Vande Bharat Express: ಬೆಂಗಳೂರು-ಸಿಕಂದರಾಬಾದ್ ಮಧ್ಯೆ ಶೀಘ್ರವೇ ರೈಲು ಸೇವೆ ಆರಂಭ, ಯಾವಾಗ ತಿಳಿಯಿರಿ
ಬೆಂಗಳೂರು, ಏಪ್ರಿಲ್ 21: ಬೆಂಗಳೂರು ಹಾಗೂ ಸಿಕಂದರಾಬಾದ್ ನಿವಾಸಿಗಳು ಭಾರತೀ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಈ ಎರಡು ನಗರಗಳ ಮಧ್ಯೆ ಮಾರ್ಗವನ್ನು ವಂದೆ ಭಾರತ್ ಎಕ್ಸಪ್ರೆಸ್ ರೈಲಿನಲ್ಲಿ ಕೇವಲ ಏಳು ಗಂಟೆಯಲ್ಲಿ ಕ್ರಮಿಸಬಹುದಾಗಿದೆ.
ಈಗಾಗಲೇ ತೆಲುಗು ರಾಜ್ಯಗಳಲ್ಲಿ ಎರಡು ವಂದೇ ಭಾರತ್ ರೈಲುಗಳ ಓಡಾಡುತ್ತಿವೆ. ಇದೀಗ ಬೆಂಗಳೂರು - ಸಿಕಂದರಾಬಾದ್ ನಡುವೆ ಹೊಸದಾಗಿ ವಂದೇ ಭಾರತ್ ರೈಲು ಓಡಾಟ ಮುಮದಿನ ತಿಂಗಳ ಮೇ ನಲ್ಲಿ ಆರಂಭವಾಗಿದೆ. ಈ ಸಂಬಂಧ ಭಾರತೀಯ ರೈಲ್ವೆ ಇಲಾಖೆ ಅಗತ್ಯ ಸಿದ್ಧತೆ ನಡೆಸಿದೆ.

ದಕ್ಷಿಣ ಮಧ್ಯ ವಿಭಾಗೀಯ ರೈಲ್ವೆ ಅಧಿಕಾರಿಗಳು ರೈಲು ಮಾರ್ಗದ ನಕ್ಷೆಯನ್ನು ಅಂತಿಮಗೊಳಿಸಿದ್ದಾರೆ. ಅಂದುಕೊಂಡಂತೆ ಸಿಕಂದರಾಬಾದ್ ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭವಾದರೆ ಏಳು ಗಂಟೆಗಳಲ್ಲಿ ಕ್ರಮಿಸಬಹುದು. ಸದ್ಯ ಇದರ ಅವಧಿ 11ಗಂಟೆ ಇದೆ. ಈ ಮೂಲಕ ಪ್ರಯಾಣದ ಅವಧಿ ಇಳಿಕೆ ಆಗಲಿದೆ. ಜೊತೆಗೆ ಈ ನಗರಗಳು ಹಾಗೂ ಮಾರ್ಗ ಮಧ್ಯದ ಪಟ್ಟಣಗಳ ಜನರಿಗೆ ಆಧುನಿಕ ಸೌಲಭ್ಯವುಳ್ಳ ವೇಗದ ಮತ್ತು ಸುರಕ್ಷಿತ ಸಾರಿಗೆ ಸೌಲಭ್ಯ ಸಿಗುತ್ತದೆ.
ಪ್ರಸ್ತುತ ಸನ್ನಿವೇಶದಲ್ಲಿ ಬೆಂಗಳೂರುನಿಂದ ಸಿಕಂದರಾಬಾದ್ ಮಧ್ಯೆ ಸದಸ್ಯ ಎರಡು ಮಾರ್ಗಗಳಲ್ಲಿ ರೈಲುಗಳು ಸಂಚಾರ ನಡೆಸುತ್ತಿವೆ. ಅದರಲ್ಲಿ ಒಂದು ವಿಕಾರಾಬಾದ್, ತಾಂಡೂರು, ರಾಯಚೂರು, ಗುಂತಕಲ್ಲು ಮೂಲಕ ಹಾದು ಹೋಗುತ್ತದೆ.
ಮೇ 21ರಂದು ರೈಲು ಸೇವೆ ಆರಂಭ ಸಾಧ್ಯತೆ
ಎರಡನೇ ರೈಲು ಕರ್ನೂಲ್, ಮಹೆಬೂಬ್,ಗುಂತಕಲ್ಲು ಮಾರ್ಗವಾಗಿ ಬೆಂಗಳೂರು-ಸಿಕಂದರಾಬಾದ್ ತಲುಪತ್ತದೆ. ಈ ಮಾರ್ಗದಲ್ಲಿ ಸದ್ಯ ರೈಲ್ವೇ ಅಧಿಕಾರಿಗಳು ವೇಗದ ಹೆಚ್ಚಳಕ್ಕಾಗಿ ರೈಲ್ವೆ ಹಳಿಯ ಸಾಮರ್ಥ್ಯದತ್ತ ಗಮನ ಹರಿಸಿದ್ದಾರೆ. ಹೊಸದಾಗಿ ವಂದೇ ಭಾರತ್ ರೈಲು ಈ ರೈಲು ಮುಂದಿನ ತಿಂಗಳು 21 ರಂದು ಸೇವೆ ನೀಡುವ ಸಾಧ್ಯತೆ ಇದೆ. ನಿಗದಿತ ಸಮಯ ಪ್ರಾರಂಭದ ಕುರಿತು ರೈಲ್ವೆ ಇಲಾಖೆಯಿಂದಲೇ ಆದಷ್ಟು ಶೀಘ್ರವೇ ಅಧಿಕೃತ ಮಾಹಿತಿ ಲಭ್ಯವಾಗಲಿದೆ ಎಂದ ತಿಳಿದು ಬಂದಿದೆ.

