ಭಟ್ಕಳ-ಪಾಕಿಸ್ತಾನ ಮದುವೆ ಸಂಬಂಧ ಬೆಸೆದಿದ್ದು ನವಾಯತರು

ಭಾರತದಿಂದ ಪಾಕಿಸ್ತಾನಕ್ಕೆ ಹೋಗುವ ಪ್ರತಿ ದೂರವಾಣಿ ಕರೆ ಮೇಲೆ ಗೂಢಚಾರರು ಹದ್ದಿನ ಕಣ್ಣಿಟ್ಟಿರುತ್ತಾರೆ. ಆದರೆ, ಇಂದು ಉಗ್ರರ ನೆಲೆವೀಡು ಎಂಬಂತೆ ನೋಡಲಾಗುತ್ತಿರುವ ಭಟ್ಕಳದಲ್ಲಿ ಹಲವರು ಪಾಕಿಸ್ತಾನೀಯರ ಜೊತೆ ಮದುವೆ ಸಂಬಂಧ ಹೊಂದಿದ್ದಾರೆ. ಈ ಸಂಪ್ರದಾಯ ಹಲವು ದಶಕಗಳಿಂದ ನಡೆದುಬರುತ್ತಿದೆ.

ಸೈಯದ್ ಇಸ್ಮೈಲ್ ಅಫಾಕ್ ಪಾಕಿಸ್ತಾನದ ಮಹಿಳೆಯನ್ನು ಮದುವೆಯಾಗಿದ್ದಾನೆ. ಹಲವು ಬಾರಿ ಪಾಕಿಸ್ತಾನಕ್ಕೆ ಕರೆ ಮಾಡಿದ್ದಾನೆ. ಇದು ಗೂಢಚಾರರ ಗಮನ ಸೆಳೆದಿದೆ.

ಭಟ್ಕಳದಲ್ಲಿ ಹೆಚ್ಚಾಗಿ ಹಿಂದೂಗಳು, ಮುಸ್ಲಿಮರು, ನವಾಯತರು ಹಾಗೂ ಜೈನರು ಇದ್ದಾರೆ. ಇಲ್ಲಿ 60 ಮಸೀದಿಗಳು, ದೇಗುಲಗಳು ಮತ್ತು ಬಸದಿಗಳಿವೆ. [ಶಂಕಿತರಿಂದ ಬಯಲಾಗುತ್ತಾ ಉಗ್ರರ ಜಾಲ?]

bhatkal

ವ್ಯಾಪಾರಕ್ಕೆ ಬಂದು ನೆಲೆನಿಂತ ನವಾಯತರು : ಈ ಕರಾವಳಿ ಪ್ರದೇಶಕ್ಕೆ ಪರ್ಶಿಯನ್ನರು, ಅರಬ್ಬರು ಸೇರಿದಂತೆ ಹಲವು ವಿದೇಶೀಯರು 1,000 ವರ್ಷಗಳಿಂದಲೂ ಭೇಟಿ ನೀಡಿ ವಾಣಿಜ್ಯ ಚಟುವಟಿಕೆ ನಡೆಸಿದ್ದಾರೆ. ಹಲವು ಅರಬ್ ವ್ಯಾಪಾರಿಗಳು ಭಟ್ಕಳದಲ್ಲಿ ನೆಲೆನಿಂತು ತಮ್ಮನ್ನು ನವಾಯತರೆಂದು ಕರೆದುಕೊಂಡರು. ಇವರು ಪಾಕಿಸ್ತಾನ, ಶ್ರೀಲಂಕಾ, ನೆಲ್ಲೋರ್ ಹಾಗೂ ಆರ್ಕಟ್‌ನಲ್ಲೂ ಕಂಡುಬರುತ್ತಾರೆ. [ಬೆಂಗಳೂರಲ್ಲಿ ಮತ್ತಿಬ್ಬರು ಶಂಕಿತರು ವಶಕ್ಕೆ]

