DK Shivakumar V/S Yatnal: ಏನು ಹಸಿರೀಕರಣ ಮಾಡುತ್ತಾರಾ?: ಡಿ.ಕೆ. ಶಿವಕುಮಾರ್ ವಿರುದ್ಧ ಯತ್ನಾಳ್ ಕಿಡಿ
ಬೆಂಗಳೂರು, ಮೇ 24: ಕಾಂಗ್ರೆಸ್ ಸರ್ಕಾರ ರಚನೆಯ ಬೆನ್ನಲ್ಲೇ ಆಡಳಿತ ಯಂತ್ರವನ್ನ ಸಿದ್ದರಾಮಯ್ಯ ಅವರು ಚುರುಕುಗೊಳಿಸಿದ್ದು, ಹಿಂದಿನ ಬಿಜೆಪಿ ಸರ್ಕಾರದ ಕೇಸರೀಕರಣದ ವಿಚಾರ ಇದೀಗ ಮತ್ತೆ ಮುನ್ನಲೇ ಬಂದಿದೆ. ಪೊಲೀಸ್ ಠಾಣೆಗಳನ್ನು ಹಸರೀಕರಣ ಮಾಡುತ್ತಾರಾ? ಎಂದು ಡಿಕೆ ಶಿವಕುಮಾರ್ ಅವರ ವಿರುದ್ದ ಬಸವನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಾಕಿಸ್ತಾನ ಮಾಡಲು ಹೊರಟಿದ್ದಾರಾ?. ಕೇಸರಿ ಈ ಧರ್ಮದ ದೇಶದ ಸಂಕೇತವಾಗಿದೆ. ಪೊಲೀಸರು ಕೇಸರಿಶಾಲು ಹಾಕ್ಕೊಂಡ್ರೆ ತಪ್ಪೇನಿದೆ? ಎಂದು ಯತ್ನಾಳ್ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಕಾಂಗ್ರೆಸ್ ನಾಯಕರ ವಿರುದ್ದ ಟೀಕಿಸಿದ ಅವರು, ಕೇಸರಿಯನ್ನು ವಿರೋಧ ಮಾಡಿದ್ರು ಉಳಿಗಾಲವಿಲ್ಲ. ರಾಜ್ಯದಲ್ಲಿ ಬಿಜೆಪಿ ಮುಗಿದು ಹೋಗಿಲ್ಲ ನಾವು ಹೋರಾಟ ಮಾಡುತ್ತೇವೆ. 66 ಜನ ನಾವು ವಿರೋಧ ಪಕ್ಷದಲ್ಲಿದ್ದೇವೆ. ಐದು ವರ್ಷ ಅವರು ಏನ್ಮಾಡಿದ್ರು ನಡೆಯುತ್ತೆ ಅನ್ನೋದಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.
ಕಾಂಗ್ರೆಸ್ ಬಂದ ಮೇಲೆ ದೇಶ ದ್ರೋಹಿ ಚಟುವಟಿಕೆಗಳು ಹೆಚ್ಚಾಗುತ್ತವೆ. ನಾವು ಸಹ ರಾಜ್ಯದಲ್ಲಿ ಆಡಳಿತ ನಡೆಸಿದ್ದೇವೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು 135 ಅಲ್ಲ 200 ಬಂದ್ರು ಏನು ಬೇಕಾದರೂ ಆಗಬಹುದು. ಮಹಾರಾಷ್ಟ್ರದಲ್ಲಿ ಏನಾಯಿತು ಎನ್ನುವುದು ಗೊತ್ತಲ್ವ. ಇವರ ದುರಹಂಕಾರ ಭ್ರಷ್ಟಾಚಾರ, ಗೂಂಡಾಗಿರಿ ಲೋಕಸಭೆವರೆಗೂ ಗ್ಯಾರಂಟಿ ಕಾರ್ಡ್ ಇರುತ್ತೆ ನಂತರ ವಾರಂಟಿ ಮುಗಿಯುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ರಾಜ್ಯದ ಜನರಿಗೆ ಸುಳ್ಳು ಭರವಸೆಗಳನ್ನ ನೀಡಿದ್ದಾರೆ. ಕಾಂಗ್ರೆಸ್ಸಿನವರು ಗ್ಯಾರಂಟಿ ಕಾರ್ಡಗಳಿಂದ ಆರಿಸಿ ಬಂದಿದ್ದಾರೆ. ಶೀಘ್ರದಲ್ಲೇ ಗ್ಯಾರಂಟಿ ಕಾರ್ಡಗಳು ಮುಗಿಯುತ್ತವೆ. 2024ಕ್ಕೆ ಮತ್ತೆ ನಮ್ಮ ನಾಯಕ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ದೇಶ ಹಿಂದೂ ದೇಶವಾಗಲಿದೆ. ಇಂತಹ ನೂರು ಡಿ ಕೆ ಶಿವಕುಮಾರ್ಗಳು ಬಂದ್ರು ಏನು ಆಗೋದಿಲ್ಲ. ಡಿ.ಕೆ. ಶಿವಕುಮಾರ್ ಮೇಕೆದಾಟು ಹೋರಾಟ ಮಾಡಿ ಜೈಲಿಗೆ ಹೋಗಿದ್ರಾ? ಕಾಂಗ್ರೆಸ್ನವರು ಏನು ಬಹಳ ಸಾಚಾ ಇದ್ದಾರ? ಇದೀಗ ಪೊಲೀಸ್ ಠಾಣೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ನೋಡೋಣ ಎಂದು ಡಿ ಕೆ ಶಿವಕುಮಾಒರ್ ವಿರುದ್ದ ವಾಗ್ದಾಳಿ ನಡೆಸಿದರು.











Click it and Unblock the Notifications