Get Updates
Get notified of breaking news, exclusive insights, and must-see stories!

ಬಳ್ಳಾರಿ ಜೈಲಲ್ಲಿ ಅಧಿಕಾರಿಗಳಿಗೆ ಹೊಸ ತಲೆನೋವು: ನಟನ ದರ್ಶನಕ್ಕೆ 'ಕೈದಿ ಫ್ಯಾನ್ಸ್' ಪಟ್ಟು

Darshan Thoogudeepa Case: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರು ಬಳ್ಳಾರಿ ಜೈಲಿಗೆ ಸ್ಥಳಾಂತರಗೊಳ್ಳುತ್ತಿದ್ದಂತೆ ಬೇರೆ ಬೇರೆ ಜೈಲುಗಳಲ್ಲಿ ವಿಶೇಷ ಬೆಳವಣಿಗೆಗಳು ನಡೆಯುತ್ತಿವೆ. ಮೊನ್ನೆಯಷ್ಟೆ ಹಿಂಡಲಗಾ ಜೈಲಿನಲ್ಲಿ ಕೈದಿಗಳು ಪ್ರತಿಭಟನೆ ಮಾಡಿದ್ದರು. ಇದೀಗ ಬಳ್ಳಾರಿ ಜೈಲಲ್ಲಿ ನೆಚ್ಚಿನ ನಟನಿಗಾಗಿ ಕೈದಿಗಳು ಜೈಲಾಧಿಕಾರಿಗಳ ಮೇಲೆ ದುಂಬಾಲು ಬಿದ್ದಿದ್ದಾರೆ. ಇದು ಅಧಿಕಾರಿಗಳು ಹೊಸ ತಲೆನೋವಾಗಿ ಪರಿಣಮಿಸಿದೆ.

ಬಳ್ಳಾರಿ ಜೈಲಿನಲ್ಲಿ ಕೈದಿಗಳು ತಮ್ಮ ನೆಚ್ಚಿನ ನಟನನ್ನು ತೋರಿಸುವಂತೆ ಅಧಿಕಾರಿಗಳ ಮುಂದೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ನಟ ದರ್ಶನ್ ಬಳ್ಳಾರಿ ಕಾರಾಕಗೃತಕ್ಕೆ ಸ್ಥಳಾಂತರ ಆಗಿ ಸುಮಾರು ನಾಲ್ಕು ದಿನಗಳು ಕಳೆಯುತ್ತಾ ಬಂದಿವೆ. ಈ ವೇಳೆ ಅಲ್ಲಿನ ಸಹ ಕೈದಿಗಳಲ್ಲಿ ಒಂದಷ್ಟು ಮಂದಿ ನಟ ದರ್ಶನ್ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ. ಹೀಗಾಗಿ ನೆಚ್ಚಿನ ನಟನನ್ನು ನೋಡಲು ಹಾತೊರೆಯುತ್ತಿದ್ದಾರೆ.

Bellary Jail Prisoners Urged to Show Actor Darshan Thoogudeepa

ಪರಪ್ಪನ ಅಗ್ರಹಾರದಲ್ಲಿ ಆರಂಭದಲ್ಲಿ ಹೊಂದಿಕೊಳ್ಳಲು ಕಷ್ಟಪಟ್ಟಿದ್ದ ನಟ ದರ್ಶನ್ ಅವರಿಗೆ ಇದೀಗ ಬಳ್ಳಾರಿ ಜೈಲಿನ ಪರಿಸರಕ್ಕೆ ಅವರು ಹೊಂದಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಕೈದಿಗಳು ತಮ್ಮ ಸೆಲ್ ಮುಂದೆ ಓಡಾಡುವ ಜೈಲು ಅಧಿಕಾರಿಗಳು, ವಾರ್ಡನ್, ಸಿಬ್ಬಂದಿ ಮುಂದೆ ನಟನನ್ನು ತೋರಿಸುವಂತೆ ಅಂಚಲಾಚುತ್ತಿದ್ದಾರೆ.

