ಬೆಂಗಳೂರು ಕೇಂದ್ರ ಸಾರಿಗೆ ಕಚೇರಿಯಿಂದ ದಾಖಲೆ ಮಟ್ಟದ 'ರಾಜಸ್ವ ಸಂಗ್ರಹ'
ಬೆಂಗಳೂರು, ಸೆಪ್ಟಂಬರ್ 17: ಕರ್ನಾಟಕ ರಾಜ್ಯ ಬೆಂಗಳೂರು ಕೇಂದ್ರ ಸಾರಿಗೆ ಕಚೇರಿಯು (Transport Department) ತನಗೆ ನೀಡಿದ್ದ ಟಾರ್ಗೆಟ್ ಗಿಂತಲೂ ಹೆಚ್ಚು ರಾಜಸ್ವ ಸಂಗ್ರಹಿಸುವ ಮೂಲಕ ಇತರ ಇಲಾಖೆಗಳಿಗೂ ಮಾದರಿಯಾಗಿದೆ. ಈ ಕುರಿತು ಅಧಿಕೃತ ಮಾಹಿತಿ ಪ್ರಕಟವಾಗಿದ್ದು, ಸ್ವತಃ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೇ ಶ್ಲಾಘಿಸಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿರುವ (HSR Layout) ಕೇಂದ್ರ ಸಾರಿಗೆ ಕಚೇರಿಯು ರಾಜಸ್ವಿ ಸಂಗ್ರಹ ವಿಚಾರದಲ್ಲಿ ಈ ಸಾಧನೆ ಮಾಡಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿ ಬಂದು ನಿಂತಿದೆ.

ಇದೇ ವರ್ಷ 2023ರ ಆಗಸ್ಟ್ ಒಂದೇ ತಿಂಗಳಲ್ಲಿ 109,98, 07,898 ರೂಪಾಯಿ ರಾಜಸ್ವವನ್ನು ಸಂಗ್ರಹಿಸುವ ಮೂಲಕ ಬೇರೆಲ್ಲ ಇಲಾಖೆಗಳಿಗೆ ಮಾದರಿ ಆಗಿದೆ. ಇದು ಕಚೇರಿಗೆ ನೀಡಿದ್ದ ನಿಗದಿತ ಗುರಿಗಿಂತಲೂ ಅತ್ಯಧಿಕವಾಗಿದೆ.
ಸದ್ಯ ಎಚ್‌ಎಸ್‌ಆರ್ ಬಡಾವಣೆಯಲ್ಲಿರುವ ಬೆಂಗಳೂರು ಕೇಂದ್ರ ಸಾರಿಗೆ ಪ್ರಾದೇಶಿಕ ಕಚೇರಿಗೆ ಅಧಿಕಾರಿಗಳಾಗಿ ದೀಪಕ್ ಎಲ್ ಅವರು ಬಂದಿದ್ದು, ಅವರ ನೇತೃತ್ವದಲ್ಲಿ ಈ ಸಾಧನೆ ಆಗಿದೆ. ಅವರ ಸಮರ್ಪಕ ಸೇವೆಗೆ ಸಾರಿಗೆ ಸಚಿವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜನಸ್ನೇಹಿ ವ್ಯವಸ್ಥೆ ಹೊಂದಿದ ಕಚೇರಿ
ಇನ್ನೂ ಈ ಕಚೇರಿಯನ್ನು ಒಂದಷ್ಟು ಅಭಿವೃದ್ಧಿಗೊಳಿಸುವ ಜೊತೆಗೆ ಜನಸ್ನೇಹಿಯಾಗಿ ಪರಿವರ್ತಿಸಲಾಗಿದೆ. ಇಲ್ಲಿ ಕಚೇರಿಗೆ ಬರುವ ನಾಗರಿಕರಿಗೆ ಮಾಹಿತಿ ನೀಡಲು ಸಹಾಯವಾಣಿ, ಕುಳಿತುಕೊಳ್ಳಲು ಆಸನ, ಇನ್ನಿತರ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಇದೆಲ್ಲ ಕಾರಣದಿಂದ ನಿಗದಿತ ಗುರಿಗಿಂತಲೂ ಅಧಿಕ ರಾಜಸ್ವ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

ಭಾರತದಲ್ಲಿಯೇ ಸಾರಿಗೆ ಇಲಾಖೆಯ ಬೆಂಗಳೂರು ಕಚೇರಿ ರಾಜಸ್ವ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಪೂನಾದ ಕಚೇರಿಯುವ ಅತ್ಯಧಿಕ ರಾಜಸ್ವ ಸಂಗ್ರಹ ಮೂಲಕ ಮೊದಲ ಸ್ಥಾನ ಪಡೆದಿದೆ.
ಎರಡು ಪ್ರಶಸ್ತಿಗೆ KSRTC ಭಾಜನ
ಕಾಮಕಾಲಜಿ ಬಿ2ಬಿ ಮೀಡಿಯಾ ಅವರು ನಡೆಸಲಿರುವ 15ನೇ ಆವೃತ್ತಿ ಎಕ್ಸ್‌ಪ್ರೆಸ್ ಲಾಜಿಸ್ಟಿಕ್ ಹಾಗೂ ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿಯಾಡಿ ಅತ್ಯುತ್ತಮ ಉದ್ಯೋಗದಾತ ಮತ್ತು ಅತ್ಯುತ್ತಮ ಸುರಕ್ಷಾ ಉಪಕ್ರಮ ಅನುಷ್ಠಾನ ವಿಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ಗೆ ಎರಡು ಪ್ರಶಸ್ತಿಗಳು ಲಭಿಸಿದೆ. ಇತ್ತೀಚೆಗೆ ಮುಂಬೈನ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ನಿಗಮದ ಅಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications