Bengaluru 2nd International Airport: ಮಧ್ಯ ಕರ್ನಾಟಕದ ರಾಜಧಾನಿಯಲ್ಲಿ ನಿರ್ಮಿಸಿ, ಹೊಸ ಸ್ಥಳ ಸೇರ್ಪಡೆ!

ಬೆಂಗಳೂರು, ಮಾರ್ಚ್ 23: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇವನಹಳ್ಳಿ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಮೂರು ಸ್ಥಳ ಗುರುತಿಸಲಾಗಿದೆ. ಇದೀಗ ಮಧ್ಯ ಕರ್ನಾಟಕದ ರಾಜಧಾನಿಯಲ್ಲಿ ನಿರ್ಮಿಸಿದರೆ ಬರದ ನಾಡು ಸರ್ವತೋಮುಖ ಅಭಿವೃದ್ಧಿ ಆಗಲಿದೆ ಎಂಬ ಒತ್ತಾಯ ಕೇಳಿ ಬಂದಿದೆ.

ಬೆಂಗಳೂರು ಎರಡನೇ ವಿಮಾನ ನಿಲ್ದಾಣವನ್ನು ಕನಕಪುರ ರಸ್ತೆಯ ಎರಡು ಸ್ಥಳ ಮತ್ತು ಕುಣಿಗಲ್ ಸಮೀಪ ಒಂದು ಸೇರಿ ಒಟ್ಟು ಮೂರು ಸ್ಥಳ ಗುರುತಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇದೀಗ ಜನಪ್ರತಿನಿಧಿಯೊಬ್ಬರು ಬರದ ನಾಡಿನಲ್ಲಿ ನಿರ್ಮಿಸಿದರೆ, ಈ ಜಿಲ್ಲೆ ಅಭಿವೃದ್ಧಿ ಆಗುತ್ತದೆ. ಅಲ್ಲದೇ ಈ ಭಾಗದಲ್ಲಿ 10000 ಸಾವಿರ ಎಕರೆ ಪ್ರದೇಸದಲ್ಲಿ ISRO, DRDO ಮತ್ತು ಬಾರ್ಕ್ ಹೀಗೆ ನಾಲ್ಕಾರು ವೈಜ್ಞಾನಿಕ ಸಂಸ್ಥೆಗಳು ನೆಲೆಗೊಳ್ಳುವ ಮೂಲಕ ಅತೀ ಹೆಚ್ಚು ಜನರು ಇಲ್ಲಿಗೆ ಬಂದು ಹೋತ್ತಿದ್ದಾರೆ.

Bengaluru Second International Airport Should Build In Chitradurga T Raghumurthy

ಏರ್‌ಪೋರ್ಟ್‌ ನಿರ್ಮಾಣದಿಂದ ಏನೆಲ್ಲ ಅನುಕೂಲಗಳು

ಇಷ್ಟು ದೊಡ್ಡ ಪ್ರದೇಶದಲ್ಲಿ ಇವೆಲ್ಲ ವೈಜ್ಞಾನಿಕ ಸಂಸ್ಥೆಗಳು ಇರುವ ಜಾಗ ಮತ್ತು ಮಧ್ಯ ಕರ್ನಾಟಕದ ರಾಜಧಾನಿಯಂತಿರುವ ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ನಿರ್ಮಿಸಬೇಕು. ಇದರಿಂದ ಉತ್ತರ ಕರ್ನಾಟಕಕ್ಕೂ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಒತ್ತಾಯಿಸಿದ್ದಾರೆ. ಈ ಮೂಲಕ ಹೊಸ ಸ್ಥಳವೊಂದು ಏರ್‌ಪೋರ್ಟ್ ನಿರ್ಮಾಣ ಸ್ಥಳದ ಬೇಡಿಕೆ ಪಟ್ಟಿಗೆ ಸೇರ್ಪಡೆಯಾದಂತಾಗಿದೆ.

Take a Poll

ಬೆಂಗಳೂರಿನ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ಮೂರು ಸ್ಥಳ ಗುರುತಿಸಲಾಗಿದೆ. ನಂತರ ತುಮಕೂರು ಜಿಲ್ಲೆಯ ಶಿರಾ ವ್ಯಾಪ್ತಿಯಲ್ಲಿ ನಿರ್ಮಿಸಬೇಕೆಂದು ಆಗ್ರಹ ಕೇಳಿ ಬಂತು. ಆದರೆ ಅದನ್ನು ಕೈ ಬಿಡಲಾಗಿದೆ. ಇದೀಗ ಚಿತ್ರದುರ್ಗದ ಚಳ್ಳಕೆರೆ ವ್ಯಾಪ್ತಿಯಲ್ಲಿ ನಿರ್ಮಿಸುವಂತೆ ಶಾಸಕರು ಸರ್ಕಾರಕ್ಕೆ ಸದನದಲ್ಲಿ ಮನವಿ ಮಾಡಿದ್ದಾರೆ.

