ಕಾಶಿಯಾತ್ರೆಯ ಸಬ್ಸಿಡಿ ಹೆಚ್ಚಳ, ಪ್ಯಾಕೇಜ್‌ನಲ್ಲೂ ಬದಲಾವಣೆ

ಬೆಂಗಳೂರು, ಆಗಸ್ಟ್ 10; ಕರ್ನಾಟಕ ಸರ್ಕಾರ 'ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ' ಪ್ಯಾಕೇಜ್‌ನಲ್ಲಿ ಕೆಲವು ಬದಲಾವಣೆ ಮಾಡಿದೆ. ಸರ್ಕಾರದಿಂದ ಕಾಶಿಯಾತ್ರೆ ಕೈಗೊಳ್ಳುವ ಪ್ರತಿ ಯಾತ್ರಿಕರಿಗೆ ನೀಡುವ ಸಬ್ಸಿಡಿಯನ್ನು ಸಹ ಏರಿಕೆ ಮಾಡಿದೆ.

ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, "ರಾಜ್ಯ ಸರ್ಕಾರದಿಂದ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಯೋಜನೆಯಡಿ ಕಾಶಿಯಾತ್ರೆಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು 5 ಸಾವಿರದಿಂದ 7,500ಕ್ಕೆ ಹೆಚ್ಚಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗತ್ತದೆ" ಎಂದು ಹೇಳಿದ್ದರು.

bharat-gaurav-kashi-darshan-tour

ಈಗ ಹೊಸದಾಗಿ 'ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ' ಪ್ಯಾಕೇಜ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಸರ್ಕಾರ ಪ್ರತಿ ಯಾತ್ರಿಕರಿಗೆ ನೀಡುವ ಸಬ್ಸಿಡಿಯನ್ನು ಸಹ 7,500 ರೂ.ಗಳಿಗೆ ಹೆಚ್ಚಿಸಿ ಆದೇಶಿಸಲಾಗಿದೆ.

ಪ್ಯಾಕೇಜ್‌ನಲ್ಲಿ ಬದಲಾವಣೆ; ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಯೋಜನೆಯಡಿ ಸುಗಮ ಮತ್ತು ಅನುಕೂಲಕ್ಕೆ ತಕ್ಕಂತೆ ರೈಲು ಪ್ರಯಾಣ, ವಸತಿ ಮತ್ತು ದರ್ಶನ ಮಾಡುವ ಎಲ್ಲ ಸೌಲಭ್ಯಗಳನ್ನು ಭಾರತ್ ಗೌರವ್ ರೈಲು ಪ್ಯಾಕೇಜ್ ಒಳಗೊಂಡಿದೆ. ಈ ಯೋಜನೆಗೆ 2022ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ಈ ಯೋಜನೆಯಡಿ 4ನೇ ಸುತ್ತಿನ ಯಾತ್ರೆ ಜುಲೈ 29ರಂದು ಆರಂಭವಾಗಿದೆ. ಈಗ ಪ್ಯಾಕೇಜ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಯೋಜನೆಗೆ ಈಗ ಬಿಹಾರದ ಗಯಾವನ್ನು ಸೇರಿಸಲಾಗಿದೆ ಮತ್ತು 8 ದಿನಗಳ ಪ್ಯಾಕೇಜ್ ಅನ್ನು 9 ದಿನಗಳಿಗೆ ವಿಸ್ತರಣೆ ಮಾಡಲಾಗಿದೆ.

ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಯೋಜನೆಯಡಿ ಈ ಹಿಂದೆ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್ ರಾಜ್ ಇತ್ತು. ಈಗ ಹೊಸದಾಗಿ ಗಯಾ ಸೇರಿಸಲಾಗಿದೆ. ಪ್ಯಾಕೇಜ್‌ಗೆ 20 ಸಾವಿರ ರೂ. ದರ ನಿಗದಿ ಮಾಡಲಿದ್ದು, ಸರ್ಕಾರ 7,500 ರೂ. ಸಬ್ಸಿಡಿಯನ್ನು ನೀಡಲಿದೆ.

