Live

Bengaluru Rains Live: ಕುಡಿಯುವ ನೀರಿಗಾಗಿ ನೋಡೆಲ್ ಅಧಿಕಾರಿಗೆ ಕರೆ ಮಾಡಿರಿ

ಬೆಂಗಳೂರು ಸೆಪ್ಟೆಂಬರ್ 6: ಬೆಂಗಳೂರು ನಗರದಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗಿನ ಜಾವದವರೆಗೂ ಧಾರಾಕಾರವಾಗಿ ಮಳೆಯಾಗಿದ್ದು, ಅನೇಕ ಸ್ಥಳಗಳು ಜಲಾವೃತಗೊಂಡಿದೆ. ಬೆಂಗಳೂರಿನ ಕೋರಮಂಗಲ ಸೇರಿದಂತೆ ಹಲವು ಭಾಗಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಬಹುತೇಕ ಮುಖ್ಯ ರಸ್ತೆಗಳಿಗೆ ಮಳೆ ನೀರು ನುಗ್ಗಿ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಸೆಪ್ಟೆಂಬರ್ 9ರವರೆಗೂ ಅಧಿಕ ಮಳೆಯ ಮುನ್ಸೂಚನೆ ನೀಡಲಾಗಿದೆ.

ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರ ಮಳೆಗೆ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದೆ, ರಸ್ತೆಗಳು ಜಲಾವೃತಗೊಂಡಿವೆ. ವಾಹನಗಳು ನಿಂತ ಸ್ಥಳದಲ್ಲೇ ಮುಳುಗಿ ಹೋಗಿವೆ. ಹಲವೆಡೆ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ನಗರದಲ್ಲಿ ಮಳೆ ಸೃಷ್ಟಿ ಮಾಡಿದ ಅವಾಂತರಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ರಾಮನಗರ, ಕೊಡಗು, ಚಾಮರಾಜನಗರ, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Karnataka, Bengaluru Rains Live Updates, Floods, Waterlogging, Traffic Jams and Weather News

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ. ಗಡಿ ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ ಮಳೆ ಸುರಿಯುತ್ತಿದ್ದು, ಸೋಮವಾರವೂ ಮುಂದುವರಿದಿದೆ.

Sep 06, 2022, 10:14 pm IST

ಬೆಂಗಳೂರಿನಲ್ಲಿ ಕುಡಿಯುವ ನೀರಿನ ತೊಂದರೆಯನ್ನು ಸಮರ್ಥವಾಗಿ ನಿರ್ವಹಿಸುವುದಕ್ಕಾಗಿ ಜಲಮಂಡಳಿಯು ನೋಡೆಲ್ ಅಧಿಕಾರಿಗಳನ್ನು ನೇಮಿಸಿದೆ. ವಲಯವಾರು ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ನೀರಿನ ಅವಶ್ಯಕತೆ ಉಂಟಾದ ತಕ್ಷಣ ಆಯಾ ವಲಯಗಳ ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ. ತಮ್ಮ ವ್ಯಾಪ್ತಿಯ ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಟ್ಯಾಂಕರ್ ಗಳಲ್ಲಿ ನೀರನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
Sep 06, 2022, 9:28 pm IST

ಸಿಲಿಕಾನ್ ಸಿಟಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಪ್ರದೇಶಗಳಿಗೆ ಸರ್ಕಾರಿ ಹಾಗೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ 200ಕ್ಕೂ ಹೆಚ್ಚು ಟ್ಯಾಂಕರ್ ಮೂಲಕ ನೀರಿನ ವ್ಯತ್ಯಯ ಉಂಟಾದ ಪ್ರದೇಶಗಳಿಗೆ 200 ಲೋಡ್ ನೀರಿನ ಪೂರೈಕೆ ಮಾಡಲಾಗಿದೆ. ಬಡವರು, ಕೊಳಗೇರಿ ನಿವಾಸಿಗಳು, ಮಧ್ಯಮ ವರ್ಗದವರು, ಕಾರ್ಮಿಕ ವರ್ಗದವರು ಮತ್ತು ಕೂಲಿ ಕಾರ್ಮಿಕರಿಗೆ ಉಚಿತವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
Sep 06, 2022, 7:15 pm IST

