ಬೆಂಗಳೂರು-ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ: 2 ನಿಲ್ದಾಣಗಳಿಗೆ ಹೆಚ್ಚುವರಿ ನಿಲುಗಡೆ
ಬೆಂಗಳೂರು, ಫೆಬ್ರವರಿ 17: ರಾಜ್ಯ ರಾಜಧಾನಿಯಿಂದ ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಅವಧಿ ವಿಸ್ತರಿಸಿ ಕಾರ್ಯಾಚರಣೆ ನಡೆಸಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದೆ. ಅಲ್ಲದೇ ಈ ರೈಲನ್ನು ಪ್ರಮುಖ ಎರಡು ಊರುಗಳಲ್ಲಿ ನಿಲುಗಡೆ ಮಾಡುವ ಬೇಡಿಕೆಗೆ ಇಲಾಖೆ ಸ್ಪಂದಿಸಿದೆ. ಹಾಗಾದ್ರೆ ದಿನಾಂಕ, ನಿಲುಗಡೆ, ಗಾಡಿ ಸಂಖ್ಯೆ ವಿವರ ತಿಳಿಯಿರಿ.
ಬೆಂಗಳೂರಿನ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ (KSR) ರೈಲ್ವೆ ನಿಲ್ದಾಣದಿಂದ ಹುಬ್ಬಳ್ಳಿಯ ಶ್ರಿಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣವರೆಗೆ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಓಡಲಿದೆ.

ಮಾರ್ಚ್ 1ರಿಂದ ಜೂನ್ 30 ರವರೆಗೆ ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ವಿಶೇಷ ರೈಲು (07339) ಸಂಚಾರ ನಡೆಸಲಿದೆ. ಇನ್ನೂ ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ಎಕ್ಸಪ್ರೆಸ್ ರೈಲು (07340) ತನ್ನ ಕಾರ್ಯಾಚರಣೆಯಲ್ಲಿ ಮಾರ್ಚ್ 2ರಿಂದ ಜುಲೈ 1ರವರೆಗೆ ಸೇವೆ ನೀಡಲಿದೆ.
ರಾಣಿಬೆನ್ನೂರು-ಹಾವೇರಿಗೆ ನಿಲುಗಡೆ
ಈ ವಿಶೇಷ ರೈಲುಗಳ ಅವಧಿ ವಿಸ್ತರಣೆಯ ಭಾಗವಾಗಿ ಸೇವೆ ನೀಡಲಿವೆ. ಈ ರೈಲನ್ನು ರಾಣಿಬೆನ್ನೂರು ಮತ್ತು ಹಾವೇರಿಯ ಮಹಾದೇವಪ್ಪ ಮೈಲಾರ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಡಿಮೆ ಬೆಲೆಗೆ ದೂರದ ಪ್ರಯಾಣ ಕ್ರಮಿಸಲು ಸಹಕಾರಿಯಾಗುವ ಭಾರತೀಯ ರೈಲುಗಳಿಗೆ ಬೇಡಿಕೆ ಹೆಚ್ಚಿದೆ. ಇತ್ತೀಚೆಗೆ ಬೆಂಗಳೂರು ಹುಬ್ಬಳ್ಳಿಗೆ ಬಿಡಲಾಗಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿವರೆಗೆ ವಿಸ್ತರಣೆ ಮಾಡಲಾಗಿದೆ. ಆದರೆ ವಂದೇ ಭಾರತ್ ರೈಲು ಈ ರಾಣಿಬೆನ್ನೂರು ಮತ್ತು ಹಾವೇರಿಗೆ ನಿಲುಗಡೆ ನೀಡುತ್ತಿಲ್ಲ.

ಹೀಗಾಗಿ ವಿಶೇಷ ಸೂಪರ್ ಫಾಸ್ಟ್ ರೈಲು ನಿಲುಗಡೆ ಕೋರಲಾಗಿದೆ. ವಿಸ್ತರಣೆ ಪಡೆದ ಈ ರೈಲುಗಳು ಹೆಚ್ಚುವರಿಯಾಗಿ ರಾಣಿಬೆನ್ನೂರು ಹಾಗೂ ಹಾವೇರಿಗೆ ನಿಲುಗಡೆ ನೀಡಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಈ ಬೆಂಗಳೂರು ಹುಬ್ಬಳ್ಳಿ ಮಾರ್ಗದಲ್ಲಿ ಈಗಾಗಲೇ ಕೆಲವು ರೈಲುಗಳ ಓಡಾಟವಿದೆ. ಈ ಸೂಪರ್ ಫಾಸ್ಟ್ ರೈಲು ಬಿಡಲಾಗಿದ್ದು, ಇದೀಗ ಅವುಗಳ ಅವಧಿ ವಿಸ್ತರಿಸಿದೆ. ಜತೆಗೆ ಹೆಚ್ಚುವರಿ ನಿಲುಗಡೆಗೆ ರೈಲ್ವೆ ಇಲಾಖೆ ಮನಸ್ಸು ಮಾಡಿದೆ.












Click it and Unblock the Notifications