ನರೇಂದ್ರ ಮೋದಿ ಮುಂದೆ ನೀವು ನಾಯಿ ಮರಿ ತರ ಇರ್ತೀರಿ, ಮೋದಿ ಮುಂದೆ ಬೊಮ್ಮಾಯಿ ಗಡಗಡ: ಸಿದ್ದರಾಮಯ್ಯ
ಬಳ್ಳಾರಿ, ಜನವರಿ 4: ಸಿಎಂ ಬಸವರಾಜ ಬೊಮ್ಮಾಯಿ, ನರೇಂದ್ರ ಮೋದಿ ಮುಂದೆ ನೀವು ನಾಯಿ ಮರಿ ತರ ಇರ್ತೀರಿ, ಮೋದಿ ಕಂಡರೆ ಗಡಗಡ ಅಂತೀರಿ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಸಾರ್ಥಕ ನಮನ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದ ಅವರು, ರಾಜ್ಯಕ್ಕೆ 5499 ಕೋಟಿ ರೂ.ವಿಶೇಷ ಅನುದಾನ ನೀಡಬೇಕಿತ್ತು. ಆದರೆ, ನಿರ್ಮಲಾ ಸೀತಾರಾಮನ್ ನಾವು ಕೊಡಲು ಸಾಧ್ಯವಿಲ್ಲಎಂದು ಪತ್ರ ಬರೆಯುತ್ತಾರೆ. ಸಿಎಂಗೆ ನಿಜಕ್ಕೂ ತಾಖತ್ತಿದ್ದರೆ ಕೇಂದ್ರದಿಂದ ಅನುದಾನ ತರಬೇಕಿತ್ತು. ಆದರೆ, ನಿಮ್ಮ ದಮ್ಮು, ತಾಖತ್ತು ಎಲ್ಲಿ ಹೋಯಿತಪ್ಪ ಬೊಮ್ಮಾಯಿ ಎಂದು ಮುಖ್ಯಮಮಂತ್ರಿ ಬಸರಾಜ ಬೊಮ್ಮಾಯಿ ಅವರ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗುವುದು ಸೂರ್ಯ ಪೂರ್ವದಲ್ಲಿ ಹುಟ್ಟುವಷ್ಟೇ ಸತ್ಯ. ಕೇವಲ ತಾಲೂಕಿನ 40 ಕೆರೆಗಳಿಗೆ ಮಾತ್ರವಲ್ಲರಾಜ್ಯದ ಎಲ್ಲಕೆರೆಗಳಿಗೂ ನೀರು ತುಂಬಿಸುವ ಯೋಜನೆಯನ್ನು ಅಧಿಕಾರ ಪಡೆದ ವರ್ಷದಲ್ಲೆ ಮಾಡುತ್ತೇವೆ. ಮಾತು ಕೊಟ್ಟಂತೆ ನಮ್ಮ ಅವಧಿಯಲ್ಲಿ ನೀರಾವರಿಗೆ ಆದ್ಯತೆ ನೀಡಲಾಗಿದೆ. ಆದರೆ, ಇಂದಿನ ಸರಕಾರಕ್ಕೆ ಕೇವಲ 100ಲಕ್ಷ.ಕೋಟಿ ರೂಗಳನ್ನು ಮೂರು ವರ್ಷದಲ್ಲಿ ನೀರಾವರಿಗಾಗಿ ಬಳಕೆ ಮಾಡಲಾಗಿಲ್ಲ. ಕೃಷ್ಣ, ಮಹದಾಯಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿಲ್ಲ. ಮೇಕೆದಾಟು ಯೋಜನೆ ಜಾರಿಗೊಳಿಸುವುದನ್ನು ರಕ್ತದಲ್ಲಿ ಬರೆದು ಕೊಡುವುದಾಗಿ ಹೇಳಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಮಾತುಗಳೇನಾದವು. ಬಿಜೆಪಿಯಿಂದ ಇತಿಹಾಸದಲ್ಲೆ ದಾಖಲೆಯಾಗುವಷ್ಟು ಸಾಲವಾಗಿದೆ ಎಂದರು.

ನಮ್ಮ ಸರಕಾರದ ಅವಧಿಯಲ್ಲಿನೀಡಿದ 165 ಭರವಸೆಗಳಲ್ಲಿ158 ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ, ಇಂದಿನ ಬಿಜೆಪಿ ಸರಕಾರ 600 ಭರವಸೆಗಳ ಪೈಕಿ ಕೇವಲ ಶೇ.10ರಷ್ಟು ಭರವಸೆಗಳನ್ನು ಈಡೇರಿಸಿದೆ. ತಾಖತ್ತಿದ್ದರೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಒಂದೇ ವೇದಿಕೆಯಲ್ಲಿಬರಲಿ, ಈ ಮಾತು ಸುಳ್ಳೋ ಸತ್ಯವೇ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲೆಸೆದರು.
ರಾಜ್ಯದಲ್ಲಿ5ಲಕ್ಷ ಮನೆಗಳನ್ನು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಿರ್ಮಿಸಲಾಗಿತ್ತು.ಇಂದಿಗೂ ಬಿಜೆಪಿ ಸರಕಾರಕ್ಕೆ ಒಂದೇ ಒಂದು ಮನೆ ನಿರ್ಮಿಸಲಾಗಿಲ್ಲ. ಈ ಸರಕಾರಕ್ಕೆ ಜನಪರ ಕಾಳಜಿ ಇದೆಯೆ?, ಇಂತಹ ಸರಕಾರ ರಾಜ್ಯದಲ್ಲಿರಬೇಕೆ ಎಂಬುದನ್ನು ಜನರೇ ತೀರ್ಮಾನಿಸಲಿ. ಮಾಲವಿ ಜಲಾಶಯಕ್ಕೆ ಈ ವರೆಗೂ ಯಾವುದೇ ಸರಕಾರ ಅನುದಾನ ನೀಡಿರಲಿಲ್ಲ. ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿಅಂದಿನ ಶಾಸಕ ಭೀಮನಾಯ್ಕ ಜೆಡಿಎಸ್ ನವರಾಗಿದ್ದರೂ ಪಕ್ಷಪಾತವಿಲ್ಲದೆ 150 ಕೋಟಿ ರೂ.ಅನುದಾನ ನೀಡಿ, ತುಂಗಭದ್ರಾ ನದಿ ನೀರು ತುಂಬಿಸಲಾಗಿದೆ ಎಂದರು.












Click it and Unblock the Notifications