ಬೆಂಗಳೂರು ಕನಸುಗಳ ನಗರ: ಇದರ ತಾಕತ್ತು ದೊಡ್ಡದು: ನರೇಂದ್ರ ಮೋದಿ ಶ್ಲಾಘನೆ
ಬೆಂಗಳೂರು,ಜೂ. 20: ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಏರ್ಪಡಿಸಿದ್ದ ಸಬ್ ಅರ್ಬನ್ ರೈಲು ಯೋಜನೆ ಶಂಕು ಸ್ಥಾಪನೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೇ ಭಾಷಣ ಆರಂಭಿಸಿ ಕನ್ನಡಿಗರ ಪ್ರೀತಿಗೆ ಪಾತ್ರರಾದರು. ಬೆಂಗಳೂರನ್ನು ಕನಸುಗಳ ನಗರ ಎಂದು ಪ್ರಧಾನಿ ಕೊಂಡಾಡಿದರು.
ಕೊಮ್ಮಘಟ್ಟದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಕನ್ನಡದಲ್ಲಿಯೇ ಮಾತು ಅರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ನನ್ನ ಪ್ರೀತಿಯ ಕರುನಾಡಿನ ಜನತೆಗೆ ನಮಸ್ಕಾರಗಳು ಎಂದರು.
ಬೆಂಗಳೂರಿನ ಮಹಾ ಜನತೆಗೆ ವಿಶೇಷವಾದ ನಮಸ್ಕಾರಗಳು, ಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನವಾಗಿದೆ. ಮೂಲ ಭೂತ ಯೋಜನೆಗಳನ್ನು ಜಾರಿಗೊಳಿಸಲು ಸಂತೋಷವಾಗುತ್ತಿದೆ ಎಂದು ಸ್ಮರಿಸಿದರು. ಮೋದಿ ಕನ್ನಡ ಮಾತು ಕೇಳಿ ನೆರೆದಿದ್ದ ಸಾರ್ವಜನಿಕರು ಸಿಳ್ಳೆ ಹೊಡೆದು ಸಂಭ್ರಮಿಸಿದರು.
ಕರ್ನಾಟಕದ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಭರವಸೆ ನೀತಿತ್ತು. ಆ ಭರವಸೆಗಳಿಗೆ ಇಂದು ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ನಿಮ್ಮ ಸೇವೆಗೆ ಸದಾ ಸಿದ್ದರಿದ್ದೇವೆ. ಇಲ್ಲಿ ಬರುವ ಮುನ್ನ ಐಐಎಸ್ ಸಿ ಮತ್ತು ಅಂಬೇಡ್ಕ್ರ್ ಸ್ಕೂಲ್ ಆಫ್ ಎಕನಾಮಿಕ್ಸ್ ಗೆ ಭೇಟಿ ನೀಡಿದ್ದು. ಇಲ್ಲಿಂದ ಹೊಸದನ್ನು ಏನೋ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದೆನಿಸಿತು. ಕರ್ನಾಟಕಕ್ಕೆ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆ ಏಳು ರೈಲು ಯೋಜನೆಗಳಿಗೆ ಚಾಲನೆ ನೀಡಿದ್ದೇನೆ ಎಂದು ಮೋದಿ ಸ್ಪಷ್ಟಪಡಿಸಿದರು.

ಬೆಂಗಳೂರು ಕನಸುಗಳ ನಗರ:
ಬೆಂಗಳೂರು ಕನಸುಗಳ ನಗರ. ಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಯೋಜನೆ ತಂದಿದ್ದೇನೆ. ಕಳೆದ ನಲವತ್ತು ವರ್ಷಗಳಿಂದ ಕೇವಲ ಚರ್ಚೆಯಲ್ಲಿ ಕಾಲಹರಣ ಮಾಡಿದರು. ನಮ್ಮ ಸರ್ಕಾರ ಕೇವಲ 40 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ. ಹಿಂದಿನ ನಲವತ್ತು ವರ್ಷಗಳಲ್ಲಿ ಯೋಜನೆ ಮಾಡಿದ್ದರೆ ಕಥೆ ಬೇರೆಯದ್ದೇ ಆಗಿರುತ್ತಿತ್ತು. ಇದೀಗ ಬೆಂಗಳೂರು ನಗರಕ್ಕೆ ರೈಲು ಯೋಜನೆ ಮಾಡುತ್ತಿದ್ದೇವೆ. ಪ್ರತಿ ಕ್ಷಣ ನಿಮ್ಮ ಸೇವೆಗೆ ಮೀಸಲಿಟ್ಟಿದ್ದೇನೆ. ಬೆಂಗಳೂರು ಸುರಕ್ಷಿತ ಹಾಗೂ ನಾಗರಿಕ ಸ್ನೇಹಿ ನಗರವಾಗಿದೆ ಎಂದು ತಿಳಿಸಿದರು.