ಬೆಂಗಳೂರಿನಲ್ಲಿ ರಾತ್ರಿ ಆಗುತ್ತಿದ್ದಂತೆ ಮಳೆರಾಯ ಅಬ್ಬರಿಸುವುದಕ್ಕೆ ಶುರು ಮಾಡಿದ್ದಾನೆ. ಲಾಲ್ ಬಾಗ್, ಸೌತ್ ಎಂಡ್ ಸರ್ಕಲ್, ಜಯ ನಗರ, ಕಾರ್ಪೋರೇಷನ್ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಜೋರಾಗಿದೆ.
Sep 06, 2022, 6:11 pm IST

ರಾಜ್ಯದಲ್ಲಿ ಮತ್ತೆ 20 ಸೆಂ.ಮೀ.ಗೂ ಹೆಚ್ಚು ಮಳೆ ಬೀಳಲಿದ್ದು, 'ರೆಡ್ ಅಲರ್ಟ್' ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.
Sep 06, 2022, 4:47 pm IST

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್, ಬೆಂಗಳೂರು ನಗರದ ಜಲಾವೃತ ರಸ್ತೆಯ ಮೇಲೆ ಗಾಳಿ ತುಂಬಿದ ರಬ್ಬರ್ ಟ್ಯೂಬ್ ಬಳಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
Sep 06, 2022, 3:08 pm IST

ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಯಮಲೂರು ನೀರಿನಲ್ಲಿ ಮುಳುಗಿದೆ. ಸೋಮವಾರ ಈ ಪ್ರದೇಶದಲ್ಲಿ ವಾಸಿಸುವ ಐಟಿ ಕಂಪನಿಗಳ ಅನೇಕ ಉದ್ಯೋಗಿಗಳು ತಮ್ಮ ಕಚೇರಿಗೆ ಹೋಗಲು ಟ್ರ್ಯಾಕ್ಟರ್‌ಗಳಲ್ಲಿ ತೆರಳಿದ್ದಾರೆ.
Sep 06, 2022, 3:07 pm IST

ಬೆಳ್ಳೂರು ಪ್ರವಾಹವನ್ನು ವಿನಾಶಕಾರಿ ಎಂದು ಕರೆದ ಕಿರಣ್ ಮಜುಂದಾರ್-ಶಾ

ಬಯೋಟೆಕ್ನಾಲಜಿ ಉದ್ಯಮದ ಅನುಭವಿ ಕಿರಣ್ ಮಜುಂದಾರ್-ಶಾ ಅವರು ಬೆಂಗಳೂರಿನಲ್ಲಿ ಮಳೆಯ ಹಾನಿಯನ್ನು "ವಿನಾಶಕಾರಿ" ಎಂದು ಕರೆದಿದ್ದಾರೆ. ಸರ್ಕಾರ ಮತ್ತು ಡೆವಲಪರ್‌ಗಳು ಎರಡೂ ಜಲಾವೃತವನ್ನು ಪರಿಹರಿಸಲು ಸಾಮೂಹಿಕ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಬೆಂಗಳೂರು ಪ್ರಧಾನ ಕಚೇರಿಯ ಬಯೋಫಾರ್ಮಾಸ್ಯುಟಿಕಲ್ಸ್ ಕಂಪನಿ, ಬಯೋಕಾನ್‌ನ ಕಾರ್ಯನಿರ್ವಾಹಕ ಅಧ್ಯಕ್ಷರು ಹೇಳಿದರು.
Sep 06, 2022, 3:04 pm IST

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅರಹಟ್ಟಿ-ತಡಹಾಳ್ ರಸ್ತೆ ಮಳೆ ನೀರಿನಿಂದ ಕುಸಿದು ಬಿದ್ದಿದೆ.
Sep 06, 2022, 3:04 pm IST

