ಮತ್ತೆ ಕರಡಿ ದಾಳಿ : ಹಾಸನದಲ್ಲಿ ರೈತ ಬಲಿ

ಹಾಸನ, ಡಿ.2 : ಕರ್ನಾಟಕದಲ್ಲಿ ವನ್ಯಜೀವಿಗಳು ಮತ್ತು ಮಾನವರ ನಡುವಿನ ಸಂಘರ್ಷ ಮುಂದುವರೆದಿದ್ದು, ಹಾಸನ ಜಿಲ್ಲೆಯಲ್ಲಿ ಇಂದು ಕರಡಿ ದಾಳಿಗೆ ರೈತನೊಬ್ಬ ಬಲಿಯಾಗಿದ್ದಾನೆ. ಕಳೆದ ಎರಡು ತಿಂಗಳಿನಲ್ಲಿ ನಡೆದ 2ನೇ ಕರಡಿ ದಾಳಿ ಪ್ರಕರಣವಿದಾಗಿದೆ.

ಅರಸೀಕೆರೆ ತಾಲೂಕಿನ ಹಿರೇಸಾದರಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಶೇಖರಪ್ಪ ಎಂಬುವವರ ಮೇಲೆ ಕರಡಿ ದಾಳಿ ಮಾಡಿ ಅವರನ್ನು ಕೊಂದು ಹಾಕಿದೆ. ಶೇಖರಪ್ಪ ಅವರ ಜೊತೆಗಿದ್ದ ಕಳ್ಳಪ್ಪ ಅವರು ಕರಡಿ ದಾಳಿಯಿಂದ ಗಾಯಗೊಂಡಿದ್ದಾರೆ.

Bear

ಕರಡಿ ದಾಳಿಗೆ ಒಳಗಾದ ಶೇಖರಪ್ಪ ಸ್ಥಳದಲ್ಲೇ ಮೃತಪಟ್ಟರೆ, ಕಳ್ಳಪ್ಪ ಅವರನ್ನು ಅರಸೀಕೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಕರಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. [ಚಾಮರಾಜನಗರದಲ್ಲಿ ಚಿರತೆ ದಾಳಿ]

ತುಮಕೂರಿನಲ್ಲಿ ದಾಳಿ : ನ.18ರಂದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಇಬ್ಬರು ರೈತರ ಮೇಲೆ ಕರಡಿ ದಾಳಿ ಮಾಡಿತ್ತು. ಕರಡಿ ದಾಳಿಯಿಂದ ರೈತನೊಬ್ಬ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. [ತುಮಕೂರಿನಲ್ಲಿ ಕರಡಿ ದಾಳಿ]

ಇತ್ತೀಚೆಗೆ ಪ್ರಾಣಿಗಳ ದಾಳಿಗೆ ಬಲಿಯಾದವರು [ಚಿಕ್ಕಮಗಳೂರು : ಸೆರೆಸಿಕ್ಕಿತು ಮಹಿಳೆ ಕೊಂದ ಹುಲಿ]
* ನ.15ರಂದು ಚಿಕ್ಕಮಗಳೂರಿನಲ್ಲಿ ಹುಲಿ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು.
* ನ.18ರಂದು ಮಧುಗಿರಿ ತಾಲೂಕಿನಲ್ಲಿ ರೈತರ ಮೇಲೆ ಕರಡಿ ದಾಳಿ ಮಾಡಿ ಒಬ್ಬರನ್ನು ಕೊಂದು ಹಾಕಿತ್ತು.
* ನ.27ರಂದು ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಟೆಂಪೋ ಕ್ಲೀನರ್‌ ಬಲಿಯಾಗಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+