21 ನೇ ಶತಮಾನದಲ್ಲಿ
ದೇಶದಲ್ಲಿ 21 ನೇ ಶತಮಾನದಲ್ಲಿ ಬೆಂಗಳೂರು ನಗರ ಆತ್ಮ ನಿರ್ಭರ ಶಕ್ತಿಗೆ ಪ್ರೇರಣೆ ನೀಡಿದೆ. ಭಾರತೀಯ ಯುವ ಜನರು ಮನಸು ಮಾಡಿದರೆ ಎಲ್ಲವನ್ನು ಸಾಧಿಸುತ್ತಾರೆ. ಬೆಂಗಳೂರು ತಾಕತ್ತು ಬಹಳ ದೊಡ್ಡದು. ಜನರ ಮನಸ್ಥಿತಿನ್ನು ಬದಲಾವಣೆಗೆ ಹೊಂದಿಸುವಂತೆ ಮಾಡುತ್ತದೆ. ಸ್ಟಾರ್ಟ್ ಆಪ್ ಯೋಜನೆಗಳಲ್ಲಿ ಬೆಂಗಳೂರಿನ ಶಕ್ತಿ ಅತಿ ದೊಡ್ಡದು. ಕಳೆದ ಎಂಟು ವರ್ಷಗಳಿಂದ ವಿದೇಶಿ ಕಂಪನಿಗಳೂ ಹೂಡಿಕೆಗೆ ಬರುತ್ತಿವೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.

ಯುವಕರ ಸಾಮರ್ಥ್ಯ ಸದುಪಯೋಗಕ್ಕೆ ಸಿದ್ಧತೆ
ಹಿಂದಿನ ಆಡಳಿತದಲ್ಲಿ ಯುವಜನತೆ ಶಕ್ತಿ ಸಾಮರ್ಥ್ಯ ಬಳಕೆಯಲ್ಲಿ ವಿಫಲವಾಗಿದ್ದಾರೆ. ಯುವಕರ ಸಾಮರ್ಥ್ಯ ಸದುಪಯೋಗಕ್ಕೆ ನಮ್ಮ ಸರ್ಕಾರ ಸಿದ್ಧವಿದೆ. ಖಾಸಗಿ ಉದ್ಯಮಗಳ ಮೂಲಕ ಯುವಕರಿಗೆ ಉದ್ಯೋಗ ನಿಡ್ತೇವೆ. ಇ ಮಾರ್ಕೆಟ್ ರೂಪದಲ್ಲಿ ಮಧ್ಯಮ ಕೈಗಾರಿಕೆಗಳಿಗೆ ಒತ್ತು ನೀಡಲಾಗುತ್ತಿದೆ. ಭಾರತದ ಎಕೋ ಸಿಸ್ಟಮ್ ಸ್ಟಾರ್ಟ್ ಅಪ್ ಗಳ ಬಗ್ಗೆ ಎಲ್ಲೆಲ್ಲೂ ಚರ್ಚೆಯಾಗುತ್ತಿದೆ. ಎಂಟು ವರ್ಷದಿಂದ ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಆಗಿದೆ. ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದು ಮೋದಿ ಭರವಸೆ ನೀಡಿದರು.
Recommended Video

ಮೋದಿಯವರ ಮಾರ್ಗದರ್ಶನ
"ಪಿಎಂ ಸ್ವನಿಧಿ ಯೋಜನೆ 1.45 ಲಕ್ಷ ಬೀದಿ ವ್ಯಾಪಾರಿಗಳು ಇದರಿಂದ ಪ್ರಯೋಜನೆ ಪಡೆದಿದ್ದಾರೆ. ಇಡೀ ದೇಶದಲ್ಲಿ ಮೊದಲು 1 ಕಿ.ಮೀ ಆಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಈಗ ಪ್ರತಿದಿನ 16-17 ಕಿಮಿ ರಸ್ತೆಯಾಗುತ್ತಿವೆ. 415 ಹೊಸ ಮಾರ್ಗಗಳ 67 ವಿಮಾನನಿಲ್ದಾಣಗಳನ್ನು 8 ವರ್ಷದಲ್ಲಿ ನಿರ್ಮಾಣ, 5 ನಗರಗಳಿಗೆ ಮೆಟ್ರೋ ವಿಸ್ತರಣೆ, ಸಾಗರ್ ಮಾಲಾ ಯೋಜನೆಯಡಿ 194 ಯೋಜನೆಗಳಿಗೆ ಅನುಮೋದನೆ 596 ಹೊಸ ವೈದ್ಯಕೀಯ ಕಾಲೇಜುಗಳನ್ನು ನರೇಂದ್ರ ಮೋದಿಯವರು ನೀಡಿ ರಾಜ್ಯಕ್ಕೆ 4 ವೈದ್ಯಕೀಯ ಕಾಲೇಜುಗಳು ಬಂದಿವೆ. ಅವರ ಮಾರ್ಗದರ್ಶನದಲ್ಲಿ ಅವರ ಯೋಜನೆಗಳಿಗೆ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಕರ್ನಾಟಕ ಮುನ್ನಡೆಯುತ್ತಿದೆ," ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.












Click it and Unblock the Notifications