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ ಅರ್ಕಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ವ್ಯಾಪ್ತಿಯ ಉದ್ದಕ್ಕೂ ಇರುವ ಅಂಡರ್‌ಪಾಸ್‌ಗಳು ಜಲಾವೃತವಾಗಿವೆ.
Sep 06, 2022, 2:58 pm IST

ಭಾರೀ ಮಳೆಯಿಂದಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಲಾವೃತಗೊಂಡಿದೆ.
Sep 06, 2022, 1:02 pm IST

ರಾಜ್ಯದಲ್ಲಿ ಮುಂದಿನ ಐದು ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.
Sep 06, 2022, 1:00 pm IST

ಈಗಾಗಲೇ ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷರು, ಎಂಜಿನಿಯರ್‌ಗಳು, ನಗರಾಭಿವೃದ್ಧಿ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳು ಅಲ್ಲಿದ್ದಾರೆ, ನೀರನ್ನು ಹೊರಹಾಕುವ ಕೆಲಸ ನಡೆಯುತ್ತಿದೆ ... ಬಹುಶಃ ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ. ಎಲ್ಲಾ ತಾಂತ್ರಿಕ ಮತ್ತು ತುರ್ತು ಕೆಲಸಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.
Sep 06, 2022, 12:58 pm IST

ಕಳೆದ 42 ವರ್ಷಗಳಲ್ಲೇ ಅತಿ ಹೆಚ್ಚು ಮಳೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಕಾರ, ರಾಜ್ಯ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಸೆಪ್ಟೆಂಬರ್ 1 ಮತ್ತು 5 ರ ನಡುವೆ ವಾಡಿಕೆಗಿಂತ ಶೇ 150 ರಷ್ಟು ಹೆಚ್ಚು ಮಳೆಯಾಗಿದೆ. ಮಹದೇವಪುರ, ಬೊಮ್ಮನಹಳ್ಳಿ ಮತ್ತು ಕೆ.ಆರ್.ಪುರಂನಲ್ಲಿ 307 ರಷ್ಟು ಅಧಿಕ ಮಳೆ ದಾಖಲಾಗಿದೆ. "ಇದು ಕಳೆದ 42 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ" ಎಂದು ಹೇಳಿದ್ದಾರೆ.
Sep 06, 2022, 12:55 pm IST

ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ಟ್ರಾಫಿಕ್ ಅಸ್ತವ್ಯಸ್ತವಾಗಿದೆ.
Sep 06, 2022, 12:40 pm IST

ಚಿಕ್ಕಮಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ಸ್ಮಶಾನ ಜಾಗ ಜಲಾವೃತಗೊಂಡಿದ್ದು ಶವ ಸಂಸ್ಕಾರಕ್ಕೂ ಅಡ್ಡಿಯಾಗಿದೆ. ಕಡೂರು ತಾಲೂಕಿನ ಎಸ್. ಬೊಮ್ಮನಹಳ್ಳಿಯಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಪ್ರಮೋದ್ ಶವ ಸ್ಮಶಾನಕ್ಕೆ ಸ್ಥಳವಿಲ್ಲದೆ ಕುಟುಂಬಸ್ಥರು ಪರದಾಡುವಂತಾಗಿದೆ. ಅಂತ್ಯಕ್ರಿಯೆ ಬದಲಿ ವ್ಯವಸ್ಥೆ ಇಲ್ಲದೆ ಕಳೆದ ಎರೆಡು ದಿನಗಳಿಂದ ಶವ ಮನೆಯಲ್ಲೇ ಇಟ್ಟುಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
Sep 06, 2022, 12:37 pm IST

ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಬಾರಿ ಮಳೆ ರಾಮನಗರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಬೆಂಗಳೂರು ಮಳೆಯ ನೀರು ತಿಪ್ಪಗೊಂಡನಹಳ್ಳಿ ಜಲಾಶಯ ಸೇರಿ ಅಲ್ಲಿಂದ ಮಂಚನಬೆಲೆ ಜಲಾಶಯ ಸೇರಿ ನಂತರ ಅರ್ಕಾವತಿ ನದಿಯಲ್ಲಿ ಹರಿಯುತ್ತಿದೆ. ಬಾರಿ ಮಳೆಯಿಂದ ಬೆಂಗಳೂರು ಬಳಿ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ತುಂಬಿದ್ದು, ತಿಪ್ಪಗೊಂಡನಹಳ್ಳಿಯ ಜಲಾಶಯದ ನೀರು ಹರಿದು ‌ಮಂಚನಬೆಲೆ ಜಲಾಶಯ ಭರ್ತಿಯಾಗಿದೆ. ಜಲಾಶಯಕ್ಕೆ ಒಳ ಹರಿವು ಹೆಚ್ಚಾದ ಹಿನ್ನಲೆಯಲ್ಲಿ ಮಂಚನಬೆಲೆ ಜಲಾಶಯದಿಂದ ನೀರನ್ನು ಅರ್ಕಾವತಿ ನದಿಗೆ ಬಿಡುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿ ನೆರೆ ಬೀತಿ ಹೆಚ್ಚಿದೆ.
Sep 06, 2022, 12:37 pm IST

ಚಾಮರಾಜನಗರ:ಸುವರ್ಣಾವತಿ ನದಿ ಉಕ್ಕೇರಿದ ಪರಿಣಾಮ ಯಳಂದೂರು ಪಟ್ಟಣ ಮತ್ತು ತಾಲೂಕಿನ ಹಲವು ಭಾಗ ತತ್ತರಿಸಿ ಹೋಗಿದ್ದು ಹಲವು ಕಟ್ಟಡಗಳು ಜಲಾವೃತವಾಗಿದೆ. ನಸುಕಿನಲ್ಲಿ ಮನೆಯಿಂದ ಹೊರ ಬಂದ ಜನರು ನೀರು ಹೆದ್ದಾರಿಯಲ್ಲಿ ತುಂಬಿ ಹರಿಯುತ್ತಿರುವುದನ್ನು ಕಂಡು ಅವಕ್ಕಾದರು. ರಾಜ ಕಾಲುವೆ, ಕಚೇರಿಗಳು, ಜಲಾವೃತವಾಗಿದ್ದು ಬಸ್ ಗಳು ವಾಹನಗಳು ತುಂಬಿ ಹರಿಯುತ್ತಿದ್ದ ನೀರಿನ ನಡುವೆ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು. ಆದರೆ, ಅಗರದಿಂದ ಉತ್ತಂಬಳ್ಳಿ ಹೋಗುವ ಸಂಪರ್ಕ ಕಡಿತಗೊಂಡಿದೆ.
Sep 06, 2022, 12:36 pm IST

ಬೆಂಗಳೂರು ಮಹಾ ಮಳೆಗೆ ನೆಲಮಾಳಿಗೆಯಲ್ಲಿ ನೀರು ತುಂಬಿ ವಾಹನಗಳು ಸಂಪೂರ್ಣವಾಗಿ ಮಳೆ ನೀರಿನಲ್ಲಿ ಮುಳುಗಿರುವುದು ದೃಶ್ಯಗಳು ವೈರಲ್ ಆಗಿವೆ. ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಳೆ ನೀರು ರಬಸದಿಂದ ನೆಲಮಾಳಿಗೆಗೆ ಹರಿಯುತ್ತಿದೆ. ವಿಡಿಯೋವನ್ನು ಟ್ವೀಟ್ ಮಾಡಿದ ಸಾರೀಸ್ ಎಂಬುವವರು 'ಸರ್ಜಾಪುರ ರಸ್ತೆ, ಮಹದೇವಪುರ, ವೈಟ್‌ಫೀಲ್ಡ್, ಔಟರ್‌ರಿಂಗ್‌ರೋಡ್ ಪ್ರದೇಶಗಳಲ್ಲಿರುವವರು ನೆಲಮಾಳಿಗೆಯಿಂದ ನಿಮ್ಮ ವಾಹನಗಳನ್ನು ರಕ್ಷಿಸಿಕೊಳ್ಳಿ. ನೀವು ಸುರಕ್ಷಿತ ಪಾರ್ಕಿಂಗ್ ಹೊಂದಿಲ್ಲದಿದ್ದರೆ, ನಮಗೆ ತಿಳಿಸಿ ಮತ್ತು ನಾವು ನಿಮ್ಮ ಕಾರನ್ನು ಸುರಕ್ಷಿತವಾಗಿರಿಸಿಕೊಳ್ಳುತ್ತೇವೆ. ಬೆಂಗಳೂರು ಪ್ರವಾಹದ ವಿರುದ್ಧ ಒಟ್ಟಾಗಿ ಹೋರಾಡೋಣ' ಎಂದು ಬರೆದಿದ್ದಾರೆ.
Sep 06, 2022, 10:56 am IST