ಸಿಕಂದರಾಬಾದ್ ಮತ್ತು ತಿರುಪತಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ತಿಂಗಳು ಚಾಲನೆ ನೀಡಿದ್ದರು. ಈ ಮಧ್ಯೆ ಎರಡು ವಂದೇ ಭಾರತ್ ರೈಲುಗಳು ಆಂಧ್ರಪ್ರದೇಶ ವ್ಯಾಪ್ತಿಯಲ್ಲಿ ಈಗಾಗಲೇ ಜನರಿಗೆ ಸೇವೆ ನೀಡುತ್ತಿವೆ. ಅದರಲ್ಲಿ ಒಂದು ಸಿಕಂದರಾಬಾದ್-ವಿಶಾಖಪಟ್ಟಣ ಹಾಗೂ ಮತ್ತೊಂದು ಸಿಕಂದರಾಬಾದ್ ಹಾಗೂ ತಿರುಪತಿ ಮಧ್ಯೆ ಓಡಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು-ಉತ್ತರ ಕರ್ನಾಟಕಕ್ಕೆ ಸೆಮಿ ಸ್ಪೀಡ್ ರೈಲು
ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಉತ್ತರಕರ್ನಾಟಕದ ಮಧ್ಯೆ ವಂದೇ ಭಾರತ್ ಸೆಮಿಸ್ಪೀಡ್ ರೈಲಿನಲ್ಲಿ ಓಡಾಡಬೇಕು ಎಂಬ ಜನರ ಕನಸು ಶೀಘ್ರದಲ್ಲಿಯೇ ನನಸಾಗಲಿದೆ. ಈ ಕುರಿತು ರೈಲ್ವೆ ಇಲಾಖೆ ಅಂತಿಮ ಹಂತದ ತಯಾರಿ ನಡೆಸುತ್ತಿದೆ.
ಹೌದು, ಬಹುನಿರೀಕ್ಷಿತ ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಸಂಚಾರವನ್ನು ಮೇ 30ರಂದು ಆರಂಭಿಸಲಾಗುವುದು ಎಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಎರಡನೇ ವಂದೇ ಭಾರತ್ ರೈಲು ಓಡಾಟ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.












Click it and Unblock the Notifications