Encroachment: 12.79 ಕೋಟಿ ರೂಪಾಯಿ ಬೆಲೆಬಾಳುವ ಜಮೀನು ವಶಕ್ಕೆ!
ಬೆಂಗಳೂರು: ರಾಜಧಾನಿ ಬೆಂಗಳೂರು ಬೆಳೆದಂತೆ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಆದ್ರೆ ಈ ಕಾರಣಕ್ಕೆ ಒತ್ತುವರಿ ಮಾಡಿಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಿರುವ ಮೋಸಗಾರರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗೆ ಒತ್ತುವರಿ ಮಾಡಿಕೊಂಡವರ ವಿರುದ್ಧ ಜಿಲ್ಲಾಡಳಿತ ಈಗ ಸಮರ ಸಾರಿದ್ದು, ಒಂದೇ ದಿನ ಬರೋಬ್ಬರಿ 12.79 ಕೋಟಿ ರೂಪಾಯಿ ಬೆಲೆಬಾಳುವ ಜಮೀನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಹೀಗೆ ಒಟ್ಟಾರೆ 12.79 ಕೋಟಿ ರೂಪಾಯಿ ಮೌಲ್ಯದ ಒಟ್ಟು 8 ಎಕರೆ ವಿಸ್ತೀರ್ಣದ ಜಾಗ ಮತ್ತೆ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಜಮೀನು ಕುಂಟೆ, ಗೋಮಾಳ, ಸ್ಮಶಾನ, ಸರ್ಕಾರಿ ಕಾಲುವೆ, ರಾಜುಕಾಲುವೆ, ಗೋಂಡು ತೋಪು & ಇತರೆ ಸರ್ಕಾರಿ ಜಾಗವನ್ನು ಹೊಂದಿದೆ. ಆಗಸ್ಟ್ 25 ಹಾಗೂ ಸೆಪ್ಟೆಂಬರ್ 2 ರಂದು ನಡೆದ ವಿಶೇಷ ಕಾರ್ಯಾಚರಣೆ ವೇಳೆ ಈ ಒತ್ತುವರಿ ತೆರವುಗೊಳಿಸಿದ್ದಾಗಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ಒತ್ತುವರಿ ಕಾರ್ಯಾಚರಣೆ?
ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ 1.20 ಕೋಟಿ ರೂಪಾಯಿ ಮೌಲ್ಯದ 1 ಎಕರೆ ವಿಸ್ತೀರ್ಣದ ಗೋಮಾಳ, ಕುದುರೆಗೆರೆ ಗ್ರಾಮದಲ್ಲಿ 30 ಲಕ್ಷ ರೂಪಾಯಿ ಮೌಲ್ಯದ 15 ಗುಂಟೆ ವಿಸ್ತೀರ್ಣದ ಗೋಮಾಳ, ಹುಲ್ಲೇಗೌಡನಹಳ್ಳಿ ಗ್ರಾಮದಲ್ಲಿ 4 ಕೋಟಿ ರೂಪಾಯಿ ಮೌಲ್ಯದ 1.04 ಎಕರೆ ವಿಸ್ತೀರ್ಣದ ಗೋಮಾಳ ಹಾಗೂ ಮುನಿಯನಪಾಳ್ಯದಲ್ಲಿ 60 ಲಕ್ಷ ರೂಪಾಯಿ ಮೌಲ್ಯದ 20 ಗುಂಟೆ ವಿಸ್ತೀರ್ಣದ ಗೋಮಾಳದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.
ಪೂರ್ವ ತಾಲೂಕಿನಲ್ಲೂ ಕಾರ್ಯಾಚರಣೆ
ಜೊತೆಗೆ ಬೆಂಗಳೂರಿನ ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿ, ಬಿದರಹಳ್ಳಿ ಗ್ರಾಮದಲ್ಲಿನ 1.50 ಕೋಟಿ ಮೌಲ್ಯದ 1.25 ಎಕರೆ ವಿಸ್ತೀರ್ಣದ ಗೋಮಾಳದಲ್ಲಿ ಒತ್ತುವರಿ ತೆರವು ಮಾಡಿ ಕಾರ್ಯಾಚರಣೆ ನಡೆಸಲಾಗಿದೆ. ಮಂಡೂರು ಗ್ರಾಮದಲ್ಲಿ 60 ಲಕ್ಷ ರೂ ಮೌಲ್ಯದ 4 ಗುಂಟೆ, ಬಿದರಹಳ್ಳಿ ಹೋಬಳಿಯ ಕುರುಡು ಸೊಣ್ಣೇನಹಳ್ಳಿ ಗ್ರಾಮದ ರೂ. 2 ಕೋಟಿ ಮೌಲ್ಯದ 0-21 ಗುಂಟೆ ವಿಸ್ತೀರ್ಣದ ಕೆರೆ ಹಾಗೂ ಬಿದರಹಳ್ಳಿ ಹೋಬಳಿಯ ಹಿರಂಡಹಳ್ಳಿಯ ರೂ. 50 ಲಕ್ಷ ಮೌಲ್ಯದ 0-05 ವಿಸ್ತೀರ್ಣದ ಸರ್ಕಾರಿ ಕಾಲುವೆ ಅನಾಧಿಕೃತ ಒತ್ತುವರಿ ತೆರುವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದರ ಜೊತೆಗೆ ಯಲಹಂಕ ತಾಲೂಕಿನ ಬಿಲ್ಲಮಾರನಹಳ್ಳಿ ಗ್ರಾಮದಲ್ಲಿ 50 ಲಕ್ಷ ಮೌಲ್ಯದ 0.20 ಎಕರೆ ವಿಸ್ತೀರ್ಣದ ರಾಜಕಾಲುವೆ, ಸಿಂಗಾಪುರ ಗ್ರಾಮದಲ್ಲಿ 1.50 ಕೋಟಿ ರೂಪಾಯಿ ಮೌಲ್ಯದ 1.34 ಎಕರೆ ವಿಸ್ತೀರ್ಣದ ಕೆರೆ, ಬುಡುಮನಹಳ್ಳಿ ಗ್ರಾಮದ 2.05 ಲಕ್ಷ ಮೌಲ್ಯದ 0.02 ಎಕರೆ ವಿಸ್ತೀರ್ಣದ ಸ್ಮಶಾನ & ಚೊಕ್ಕನಹಳ್ಳಿ ಗ್ರಾಮದ 7.20 ಲಕ್ಷ ರೂ. ಮೌಲ್ಯದ 0.09 ಎಕರೆ ವಿಸ್ತೀರ್ಣದ ಗುಂಡುತೋಪು ವಶಕ್ಕೆ ಪಡೆಯಲಾಗಿದೆ. ಹೀಗೆ ಒಟ್ಟಾರೆ 12.79 ಕೋಟಿ ಮೌಲ್ಯದ ಒಟ್ಟು 8 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನಿನ ಒತ್ತುವರಿ ತೆರವು ಮಾಡಲಾಗಿದೆ.












Click it and Unblock the Notifications