ಸಿದ್ದರಾಮಯ್ಯ ಅವರ ಹೊಗಳಿ ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ ಕೈ ಶಾಸಕ

Recommended Video

      ಎಚ್ ಡಿ ಕುಮಾರಸ್ವಾಮಿಗೆ ಏಕವಚನದಲ್ಲಿ ಎಚ್ಚರಿಕೆ ಕೊಟ್ಟ ಕಾಂಗ್ರೆಸ್ ಶಾಸಕ | Oneindia Kannada

      ಬೀದರ್, ಆಗಸ್ಟ್ 27: ಕುಮಾರಸ್ವಾಮಿ ಕಾಂಗ್ರೆಸ್‌ನವರ ಹೆಗಲ ಮೇಲೆ ಕೂತಿದ್ದಾನೆ, ಕುಮಾರಸ್ವಾಮಿ ಏನಾದರೂ ಎಚ್ಚರ ತಪ್ಪಿದರೆ ಸಿಎಂ ಪದವಿಯಿಂದ ಕೆಳಗಿಳಿಸ್ತೇವೆ ಎಂದು ಏಕವಚನದಲ್ಲೇ ಕಾಂಗ್ರೆಸ್‌ ಶಾಸಕ ನಾರಾಯಣರಾವ್ ಎಚ್ಚರಿಕೆ ನೀಡಿದ್ದಾರೆ.

      ಬೀದರ್‌ನಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಉಪಸ್ಥಿತರಿದ್ದ ವೇದಿಕೆಯಲ್ಲಿಯೇ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಹೊಗಳಿ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದರು.

      ಕುಮಾರಸ್ವಾಮಿ ಬಳಿ 37 ಸೀಟಿದೆ. ನಮ್ಮ ಬಳಿ 80 ಸೀಟು ಇದೆ. ಆದರೆ ಕುಮಾರಸ್ವಾಮಿ ಕಾಂಗ್ರೆಸ್‌ ಹೆಗಲೇರಿ ಸಿಎಂ ಆಗಿ ಕೂತಿದ್ದಾನೆ. ಏನಾದ್ರು ನಮ್ಮ ಕಿವಿಗೆ ಎಣ್ಣೆ ಬಿಡಲು ಬಂದ್ರೆ ಅಧಿಕಾರದಿಂದ ಕೆಳಗಿಳಿಸುತ್ತೇವೆ ಎಂದು ಅವರು ಕುಮಾರಸ್ವಾಮಿ ಅವರಿಗೆ ಏಕವಚನದಲ್ಲಿಯೇ ಸಂಭೋದಿಸಿದರು.

      Basavakalyana Congress MLA warns CM Kumaraswamy

      ತಮ್ಮ ಪಕ್ಷದ ಹಿರಿಯ ಮುಖಂಡರ ಮೇಲೂ ಅಸಮಾಧಾನ ವ್ಯಕ್ತಪಡಿಸಿದ ಅವರು, ನಾನು ಹೀಗೆ ಮಾತನಾಡಿದರೆ ಹೀಗೆ ಯಾಕೆ ಮಾತನಾಡುತ್ತೀಯಾ ಅಂತಾರೆ, ಇನ್ನು ಹೇಗೆ ಮಾತನಾಡಬೇಕು? ಎಂದು ಅವರು ಪ್ರಶ್ನೆ ಮಾಡಿದರು.

      ಸಿದ್ದರಾಮಯ್ಯ ಅವರ ಆಡಳೀತವನ್ನು ಹೊಗಳಿ ಮಾತನಾಡಿದ ಅವರು, ಪ್ರತಿ ದಿನವೂ ಸೂರ್ಯ ಹುಟ್ಟುವುದು ಎಷ್ಟು ಖಾತ್ರಿಯೋ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವುದು ಅಷ್ಟೆ ಖಾತ್ರಿ' ಎಂದು ಅವರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+