ಎಲ್‌ಎಚ್‌ಬಿ ಕೋಚ್ ಸೇರ್ಪಡೆ; ಮಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ 'ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ' ಹೊಸ ಪ್ಯಾಕೇಜ್‌ ಬಗ್ಗೆ ಮಾತನಾಡಿ, "ಪ್ಯಾಕೇಜ್ ಯೋಜನೆಯಡಿಯಲ್ಲಿ ಹೊಸದಾಗಿ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಸುಸಜ್ಜಿತವಾದ ಅಡುಗೆ ಮನೆ ಇರುತ್ತದೆ. ಅಲ್ಲದೇ ಇಬ್ಬರು ವೈದ್ಯರು ಯಾತ್ರಾರ್ಥಿಗಳ ಸೇವೆಗೆ ಲಭ್ಯವಿರುತ್ತಾರೆ" ಎಂದು ಹೇಳಿದ್ದಾರೆ.

ಈ ಪ್ಯಾಕೇಜ್‌ನ ಮುಂದಿನ ದಿನಾಂಕಗಳನ್ನು ಸಹ ಘೋಷಣೆ ಮಾಡಲಾಗಿದೆ. 'ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ' ಪರಿಷ್ಕೃತ ಪ್ಯಾಕೇಜ್ ರೈಲಿನ 5ನೇ ಟ್ರಿಲ್ ಆ. 29ರಂದು, ಸೆ. 23ರಂದು 6ನೇ ಟ್ರಿಪ್ ಆರಂಭವಾಗಲಿದೆ. ಯಾತ್ರೆಗೆ ತುಮಕೂರಿನಲ್ಲಿಯೂ ಈಗ ನಿಲುಗಡೆ ಕಲ್ಪಿಸಲಾಗಿದೆ.

ಕೇಂದ್ರ ಸರ್ಕಾರ ಭಾರತ್ ಗೌರವ್ ರೈಲುಗಳನ್ನು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳಗಳನ್ನು ಭಾರತ ಮತ್ತು ಪ್ರಪಂಚದ ಜನರಿಗೆ ದರ್ಶನ ಕಲ್ಪಿಸಲು ಘೋಷಣೆ ಮಾಡಿತ್ತು. ಐಆರ್‌ಸಿಟಿಸಿ, ಭಾರತೀಯ ರೈಲ್ವೆ, ಕರ್ನಾಟಕ ಸರ್ಕಾರದ ಜಂಟಿಯಾಗಿ 'ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ' ಯೋಜನೆ ನಡೆಸುತ್ತಿವೆ.

ಈ ಪ್ರವಾಸಿ ಪ್ಯಾಕೇಜ್‌ಗೆ 20,000 ರೂಪಾಯಿ ವೆಚ್ಚವಾಗಲಿದೆ ಮತ್ತು ಸರ್ಕಾರ 7,500 ರೂಪಾಯಿ ಸಬ್ಸಿಡಿಯನ್ನು ಒದಗಿಸಲಿದೆ. ಈ ಮೊದಲ ರೈಲಿನಲ್ಲಿ ಕಾಶಿಯಷ್ಟೇ ಅಲ್ಲದೇ ಯಾತ್ರಾರ್ಥಿಗಳು ಅಯೋಧ್ಯೆ ಮತ್ತು ಪ್ರಯಾಗ್ ರಾಜ್‌ಗೂ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಈಗ ಗಯಾ ಸೇರ್ಪಡೆ ಮಾಡಲಾಗಿದೆ.

ಭಾರತೀಯ ರೈಲ್ವೆ ಪ್ರವಾಸಿಗರಿಗೆ ಅನುಕೂಲಕ್ಕೆ ತಕ್ಕಂತೆ ವಿಷಯ ಆಧಾರಿತ ರೈಲುಗಳನ್ನು ಓಡಿಸುವ ಗುರಿ ಹೊಂದಿದೆ. ಭಾರತ್ ಗೌರವ್ ರೈಲುಗಳ ಕಾರ್ಯಾಚರಣೆಗಾಗಿಯೇ ಐಸಿಎಫ್ ಕೋಚ್ ಗಳನ್ನು ಒಳಗೊಂಡಿರುವ ರೇಕ್‌ಗಳನ್ನು ಒದಗಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+