ಕರ್ನಾಟಕ:ಭಾರೀ ಮಳೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಭಾಗಗಳು ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಇಂದಿನಿಂದ ದೃಶ್ಯಗಳು.
Sep 06, 2022, 10:46 am IST

ಬೆಂಗಳೂರಿನ ವೈಟ್‌ಫೀಲ್ಡ್ ಪಿಎಸ್ ವ್ಯಾಪ್ತಿಯ ಜಲಾವೃತ ರಸ್ತೆಯ ಮೇಲೆ ಸ್ಕೂಟಿ ಬಿದ್ದಿದ್ದರಿಂದ 23 ವರ್ಷದ ಯುವತಿಯೊಬ್ಬಳು ವಿದ್ಯುತ್ ಕಂಬದಿಂದ ವಿದ್ಯುತ್ ಹರಿದು ಸಾವನ್ನಪ್ಪಿದ್ದಾಳೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
Sep 06, 2022, 10:44 am IST

ಮಳೆ-ಸಂಬಂಧಿತ ಹಾನಿಗೆ 300 ಕೋಟಿ ಪರಿಹಾರ ಘೋಷಿಸಿದ ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಆಗಿರುವ ನಷ್ಟದ ಹಿನ್ನೆಲೆಯಲ್ಲಿ, ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ಮತ್ತು ನಗರದ ಮೂಲ ಸೌಕರ್ಯಗಳ ನಿರ್ವಹಣೆಗಾಗಿ 300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ. ಸೋಮವಾರದಂದು ಅವರು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), 15 ಜಿಲ್ಲೆಗಳ ಉಪ ಆಯುಕ್ತರು ಮತ್ತು ರಾಜ್ಯದ ಮಳೆ ಮತ್ತು ಪ್ರವಾಹಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ಬೆಂಗಳೂರು ಮತ್ತು ಇತರ ಜಿಲ್ಲೆಗಳ ಪ್ರವಾಹ ನಿರ್ವಹಣೆಗೆ 600 ಕೋಟಿ ರೂಪಾಯಿ ಬಿಡುಗಡೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಬೆಂಗಳೂರಿಗೆ ಮಾತ್ರ 300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
Sep 06, 2022, 10:43 am IST

ವೈಟ್‌ಫೀಲ್ಡ್ ನಿವಾಸಿಗಳಿಗೆ ಸಂಚಾರ ಸಲಹೆ: ದಯವಿಟ್ಟು ಚನಸಂದರ ರಸ್ತೆ, ಹೆಚ್ಚು ಜಲಾವೃತ ಪ್ರದೇಶವನ್ನು ತಪ್ಪಿಸಿ.
Sep 06, 2022, 10:42 am IST

ಎಚ್‌ಎಎಲ್ ಬಳಿಯ ಯಮಲೂರಿನಲ್ಲಿ ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ನಿವಾಸಿಗಳನ್ನು ಎಸ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಇತರರು ಟ್ರ್ಯಾಕ್ಟರ್‌ಗಳಲ್ಲಿ ರಕ್ಷಿಸಿದರು.
Sep 06, 2022, 10:41 am IST

