ಕಾನೂನು ಸುವ್ಯವಸ್ಥೆ ಕಾಪಾಡೋಕೆ ಆಗಲ್ಲ ಅಂದ್ರೆ ಜಾಗ ಖಾಲಿ ಮಾಡಿ: ಮಾಜಿ ಸಿಎಂ ಎಚ್ಚರಿಕೆ

ಹುಬ್ಬಳ್ಳಿ, ಮೇ 17: ಅಂಜಲಿ ಕೊಲೆ ಆಘಾತಕಾರಿ ಬೆಳವಣಿಗೆ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡೋಕೆ ಆಗಲ್ಲ ಅಂದ್ರೆ ಜಾಗ ಖಾಲಿ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದರು.

ಈ ಕುರಿತು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿನ ಕೊಲೆಯಾದ ಅಂಜಲಿ ನಿವಾಸಕ್ಕೆ ಅವರು ಭೇಟಿ ನೀಡಿ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ವೇಳೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಸವರಾಜ ಬೊಮ್ಮಾಯಿ ಅವರು, ಅಂಜಲಿ ಕೊಲೆ ಆಘಾತಕಾರಿ ಬೆಳವಣಿಗೆ ಆಗಿದೆ. ಆರೋಪಗಳಿಗೆ ಕಾನೂನಿನ ಭಯವು ಇಲ್ಲ ಪೊಲೀಸರ ಭಯವೂ ಇಲ್ಲದಂತಾಗಿದ್ದು, ಏನು ಮಾಡಿದರೂ ನಡೆಯುತ್ತೆ ಎನ್ನುವ ಭಾವನೆ ಮೂಡಿದೆ.

Basavaraja Bommai Lashed Out That The Law And Order Situation In State Is Not Good

ನೇಹಾ ಪ್ರಕರಣ ನಡೆದ ನಂತರವೂ ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇತರ ನಾಯಕರು ದೊಡ್ಡ ದೊಡ್ಡ ಮಾತುಗಳ ನಾಡಿದರು. ಏನೂ ಮಾಡದೆ ಇರುವ ಪರಿಣಾಮ ಈ ಹತ್ಯೆ ನಡೆದಿದ್ದು ಆರೋಪಿ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಪೊಲೀಸರೇ ಪರೋಕ್ಷವಾಗಿ ಆರೋಪಿಗೆ ಕೊಲೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಪೊಲೀಸ್ ಠಾಣೆಗಳು ಇರುವುದಾದರೂ ಯಾಕೆ.? ಅಂತಾ ಪ್ರಶ್ನೆ ಮಾಡಿದ ಅವರು ವಿರೋಧ ಪಕ್ಷದವರು ಹಳಿಕೆ ಕೊಟ್ಟರೆ ರಾಜಕೀಯ ಅಂತಾರೆ. ಇಷ್ಟೆಲ್ಲಾ ಕೊಲೆ ನಡೆದರೂ ನಾವು ಬಾಯಿ ಮುಚ್ಕೊಂಡು ಕೂಡಬೇಕೇ..? ಎಂದು ಪ್ರಶ್ನಿಸಿದರು.

ನೀವು ರಾಜಕಾರಣವನ್ನಾದರೂ ಅನ್ನಿ ಮಹಾರಾಜಕಾರಣವನ್ನಾದ್ರೂ ಅನ್ನಿ. ನಿಮ್ಮ ಕೈಯಲ್ಲಿ ಕಾನೂನು ಕಾಪಾಡಲು ಆಗೋಲ್ಲ ಅಂದ್ರೆ ಕೂಡಲೇ ಜಾಗ ಖಾಲಿ ಮಾಡಸಂವೇದನಾಶೀಲ ಸರ್ಕಾರ ಬೇಕಲ್ಲವೇ..?

ಪೊಲೀಸರ ಅಮಾನತ್ತಿನಿಂದ ಈ ಪ್ರಕರಣಕ್ಕೆ ನ್ಯಾಯ ಸಿಗುತ್ತೆಯೇ..? ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ರಚನೆ ಮಾಡಬೇಕು. ಆರೋಪಿಗೆ ಗಲ್ಲು ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಿ ನಮ್ಮ ಹೋರಾಟವನ್ನು ಇಲ್ಲಿಗೆ ಕೈ ಬಿಡಲ್ಲ ಇದೇ ರೀತಿ ಕೊಲೆ ಪ್ರಕರಣ ನಡೆದರೆ ಜನವೇ ಸರ್ಕಾರದ ವಿರುದ್ಧ ತಿರುಗಿ ಬೀಳ್ತಾರೆ. ಅಂಜಲಿ ಕುಟುಂಬಸ್ಥರಿಗೆ ಕೂಡಲೇ ಪರಿಹಾರ ಕೊಡಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+