಿಕ್ಷೆ ವಿಧಿಸಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.
ಬೇಸರದಿಂದ ಮನೆಗೆ ಹೋದ ಭವಾನಿ ರೇವಣ್ಣ
ಒಂದು ವರ್ಷದಿಂದಲೂ ಮಗ ಜೈಲಿನಲ್ಲೇ ಇರುವುದನ್ನು ಕಣ್ಣಾರೆ ಕಂಡಿರುವ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಅವರು ಈ ಕೇಸ್‌ನಲ್ಲಿ ಪುತ್ರನಿಗೆ ಬಿಡುಗಡೆ ಭಾಗ್ಯ ಸಿಗುವ ನಿರೀಕ್ಷೆಯಲ್ಲಿದ್ದರು. ಈಗ ದೋಷಿ ಎಂದು ತೀರ್ಪು ಬಂದಿರುವುದರಿಂದ ಭವಾನಿ ರೇವಣ್ಣ ಮತ್ತೆ ಭಾವುಕರಾಗಿದ್ದಾರೆ. ಮಗನಿಗೆ ಇನ್ನೆಷ್ಟು ವರ್ಷ ಶಿಕ್ಷೆ ಸಿಗುತ್ತದೆಯೋ ಎಂದು ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತೀರ್ಪು ಬಳಿಕ ಬೇಸರದಿಂದ ಬಸವನಗುಡಿಯ ನಿವಾಸಕ್ಕೆ ಭವಾನಿ ರೇವಣ್ಣ ತೆರಳಿದರು ಎಂದು ತಿಳಿದುಬಂದಿದೆ.












Click it and Unblock the Notifications