ಬೇಲೇಕೇರಿ : ಸ್ವಸ್ತಿಕ್, ಕಾರದಪುಡಿ ಮೇಲೆ ಚಾರ್ಜ್ ಶೀಟ್

ಬೆಂಗಳೂರು, ನ. 30: ಬೇಲೆಕೇರಿ ಅದಿರು ನಾಪತ್ತೆ ಹಾಗೂ ಅಕ್ರಮ ಅದಿರು ಸಾಗಣೆ ಪ್ರಕರಣಗಳ ಸಂಬಂಧ ಸುಪ್ರೀಂ ಕೋರ್ಟ್ ಆದೇಶದಂತೆ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದ ಶನಿವಾರ(ನ.30) ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಬೇಲೆಕೇರಿ ಬಂದರಿಗೆ ಅಕ್ರಮವಾಗಿ ಕಬ್ಬಿಣ ಅದಿರು ಸಾಗಣೆ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆ ನಾಲ್ಕು ಪ್ರಕರಣಗಳನ್ನು ದಾಖಲಿಸಿದೆ. ಇದರಲ್ಲಿ ಇದೀಗ ಎರಡು ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಐಎಲ್ ಸಿ ಕಂಪೆನಿ ಹಾಗೂ ಅದರ ಒಡೆಯ ಕೆ.ಸೋಮಶೇಖರ್, ಕಾರದಪುಡಿ ಮಹೇಶ್ ಮತ್ತಿತರರ ಮೇಲೆ ಆರೋಪಗಳನ್ನು ಹೊರಿಸಲಾಗಿದೆ.

ಜಾಮೀನು ತಿರಸ್ಕಾರ: ಇದೇ ವೇಳೆ ವಿಶೇಷ ನ್ಯಾಯಾಲಯದ ಮುಂದೆ ಅಧಿಕಾರಿಗಳಾದ ಮುತ್ತಯ್ಯ, ಎಂ.ಕೆ.ಶುಕ್ಲಾ, ಐಎಲ್ ಸಿ ಕಂಪೆನಿ ಮಾಲಕ ಕೆ.ಸೋಮಶೇಖರ್ ಹಾಗೂ ಕಾರದಪುಡಿ ಮಹೇಶ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಧೀಶ ವಿ.ಶ್ರಿಶಾನಂದ ತಿರಸ್ಕರಿಸಿದ್ದಾರೆ.

Belekeri case: CBI charge sheet names two companies

ಪ್ರಕರಣದಲ್ಲಿ ಆರೋಪಿಗಳ ಮೇಲೆ ಗಂಭೀರ ಆರೋಪಗಳಿವೆ. ಅಲ್ಲದೆ ತನಿಖಾ ಸಂಸ್ಥೆ ಇನ್ನೂ ದೋಷಾರೋಪ ಪಟ್ಟಿಯನ್ನು ಸಲ್ಲಿಸಿಲ್ಲ ಎಂದು ಸಿಬಿಐ ಪರ ವಕೀಲ ಕೆ.ಸುದರ್ಶನ್ ವಾದಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಯಾರಿಗೆ ಭೀತಿ: M/s ಡ್ರೀಮ್ ಲಾಜಿಸ್ಟಿಕ್ಸ್ ಪೈ ಲಿ ಮಾಲೀಕರಾದ ಯಲ್ಲಾಪುರ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಅವರ ಪುತ್ರ ವಿವೇಕ್ ಹೆಬ್ಬಾರ್.
* ಆನಂದ್ ಸಿಂಗ್ ಅವರ ವೈಷ್ಣವಿ ಮಿನಿರಲ್ಸ್ , ನಾಗೇಂದ್ರ ಅವರ ಈಗಲ್ ಟ್ರೇಡರ್ಸ್ ಅಂಡ್ ಲಾಜಿಸ್ಟಿಕ್ಸ್, ಸುರೇಶ್ ಬಾಬು ಅವರ ಜನಾದೇವಿ ಮಿನರಲ್ಸ್, ಕೆ ಸೋಮಶೇಖರ್ ಅವರ ಐಎಲ್ ಸಿ ಇಂಡಸ್ಟ್ರೀಸ್ ಪೈ.ಲಿ. ಸಿಬ್ಬಂದಿಗಳು
* ಅರಣ್ಯ ಇಲಾಖೆ ಅಧಿಕಾರಿಗಳು, ಬಂದರಿನ ಸಿಬ್ಬಂದಿಗಳು
* ಪವನ್ ಕುಮಾರ್ ಜೈನ್ ಅವರ ಪಿಜೆಎಸ್ ಓವರ್ಸೀಸ್ ಲಿ.

ಬಂಧಿತರು: ಕೂಡ್ಲಿಗಿ ಶಾಸಕ ನಾಗೇಂದ್ರ, ಕಂಪ್ಲಿಶಾಸಕ ಸುರೇಶ್ ಬಾಬು, ಕಾರವಾರದ ಶಾಸಕ ಸತೀಶ್ ಸೈಲ್. ಜತೆಗೆ ಅಂಕೋಲದ ಮಾಜಿ ಅರಣ್ಯಾಧಿಕಾರಿ ನರೇಂದ್ರ ಹಿತಲಮಕ್ಕಿ, ಮಾಜಿ ರೇಂಜ್ ಆಫೀಸರ್ ಜಿ.ಸಿ ನಾಯಕ್, ಬೇಲೇಕೇರಿ ಬಂದರು ಅಧಿಕಾರಿ ಕ್ಯಾಪ್ಟನ್ ಸಿ ಸ್ವಾಮಿ, ಪ್ರೊಪ್ರೆಟರ್ ಲಾಲ್ ಮಹಲ್ ಲಿ. ರಾಜಕುಮಾರ್ ಇವರೆಲ್ಲರ ಜತೆಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+