ನಾನೇನು ಮಾಡಲಿ ಬಡವನಯ್ಯ; ಜಾಸ್ತಿ ಮಾತನಾಡಿದ್ರೆ ಜೈಲಿಗೆ ಹಾಕ್ತಾರೆ, so ಸುಮ್ನಿದ್ಬುಡಿ: ಯತ್ನಾಳ್

ಬೆಂಗಳೂರು,ಅಕ್ಟೋಬರ್‌ 27: ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಪ್ರಕರಣ ಸದ್ದು ಹೆಚ್ಚಾಗಿದ್ದು, ಹುಲಿ ಉಗುರು ಧರಿಸಿದ್ದ ಲಕ್ಷ್ಮಿ ಹೆಬ್ಬಾಳ್ಕರ್‌ ಮಗ ಮತ್ತು ಅಳಿಯನ‌ ವಿರುದ್ಧವೂ ದೂರು ದಾಖಲಾಗ್ಲಿಲ್ಲ,ಹೊಲಗೇರಿ" ಪದ ಉಪಯೋಗಿಸಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧವೂ ದೂರು ದಾಖಲಾಗ್ಲಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಉಳ್ಳವರು ಕಾನೂನನ್ನೇ ಕೊಂಡುಕೊಳ್ಳುವರಯ್ಯ. ನಾನೇನು ಮಾಡಲಿ ಬಡವನಯ್ಯ, ಸುಳ್ಳು‌ಕೇಸು ಹಾಕಿಸಿಕೊಳ್ಳುವೆನಯ್ಯ. ವರ್ಷಾನುಗಟ್ಟಲೆ ಕೋರ್ಟಿಗೆ ಅಲೆಯುವೆನಯ್ಯ. ಇದುವೇ ನಮ್ಮ ಪ್ರಜಾಪ್ರಭುತ್ವದ‌ ಪರಿ, ಜಾಸ್ತಿ ಮಾತನಾಡಿದ್ರೆ ಜೈಲಿಗೆ ಹಾಕ್ತಾರೆ, so ಸುಮ್ನಿದ್ಬುಡಿ ಎಂದು ಕುಟುಕಿದ್ದಾರೆ.

Basanagouda Patil Yatnal Lashed Out At Congress Government

Incidentally or co-incidentally ಅರಣ್ಯ ಕಾಯ್ದೆ ಕೇವಲ ಹಿಂದೂಗಳಿಗಷ್ಟೇ ಅನ್ವಯವಾಗುತ್ತಾ?? ದರ್ಗಾಗಳಲ್ಲಿರುವ ನವಿಲುಗರಿಗಳನ್ನು ವಶಪಡಿಸಿಕೊಳ್ಳಲು ಇಲಾಖೆಗೆ ಸಾಧ್ಯವಿಲ್ಲವೇ?
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಳಿಯ ಹಾಗು ಪುತ್ರ ಹಾಕಿರುವ ಹುಲಿಯ ಪೆಂಡೆಂಟ್ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ? ನಿರುಪದ್ರವಿಗಳಾದ ಅರ್ಚಕರು, ರೈತರನ್ನು ಜೈಲಿಗಟ್ಟಿದ ಹುಮ್ಮಸ್ಸು ಪ್ರಭಾವಿ ಮಕ್ಕಳು, ಅಳಿಯಂದರ ಮೇಲಿಲ್ಲ ಯಾಕೆ? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನಿಮ್ಮ ಘೋಷಣೆಗಳು ಭಾಷಣಕ್ಕೆ ಸೀಮಿತವಾದವು ಪ್ರತಿಪಕ್ಷದ ಶಾಸಕರು ಇರುವ ಕ್ಷೇತ್ರಗಳಿಗೆ ಶೂನ್ಯ ಅನುದಾನ, ನಿಮ್ಮ ಪಕ್ಷದ ಶಾಸಕರು
ಇರುವ ಕ್ಷೇತ್ರಗಳಿಗೆ ಭರಪೂರ ಅನುದಾನ. ಈ ರೀತಿ ಮಲತಾಯಿ ಧೋರಣೆ ಖಂಡನೀಯ. ಶಾಸಕರಿಗೆ ನೀಡುವ ಅನುದಾನ ರಾಜಕೀಯ ರಹಿತವಾಗಿರಬೇಕು, just & equitable ಆಗಿರಬೇಕು. ಈ ರೀತಿಯಾದ ಪಕ್ಷಪಾತ ರಾಜಕಾರಣವನ್ನು ಜನ ತಿರಸ್ಕಾರ ಮಾಡುವುದು ನಿಶ್ಚಿತ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+