ನವಾಯತರು ಭಟ್ಕಳದಲ್ಲಿ ನೆಲೆನಿಂತರೂ ಸ್ಥಳೀಯ ಸಂಪ್ರದಾಯ ಪಾಲಿಸಲಿಲ್ಲ. ತಮ್ಮದೇ ಜೀವನಶೈಲಿ ಮುಂದುವರಿಸಿದರು. ತಮ್ಮದೇ ಕೇರಿ ಸ್ಥಾಪಿಸಿಕೊಂಡರು. ಅವರ ಭಾಷೆಗೂ ನವಯತಿ ಎಂದೇ ಹೆಸರಿದೆ. ಈ ಭಾಷೆಯಲ್ಲಿ ಪರ್ಶಿಯನ್, ಅರೇಬಿಕ್, ಕೊಂಕಣಿ, ಉರ್ದು, ಕನ್ನಡ ಮತ್ತು ಮಳಯಾಳಂ ಶಬ್ದಗಳು ಹೇರಳವಾಗಿ ಕಂಡುಬರುತ್ತವೆ.

ಭಟ್ಕಳದಲ್ಲಿರುವ ನವಾಯತರು ಪಾಕಿಸ್ತಾನದಲ್ಲಿನ ನವಾಯತರೊಂದಿಗೆ ಮದುವೆ ಸಂಬಂಧ ಹೊಂದಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.

ಎಲ್ಲವನ್ನೂ ಬದಲಿಸಿದ್ದು ದಂಗೆ : ಭಟ್ಕಳದಲ್ಲಿ 1993ರಲ್ಲಿ ನಡೆದ ಬಹುದೊಡ್ಡ ದಂಗೆಯು ಪಾಕಿಸ್ತಾನವನ್ನು ಸೆಳೆಯಿತು. ಆ ನಂತರವೇ ಐಎಸ್ಐ ಏಜೆಂಟ್‌ಗಳು ಭಟ್ಕಳಕ್ಕೆ ಬಂದರು. ಅವರಿಗೆ ರಿಯಾಜ್ ಭಟ್ಕಳ್ ಬಾತ್ಮೀದಾರನಾಗಿ ಕೆಲಸ ಮಾಡುತ್ತಿದ್ದ. [ಭಟ್ಕಳ ಬಂದ್ ಕರೆ ವಾಪಸ್]

ಆತನಲ್ಲಿದ್ದ ಹಣದ ಹಪಾಹಪಿ ಐಎಸ್ಐನೊಂದಿಗೆ ಸಂಪರ್ಕ ಪಡೆಯುವಂತೆ ಮಾಡಿತು. ಅನಂತರ ಆತ ನಡೆಸಿದ ಎಲ್ಲ ಹಿಂಸಾಚಾರಗಳೂ ಹಣಕ್ಕಾಗಿಯೇ ಆಗಿದ್ದವು ಎನ್ನಲಾಗಿದೆ. [ಹಣ ಉಳಿಸಲು ಹೋಗಿ ಸಿಕ್ಕಿಬಿದ್ದ ರಿಯಾಜ್]

ಆದರೆ ರಿಯಾಜ್‌ನನ್ನು ಇಷ್ಟಪಡುತ್ತಿದ್ದ ಇತರರು ಸೇರಿ ಇಂಡಿಯನ್ ಮುಜಾಹಿದೀನ್ ಸ್ಥಾಪಿಸಿದರು. ಭಟ್ಕಳದಲ್ಲಿ ಕೆಲವರು ತಪ್ಪಿತಸ್ಥರಿದ್ದಾರೆ. ಆದರೆ, ಆದರೆ, ಸಂಪೂರ್ಣ ಸಮುದಾಯ ಉಗ್ರವಾದಿಗಳಲ್ಲ ಎಂಬುದು ಸ್ಥಳೀಯರ ವಾದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+