ಇಸ್ರೋ, ಡಿಎಆರ್‌ಡಿಓ ನಂತಹ ಸಂಸ್ಥೆಗಳು ಚಳ್ಳಕೆರೆಗೆ ಬಂದ ಹಿನ್ನೆಲೆಯಲ್ಲಿ ವಿಶ್ವದಲ್ಲಿ ಈ ಭಾಗವನ್ನು ಗುರುತಿಸುವಂತಾಗಿದೆ. ಅನೇಕರು ಮಂದಿ ಇಲ್ಲಿಗೆ ಬಂದು ಹೋಗುತ್ತಾರೆ. ಇಲ್ಲಿ ನಿರ್ಮಾಣ ಮಾಡಿದರೆ ಬಯಲು ಸೀಮೆ ಅಭಿವೃದ್ಧಿ ಆಗುತ್ತದೆ. ಚಿತ್ರದುರ್ಗಕ್ಕೆ ಹೊಸ ಅಭಿವೃದ್ಧಿ ಸ್ಪರ್ಶ ನೀಡಲು ಸಾಧ್ಯವಾಗುತ್ತದೆ. ಎಲ್ಲ ವಿಧದಲ್ಲೂ ಜಿಲ್ಲೆಯು ಅಭಿವೃದ್ಧಿಗೆ ಪೂರಕವಾಗುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಅವರು ತಿಳಿಸಿದರು. ಸದನದಲ್ಲಿ ಶಾಸಕರ ಈ ಪ್ರಸ್ತಾಪ

Bengaluru Second International Airport Should Build In Chitradurga T Raghumurthy

ಮೂರು ಸ್ಥಳ ಪರಿಶೀಲನೆಗೆ ಮಹೂರ್ತ ಫಿಕ್ಸ್

ಸದ್ಯ ಬೆಂಗಳೂರಿನಲ್ಲೇ ಏರ್‌ಪೋರ್ಟ್ ನಿರ್ಮಿಸುವ ಚಿಂತನೆಯಲ್ಲಿ ರಾಜ್ಯ ಸರ್ಕಾರದ ಇದೆ. ಗುರುತಿಸಲಾದ ಮೂರು ಸ್ಥಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಏಪ್ರಿಲ್ 7ರಿಂದ 9ರ ಒಳಗೆ ಕೇಂದ್ರ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳ ತಂಡ ಬೆಂಗಳೂರಿಗೆ ಬರಲಿದೆ. ಬಂದು ರಾಜ್ಯ ಸರ್ಕಾರ ಅಂತಿಮಗೊಳಿಸಿರುವ ಮೂರು ಸ್ಥಳಗಳನ್ನು ಅಧ್ಯಯನ ನಡೆಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದರು.

ಈ ಮೂರು ಸ್ಥಳಗಳ ಜೊತೆಗೆ ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿನ ವಿಮಾನ ನಿಲ್ದಾಣವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾನವನ್ನಾಗಿ ಮಾಡಬೇಕು. ಅದಕ್ಕಾಗಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡುವಂತೆಯು ನಾಗರಿಕರು, ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.

ಸದ್ಯ ಮೂರು ಜಾಗದಲ್ಲಿ ನಿರ್ಮಾಣಕ್ಕೆ ಜಾಗ ಅಂತಿಮಗೊಂಡಿದೆ. ಈ ಮೂಲಕ ತುಮಕೂರು ಭಾಗದಲ್ಲಿ ನಿರ್ಮಾಣ ಅಸಾಧ್ಯ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ತುಮಕೂರು, ಶಿರಾ ಭಾಗದಲ್ಲಿ ನಿರ್ಮಿಸುವಂತೆ ಹೆಚ್ಚಿನ ಬೇಡಿಕೆ ಕೇಳಿ ಬಂದಿತ್ತು. ಈ ಕುರಿತು ಖುದ್ದು ಗೃಹ ಸಚಿವರೇ ಆಗ್ರಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+