ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಕೆಲಸ ಮಾಡುವ ಶಾಲಿನಿ ಮೇರು ಸಾಧನೆಗಿಲ್ಲ ಸಾಟಿ

|
Google Oneindia Kannada News

ಬೆಂಗಳೂರು,ಮೇ 20: ಓದಿ ಸಾಧಿಸಲೇಬೇಕು ಎಂಬ ಮಹತ್ವಾಕಾಂಕ್ಷೆಗೆ ಪರಿಶ್ರಮ ಎಂಬ ಟಾನಿಕ್ ಸಿಕ್ಕರೆ ಎಂಥ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ದ್ವಿತೀಯ ಪಿಯುಸಿಯಲ್ಲಿ ಶೇ.85 ಅಂಕ ಪಡೆದ ರಾಜಾಜಿನಗರದ ಮರಿಯಪ್ಪನಪಾಳ್ಯದ ಶಾಲಿನಿ ನಿದರ್ಶನ.

ತಮ್ಮನಿಗೆ ಮಾರಕ ಕಾಯಿಲೆ ಕ್ಯಾನ್ಸರ್ ಬಾಧಿಸುತ್ತಿದೆ, ತಂದೆ ಹಾಸಿಗೆ ಹಿಡಿದು ಅದಾವುದೋ ಕಾಲವಾಯಿತು. ತಾಯಿ ಜತೆ ಮನೆ ಮನೆಯ ಮುಸುರೆ ತಿಕ್ಕಿದರೆ ಮಾತ್ರ ಹೊಟ್ಟೆ ಚೀಲ ತುಂಬುತ್ತದೆ. ಇಂಥ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತ ಬಾಲಕಿಯ ಕಣ್ಣಲ್ಲಿನ ಹೊಳಪು ಯಾವ ನಕ್ಷತ್ರಕ್ಕೂ ಕಡಿಮೆಯಿಲ್ಲ. ಇಂಜಿನಿಯರ್ ಆಗಬೇಕು ಎಂಬ ಕನಸು ಹೊತ್ತ ಬಾಲಕಿಗೆ ದೊಡ್ಡ ಮನೆ ಕಟ್ಟಿ ಅದರಲ್ಲಿ ತನ್ನ ತಾಯಿಯನ್ನು ರಾಣಿಯಂತೆ ನೋಡಿವ ಆಸೆ.[ದ್ವಿತೀಯ ಪಿಯು ಫಲಿತಾಂಶ : ವಿದ್ಯಾರ್ಥಿಗಳ ಯಶಸ್ಸಿನ ಕಥೆ]

puc

ಮಹಾನಗರಲ್ಲಿರುವ ಈಕೆ ಟಿವಿ ನೋಡಿಲ್ಲ. ಮನೆಯಲ್ಲಿರುವ ಟಿವಿ ಮೂಲೆ ಸೇರಿ ಧೂಳು ಹಿಡಿದು ಕೂತಿದೆ. ಟಿವಿ ನೋಡುವುದಕ್ಕೆ ಸಮಯವಿದ್ದರೆ ತಾನೇ. ಆಕೆಯ ದಿನಚರಿಯನ್ನು ಒಮ್ಮೆ ನೋಡಿದರೆ ದಿಗಿಲಾಗುವುದು ಖಂಡಿತ. ಬೆಳಗ್ಗೆ 4.30ರಿಂದ 5.30ವರೆಗೆ ಒಂದು, 5.30-6.30ವರೆಗೆ ಮತ್ತೊಂದು ಮನೆ, 6.30ರಿಂದ 7.30ರವರೆಗೆ ಮಗದೊಂದು ಹೀಗೆ ಐದು ಮನೆಗಳ ಕೆಲಸ ಮುಂಜಾನೆಯಿಂದ ಬೆಳಗಿನವರೆಗೆ ಮಾಡಿದರೆ ನಂತರ ಕಾಲೇಜಿಗೆ ತೆರಳುವುದು. ಮತ್ತೆ ಮನೆಗೆ ಹಿಂದಿರುಗಿದ ನಂತರ ಅಡುಗೆ ಕೆಲಸಕ್ಕೆ ನೆರವಾಗುವುದು. ರಾತ್ರಿ 10 ಗಂಟೆಯಿಂದ ಓದಲು ಕುಳಿತರೆ 1 ಗಂಟೆವರೆಗೆ ನಾನ್ ಸ್ಟಾಪ್.[ಪಿಯು ಟಾಪರ್ ಕುಡ್ಲದ ರಶ್ಮಿತಾ ಜೊತೆ ಚಿಟ್ ಚಾಟ್]

ಪ್ರಾಥಮಿಕ ಶಾಲೆ ತಮಿಳು ಮಾಧ್ಯಮದಲ್ಲಿ, ಹೈಸ್ಕೂಲ್ ಕನ್ನಡ ಮಾಧ್ಯಮದಲ್ಲಿ ಆದರೆ ಇದೀಗ ಶೇ. 85 ಗಳಿಸಿದ್ದು ಆಂಗ್ಲ ಮಾಧ್ಯಮದಲ್ಲಿ. ನಿನಗೆ ಯಾವ ಹಿರೋಯಿನ್ ಇಷ್ಟ ಎಂದು ಕೇಳಿದರೇ 'ನನ್ನ ತಾಯಿಯೇ ನನಗೆ ಹಿರೋಯಿನ್' ಎಂದು ಆಕೆ ನೀಡುವ ಉತ್ತರ ನಮ್ಮ ಮಾತನ್ನು ಅಲ್ಲಿಗೆ ನಿಲ್ಲಿಸುತ್ತದೆ.

ಅಬ್ಬಾ...ಈಕೆ ನಿದ್ರೆ ಮಾಡುತ್ತಿದುದು ಕೇವಲ ಮೂರು ವರೆ ಗಂಟೆ! ಮನೆಯ ನಿರ್ವಹಣೆ, ಕಾಲೇಜಿನ ಓದು ಎಲ್ಲವನ್ನು ಸರಿದೂಗಿಸಿಕೊಂಡು ಈಕೆ ತಾಳ್ಮೆ ಮತ್ತು ಪರಿಶ್ರಮವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆಕೆಯ ಉನ್ನತ ವ್ಯಾಸಂಗದ ಕನಸಿಗೆ ಗುಡ್ ಲಕ್ ಹೇಳುವಷ್ಟಾದರೂ ಔದಾರ್ಯ ತೋರಿಸೋಣ.

English summary
They say success knocks the doors of those who defy all odds to make a way for themselves. A similar inspiring story has come to fore where a 17-year-old who works as a housemaid scored 85 per cent in the science stream in the second PU exam. This high-scorer cleaned bathrooms and scrubbed utensils, cooking and nursing, while juggling studies. That's 17-year-old Shalini A, whose life story is more like an obstacle race.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X