ಮುಂಗಾರು ಮಳೆ ಅಸಲಿ ಅಬ್ಬರ ಈಗ ಶುರು ಗುರೂ!
ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಅದರಲ್ಲೂ ಕಳೆದ 2 ವಾರದಿಂದ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮುಂಗಾರು ಮಳೆ ತನ್ನ ಅಸಲಿ ರೂಪ ತೋರಿಸಿದೆ. ಕಳೆದ ವಾರ ಪೂರ್ತಿ ಮುಂಗಾರು ಮಳೆ ಅಬ್ಬರಿಸಿದ್ದು, ಇದೀಗ ಜೂನ್ 3ನೇ ವಾರ ಕೂಡ ಮಳೆ ತನ್ನ ಆರ್ಭಟವನ್ನು ಮುಂದುವರಿಸುವುದು ಫಿಕ್ಸ್ ಆಗಿದೆ. ಅದರಲ್ಲೂ ಮುಂದಿನ 5 ದಿನ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಬಲು ಜೋರಾಗಿರುವ ಎಚ್ಚರಿಕೆ ನೀಡಲಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ನಿರಂತರ ಮಳೆ ಆಗಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಮಳೆ ಅಬ್ಬರಿಸುವ ಮುನ್ಸೂಚನೆ ಈಗ ಸಿಕ್ಕಿದೆ. ಹಾಗೇ ಮತ್ತೊಂದ್ಕಡೆ ಬೆಂಗಳೂರಲ್ಲಿ, ಮಳೆಯಿಂದ ಎದುರಾಗಬಹುದಾದ ಸಮಸ್ಯೆಯ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಮುಂದಿನ 5 ದಿನ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂಗಾರಿನ ಅಬ್ಬರ ಜೋರಾಗುತ್ತದೆ ಎನ್ನಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗೆ ಮಳೆಯ ಸಿಂಚನ ಆಗುತ್ತೆ ಗೊತ್ತಾ? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

ಇಲ್ಲಿ ಭರ್ಜರಿ ಮಳೆ ಗ್ಯಾರಂಟಿ!
ಕರ್ನಾಟಕ ರಾಜ್ಯದ ದಕ್ಷಿಣ ಒಳನಾಡು ಭಾಗದಲ್ಲಿ ಮುಂದಿನ ವಾರ ಪೂರ್ತಿ ಮಳೆ ಅಬ್ಬರಿಸಲಿದೆ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕೊಡಗು, ಉಡುಪಿ, ಚಾಮರಾಜನಗರ, ಮಂಡ್ಯ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ & ದಾವಣಗೆರೆಯ ಬಹುತೇಕ ಹಲವು ಪ್ರದೇಶದಲ್ಲಿ ಮಳೆ ಅಬ್ಬರಿಸಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕೂಡ ಭರ್ಜರಿ ಮಳೆ ಕುರಿತು ಮುನ್ನೆಚ್ಚರಿಕೆ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲೂ ಮಳೆ ಅಬ್ಬರ ತೋರಿಸಲಿದೆ ಎಂದು ಹೇಳಲಾಗಿದ್ದು, ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ರಾಯಚೂರು ಸೇರಿ ಯಾದಗಿರಿ, ಬೀದರ್, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲಿಯೂ ಮಳೆ ಅಬ್ಬರಿಸಲಿದೆ.
ಮನುಷ್ಯ ತಪ್ಪಿನಿಂದಾಗಿ ಈಗ...
ಮಳೆ ಬೇಕು ಮಳೆ ಚೆನ್ನಾಗಿ ಬಂದ್ರೆ ಅಲ್ವ ಮನುಷ್ಯರು ನೆಮ್ಮದಿಯಾಗಿ ಜೀವನ ಮಾಡೋಕೆ ಆಗುತ್ತೆ? ಭಾರತದಲ್ಲಿ ಅದ್ರಲ್ಲೂ ಕರ್ನಾಟಕದಲ್ಲಿ ಪಶ್ಚಿಮ ಘಟ್ಟದ ಕಾರಣಕ್ಕೆ ಉತ್ತಮವಾಗಿ ಮಳೆ ಬೀಳುತ್ತದೆ. ಆದರೂ ಮನುಷ್ಯ ಮಾಡಿಕೊಂಡ ತಪ್ಪುಗಳಿಗೆ ಮಳೆ ಮೋಡಗಳು 4-5 ತಿಂಗಳು ನಾಪತ್ತೆ ಆಗಿದ್ದವು. ಪ್ರಕೃತಿ ಮೇಲೆ ಮನುಷ್ಯರು ದೌರ್ಜನ್ಯ ನಡೆಸುತ್ತಿರುವ ಕಾರಣಕ್ಕೆ ಹೀಗೆ ಆಗಿದೆ ಎಂದು ವಿಜ್ಞಾನಿಗಳು ಹೇಳಿದ್ದರು. ಹೀಗಿದ್ದಾಗಲೇ ಮತ್ತೆ ಭರ್ಜರಿಯಾಗಿ ಮಳೆ ಆರಂಭವಾಗಿದೆ. ಅದರಲ್ಲೂ ಈ ತಿಂಗಳು ಅಂದ್ರೆ ಜೂನ್ ತಿಂಗಳಲ್ಲಿ ಭಾರಿ ಮಳೆ ಆಗಿ ಖುಷಿ ನೀಡಿದೆ.












Click it and Unblock the Notifications