ದರ್ಶನ್‌ರನ್ನು ಕಾಣಬೇಕೆಂಬ ಕನಸು: ನನಸು ಮಾಡಲು ಪಟ್ಟು

ನಾವು ದರ್ಶನ್ ಅವರ ಅಭಿಮಾನಿ. ಅವರನ್ನು ನೇರವಾಗಿ ನೋಡಲು ಆಗಿರಲಿಲ್ಲ. ಇದೀಗ ಅವರು ನಾವಿರುವ ಸ್ಥಳಕ್ಕೆ ಬಂದಿದ್ದಾರೆ. ನಮ್ಮ ಜೈಲಿಗೆ ಸ್ಥಳಾಂತವಾದ ಸುದ್ದಿ ಕೇಳಿದ್ದೇವೆ. ಅವರು ಯಾವ ಸೆಲ್‌ನಲ್ಲಿದ್ದಾರೆ. ಅವರನ್ನು ಒಮ್ಮೆ ಬೇಟಿ ಮಾಡಿಸಿ. ಅವರನ್ನೊಮ್ಮೆ ತೋರಿಸಿ ಸಾರ್. ದರ್ಶನ್ ನೋಡಿ ನಮಗೆ ಖಷಿಯಾಗುತ್ತದೆ ಎಂದು ಜೈಲಾಧಿಕಾರಿಗಳ ಮುಂದೆ ಹೊಸ ನಿವೇದನೆಯೊಂದನ್ನು ಬಳ್ಳಾರಿ ಕೈದಿಗಳು ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ದರ್ಶನ್ ಅವರನ್ನು ಒಮ್ಮೆಯಾದರೂ ನೋಡಬೇಕೆಂಬ ಕನಸು ಇತ್ತು. ಈಗ ಅದು ನನಸಾಗುವ ಕಾಲ ಹತ್ತಿರವಾಗಿದೆ. ದಯಮಾಡಿ ಇದಕ್ಕೆ ಅವಕಾಶ ಮಾಡಿಕೊಡಿ, ನಮ್ಮ ಮನವಿ ಸ್ವೀಕರಿಸಿ ಎಂದು ಪರಿ ಪರಿಯಾಗಿ ಕೈದಿಗಳು ಬೇಡಿಕೊಳ್ಳುತ್ತಿದ್ದಾರೆ. ಖೈದಿಗಳ ಬೇಡಿಕೆ ಈಡೇರಿಸಲಾಗದೇ ಅಧಿಕಾರಿಗಳು ಹೈರಾಣಾಗಿದ್ದಾರೆ. ಜೈಲು ಕೊಠಡಿ ಮುಂದೆ ಅಧಿಕಾರಿಗಳು ಗಸ್ತು ತೆರಳುವಾಗ, ಬರುವಾಗ ದರ್ಶನ್ ಭೇಟಿಗೆ ಕೇಳುತ್ತಲೇ ಇದ್ದಾರೆ.

Bellary Jail Prisoners Urged to Show Actor Darshan Thoogudeepa

ಜೈಲಲ್ಲಿ ಅಲರ್ಟ್: ಖೈದಿಗಳ ಕೋರಿಕೆ ಕಡೆಗಣನೆ

ಜೈಲಿನ ಒಳಗಿದ್ದಾಗ ದರ್ಶನ್ ಅವರ ಫೋಟೋಗಳು ಹೊರ ಬಂದು ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಹೀಗಾಗಿಯೇ ಅವರನ್ನು ಬೆಂಗಳೂರಿನ ಜೈಲಿನಿಂದ ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ. ಇದರಿಂದ ಜೈಲು ವ್ಯವಸ್ಥೆ, ಗೃಹ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿತ್ತು.

ಹೀಗಾಗಿ ಜೈಲಿನ ಒಳಗೆ ಹೈಅಲರ್ಟ್ ಇದ್ದು, ಅಗತ್ಯ ನಿಗಾ ಒದಗಿಸಲಾಗಿದೆ. ಈ ಮಧ್ಯೆ ಜೈಲಿನಲ್ಲಿನ ನಟನ ಅಭಿಮಾನಿಗಳ ಮನವಿಗೆ ಸ್ಪಂದಿಸಲು ಸಾಧ್ಯವಿಲ್ಲ ಎಂಬುದು ಅಧಿಕಾರಿಗಳಿಗೆ ಗೊತ್ತಿದೆ.

ಬೀಡಿ, ಸಿಗರೇಟಿಗಾಗಿ ಕೈದಿಗಳು ಪ್ರತಿಭಟನೆ

ರಾಜ್ಯದ ವಿವಿಧ ಜೈಲುಗಳಿಗೆ ರೇಣುಕಾಸ್ವಾಮಿ ಹತ್ಯೆ ಆರೋಪಿಗಳನ್ನು ಸ್ಥಳಾಂತರ ಮಾಡಲಾಗಿದೆ. ಹೀಗಾಗಿ ಅಲ್ಲೆಲ್ಲ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ತಂಬಾಕು, ಸಿಗರೇಟು, ಬೀಡಿ, ಗುಟ್ಕಾದಂತಹ ಪದಾರ್ಥಗಳನ್ನು ನಿಷೇಧಿಸಲಾಗಿದೆ. ಮೊನ್ನೆಯಷ್ಟೇ ಹಿಂಡಲಗಾ ಜೈಲಿನಲ್ಲಿ ತಂಬಾಕು ಉತ್ಪನ್ನಕ್ಕಾಗಿ ಕೈದಿಗಳು ಬೇಡಿಕೆ ಇಟ್ಟು ಪ್ರತಿಭಟಿಸಿ ಘಟನೆ ನಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+