ಮಾರತ್ತಹಳ್ಳಿಯ ದೀಪಾ ನರ್ಸಿಂಗ್ ಹೋಮ್ ಬಳಿಯ ನಿವಾಸಿಗಳು ಮನೆಯಿಂದ ಹೊರಬರಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ. ಆ ಪ್ರದೇಶದಲ್ಲಿ ವಿದ್ಯುತ್ ಇಲ್ಲ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.
Sep 06, 2022, 10:40 am IST

ಕೆಂಪಾಪುರದ ಸ್ಥಳೀಯ ನಿವಾಸಿಗಳು ಪ್ರವಾಹದಿಂದಾಗಿ ಟ್ರ್ಯಾಕ್ಟರ್‌ಗಳ ಸಹಾಯದಿಂದ ಕಾಲೇಜು ಹಾಗೂ ಕೆಲಸಗಳಿಗೆ ತೆರಳುವ ದೃಶ್ಯ ವೈರಲ್ ಆಗಿದೆ.
Sep 06, 2022, 10:39 am IST

ನೀರಿನ ಕಾರಣ ಆಂಬ್ಯುಲೆನ್ಸ್‌ಗಳು ಪ್ರವೇಶಿಸಲು ಸಾಧ್ಯವಾಗದ ಕಾರಣ ಅನೇಕ ರೋಗಿಗಳನ್ನು, ವಿಶೇಷವಾಗಿ ಹಿರಿಯ ನಾಗರಿಕರನ್ನು ದೋಣಿಗಳಲ್ಲಿ ಸಾಗಿಸಲಾಯಿತು.
Sep 06, 2022, 10:33 am IST

ಶ್ರೀ ಕಾಸಾ ಗ್ರಾಂಡೆ (ಕಾಡುಬೀಸನಹಳ್ಳಿ)ಯಿಂದ ಪ್ರೆಸ್ಟೀಜ್ ಟೆಕ್ ಪಾರ್ಕ್ ಹಿಂಭಾಗದ ಗೇಟ್ ಸಂಪೂರ್ಣ ಜಲಾವೃತಗೊಂಡಿದೆ. ವಿದ್ಯುತ್, ಕುಡಿಯುವ ನೀರು ಮತ್ತು ದಿನಸಿ ಸರಬರಾಜು ಇಲ್ಲ. ಬೆಳಿಗ್ಗೆಯಿಂದ ನೀರಿನ ಮಟ್ಟ ಹೆಚ್ಚಿದೆ ಎಂದು ವೈಭವ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
Sep 06, 2022, 10:31 am IST

ಧಾರಾಕಾರ ಮಳೆಯಿಂದಾಗಿ ಬೆಣ್ಣೆ ಹಳ್ಳ, ತುಪ್ಪರಿ ಹಳ್ಳದಲ್ಲಿ ನೀರು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ರಜೆ ಘೋಷಿಸಿದ್ದಾರೆ.
Sep 06, 2022, 10:30 am IST

ಪ್ರವಾಹ ಪೀಡಿತ ಪ್ರದೇಶಗಳಿಂದ ಹಿರಿಯ ನಾಗರಿಕರನ್ನು NDRF ತಂಡಗಳು ಸ್ಥಳಾಂತರಿಸುತ್ತಿವೆ.
Sep 06, 2022, 10:30 am IST

BWSSB ಅಧೀನದಲ್ಲಿರುವ 8000 ಬೋರ್ ವೆಲ್ ಗಳು ಹಾಗೂ BBMP ಅಧೀನದಲ್ಲಿರುವ ಬೊರವೆಲ್ ಗಳನ್ನು ಮರುಪೂರಣ ಮಾಡಿ ಸದ್ಯ ವ್ಯತ್ಯಯವಾಗಿರುವ ಬೆಂಗಳೂರಿನ ಸ್ಟೇಜ್ 3 & ಸ್ಟೇಜ್ 4 ಕಡೆ ನೀರನ್ನು ಸರಬರಾಜು ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಬೋರವೆಲ್ ನೀರು ತಲುಪಲಾಗದ ಪ್ರದೇಶಗಳಿಗೆ ಟ್ಯಾಂಕರ್ ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತದೆ.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+